ಅಂತಿಮ ಕನ್ನಡ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆ


ಕೊಪ್ಪಳ. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ. ಎ ಅಂತಿಮ ವರ್ಷದ ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ಯೋಜನಾ ಕಾರ್ಯದ ಮೌಖಿಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಐದಾರು ವಿದ್ಯಾರ್ಥಿಗಳ ಒಂದು ತಂಡವನ್ನು ರಚಿಸಿ ವಿಷಯಗಳನ್ನು ಹಂಚಿಕೆ ಮಾಡಲಾಗಿತ್ತು. ಆ ಎಲ್ಲ ವಿಷಯಾಧಾರಿತವಾಗಿ ಇಂದು ಮೌಖಿಕ ಪರೀಕ್ಷೆ ನಡೆಸಲಾಯಿತು. ಪ್ರಾಚಾರ್ಯ ಮಾರುತೇಶ್ ಬಿ ಕನ್ನಡ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಭಾವಿಕಟ್ಟಿ, ಕನ್ನಡ ಪ್ರಾಧ್ಯಾಪಕರಾದ ಡಾ ಭಾಗ್ಯಜ್ಯೋತಿ ಯಮನೂರಪ್ಪ , ಬಸವರಾಜಪಟ್ಟಣ ಶೆಟ್ಟರ್ ಅತಿಥಿ ಉಪನ್ಯಾಸಕರಾದ ಡಾ. ಪ್ರಕಾಶ ಬಳ್ಳಾರಿ ಡಾ. ತುಕಾರಾಂ ನಾಯ್ಕ ಮೌಖಿಕ ಪರೀಕ್ಷೆಯನ್ನುಜರುಗಿಸಿದರು. 2) ಅಂತಿಮ ಅರ್ಥಶಾಸ್ತ್ರ ಪದವಿ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆ
ಕೊಪ್ಪಳ. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲ ಬಿ. ಎ ಅಂತಿಮ ವರ್ಷದ ಅರ್ಥ ಶಾಸ್ತ್ರ ವಿದ್ಯಾರ್ಥಿಗಳಿಗೆ ಸಹ ಯೋಜನಾ ಕಾರ್ಯದ ಮೌಖಿಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಐದಾರು ವಿದ್ಯಾರ್ಥಿಗಳ ಒಂದು ತಂಡವನ್ನು ರಚಿಸಿ ವಿಷಯಗಳನ್ನು ಹಂಚಲಾಗಿತ್ತು ಆ ಎಲ್ಲ ವಿದ್ಯಾರ್ಥಿಗಳಿಗೆ ಇಂದು ಮೌಖಿಕ ಪರೀಕ್ಷೆ ನಡೆಸಲಾಯಿತು. ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸಂತೋಷಿ , ಅತಿಥಿ ಉಪನ್ಯಾಸಕ ಡಾ. ಸಣ್ಣ ದೇವೇಂದ್ರಸ್ವಾಮಿ ಮೌಖಿಕ ಪರೀಕ್ಷೆಯನ್ನು ಜರುಗಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!