ಅಂಗವಿಕಲತೆರಿಗೆ ಅನುಕಂಪ ಬೇಡಾ, ಅವಕಾಶ ನೀಡಿ: ಪೂರ್ಣಿಮಾ ಏಳುಭಾವಿ

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ “ಪುನರ್ವಸತಿ ಮತ್ತು ಇತರ ಸೇವೆಗಳು “ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಮಹಿಳಾ ಅಭಿವೃದ್ಧಿ ನಿಗಮಬೆಂಗಳೂರನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಪ್ಪಳ ಮೂಲದ ಶ್ರೀಮತಿ ಪೂರ್ಣಿಮಾ ಏಳುಭಾವಿ ಮಾತನಾಡಿ ವಿಕಲಚೇತನರು ಹಲವಾರು ಸವಾಲುಗಳನ್ನು ಹೆದರಿಸುತ್ತಾರೆ. ಆ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿಗಣಿಸಿದರೆ ಅವರು ಸಾಧನೆ ಮಾಡುವಲ್ಲಿ ಯಶಸ್ವಿಯಾ ಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರಿದು ಮಾತಾನಾಡಿ ವಿಕಲಚೇತನರು ಎಂದರೆ ಮೂರನೇ ದರ್ಜೆಯ ವ್ಯಕ್ತಿಗಳಲ್ಲ, ಆಕಸ್ಮಿಕವೋ ಅಥವಾ ಪ್ರಕೃತಿ ದತ್ತವಾಗಿಯೂ ಅಂಗವಿಕಲರಾಗುತ್ತಾರೆ. ಹಾಗಾಗಿ ಸಮಾಜ ಅವರನ್ನು ನೋಡಿಕೊಳ್ಳುವ ರೀತಿ ಬದಲಾಗಬೇಕು.
ವಿಕಲಚೇತನರನ್ನು ನೋಡಿಕೊಳ್ಳು ವಲ್ಲಿ ಕುಟುಂಬದ ಪಾತ್ರ ಬಹು ಮುಖ್ಯ ಇದರ ಜೊತೆಗೆ ಸರಕಾರದ ನೆರವು ಅಗತ್ಯ ವಾಗಿದೆ. ಜೀವನದಲ್ಲಿನ ಹತ್ತು ಹಲವು ಸಮಸ್ಯೆಗಳನ್ನು, ಸವಾಲುಗಳನ್ನು ಮೆಟ್ಟಿನಿಲ್ಲಲು ವಿಕಲಚೇತನರು ಆತ್ಮ ಬಲವನ್ನು ಬೆಳೆಸಿಕೊಳ್ಳಬೇಕು.. ಅಂದಾಗ ಮಾತ್ರಏನಾದರೂ ಸಾಧನೆ ಮಾಡಲು ಸಾಧ್ಯ ವಾಗುತ್ತದೆ. ನಾನು ಕೂಡ ಹಲವಾರು ಸವಾಲುಗಳನ್ನು ಎದುರಿಸಿ ಇವತ್ತು ಒಂದು ಹುದ್ದೆಯಲ್ಲಿ ಇದ್ದು,ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜಕಾರ್ಯ ವಿಭಾಗದ ಉಪನ್ಯಾಸ ಕರಾದ ಶಿವನಗೌಡ ಪೊಲೀಸ್ ಪಾಟೀಲ್ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಅವಶ್ಯವಾಗಿವೆ ನಾವು ಬೋಧನಾ ಸಮಯದಲ್ಲಿ ವಿಕಲಚೇತನರ ಸವಾಲುಗಳು ವಿಕಲಚೇತನರ ಅವಕಾಶಗಳು ವಿಕಲಚೇತನ ಇರುವ ನಿಯಮಗಳು ವಿಕಲಚೇತನರ ಇರುವಂತ ಸೌಲಭ್ಯಗಳ ಬಗ್ಗೆ ಎಷ್ಟೇ ಮಾಹಿತಿ ನೀಡಿದರು ಸೌಲಭ್ಯವನ್ನು ಪಡೆದು ಬೆಳೆದಿರುವಂತಹ ಒಬ್ಬ ಸಾಧಕರ ಕರೆಸಿ ಅವರಿಂದ ಅವರ ಅನುಭವವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆಂದುಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ ಚನ್ನಬಸವ ಸಾಹುಕಾರ ಮಾತನಾಡಿ ಇಂತಹ ವ್ಯಕ್ತಿಗಳಿಂದ ನಾವು ಸ್ಪೂರ್ತಿಯನ್ನು ಪಡೆದುಕೊಳ್ಳುವ ಅಗತ್ಯ ಇದೆಯೆಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಯಲಿ ಹಾಗೂ ಬಿ. ಕಾಂ ಅಂತಿಮ ವಿದ್ಯಾರ್ಥಿಗಳು ಇದ್ದರು.ಪ್ರಾರ್ಥನೆಯನ್ನು ಪೂಜಾ, ಸ್ವಾಗತವನ್ನು ವಂದನಾ ನಿರೂಪಣೆ ಉಪನ್ಯಾಸಕ ಮಾರುತಿ ಗುರಿಕಾರ ನೆರವೇರಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!