ಅಂಗನವಾಡಿ ಕಾರ್ಯಕರ್ತೆಯಿಂದ ಅನಾಥರಿಗೆ ಮಾಸ್ಕ್ ವಿತರಣೆ

ಕಾರಟಗಿ : ಎರಡನೆಯ ಹಂತದಲ್ಲಿ ತೀವ್ರವಾಗಿ ಹರಡುತ್ತಿರುವ ಕರೋನವೈರಸ್ ನಿಂದ ಅನೇಕರು ಮೃತಪಟ್ಟಿದ್ದಾರೆ, ಆದರೂ ಇನ್ನೂ ಕೆಲವರು ನಿರ್ಲಕ್ಷಿಸುತ್ತಿದ್ದಾರೆ, ಕೆಲ ಬಡವರು ನಿರ್ಗತಿಕರು ಸುರಕ್ಷಾ ಸಾಧನಗಳನ್ನು ಕೊಳ್ಳಲು ಕಾಸಿಲ್ಲದೆ ಸುಮ್ಮನಿದ್ದಾರೆ. ಇಂಥವರಿಗಾಗಿಯೇ ಸಮೀಪದ ನವಲಿ ತಾಂಡದ ಹನುಮಮ್ಮ ಗಂಡ ಮಂಜುನಾಥ ಎನ್ನುವ ಅಂಗನವಾಡಿ ಕಾರ್ಯಕರ್ತೆಯೂ ಕಾರಟಗಿ ಮತ್ತು ಗಂಗಾವತಿ ನಗರದಲ್ಲಿನ ಅನಾಥರಿಗೆ, ಭಿಕ್ಷುಕರಿಗೆ, ಬುದ್ಧಿಮಾಂದ್ಯರಿಗೆ ಮಾಸ್ಕ್ ವಿತರಿಸಿ ಜಾಗೃತಿ ಬಗ್ಗೆ ತಿಳಿ ಹೇಳಿದರು.ನಂತರ ಅಂಗನವಾಡಿ ಕಾರ್ಯಕರ್ತೆ ಹನುಮಮ್ಮ ಮಾತನಾಡಿ ಎರಡನೇ ಹಂತದಲ್ಲಿ ದೇಶಾದ್ಯಂತ ಕರೋನವೈರಸ್ ಹರಡುತ್ತಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅನೇಕ ಸಾವು-ನೋವುಗಳು ಸಂಭವಿಸುತ್ತಿವೆ. ಪ್ರಮುಖವಾಗಿ ಬೀದಿ ಬದಿಯಲ್ಲಿ ಜೀವನ ಮಾಡುವ ನಿರ್ಗತಿಕರಿಗೆ, ಭಿಕ್ಷುಕರಿಗೆ, ಬುದ್ಧಿಮಾಂಧ್ಯರಾಗಿ ಅಲೆಯುತ್ತಿರುವ ಜನರಿಗೆ ಯಾವುದೇ ತೊಂದರೆ ಉಂಟಾಗಬಾರದು ಅಂತವರಿಗೆ ಯಾರೂ ಇರದೆ ಹೊರಗಿನ ಜೀವನ ಸಾಗಿಸುತ್ತಿರುತ್ತಾರೆ, ಅಂತ ಜನಗಳ ಸುರಕ್ಷತೆ ಉದ್ದೇಶವನ್ನಿಟ್ಟುಕೊಂಡು ಹುಡುಕಿಕೊಂಡು ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!