ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಶಾಸಕರ ಎದುರೆ ಗ್ರಾಮಸ್ಥರ ಆಕ್ರೋಶ

ಕಾರಟಗಿ : ತಾಲೂಕಿನ ನಂದಿಹಳ್ಳಿ ಕಕ್ಕರಗೋಳ ಗ್ರಾಮದ ನದಿ ಮರಳು ದಂಧೆ ಯು ಹೆಚ್ಚಾಗಿದ್ದು ಕೂಡಲೇ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಶಾಸಕ ಬಸವರಾಜ ದಡೇಸುಗೂರು ವಾಹನ ನಿಲ್ಲಿಸಿ ಶುಕ್ರವಾರದಂದು ಕಕ್ಕರಗೋಳ ಗ್ರಾಮದಲ್ಲಿ ಮನವಿ ಮಾಡಿಕೊಂಡರು.
ವಿವಿಧ ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಅಕ್ರಮವಾಗಿ ಗ್ರಾಮದ ಅನೇಕರು ಮರಳು ದಂಧೆ ಮಾಡುತ್ತಿದ್ದು ಕೂಡಲೇ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿಕೊಂಡರು. ಅಲ್ಲದೆ ಇಷ್ಟು ದಿನಗಳ ಲೇಬರ್ ಇಟ್ಟುಕೊಂಡು ಮರಳು ಸಾಗಿಸಲಾಗುತ್ತಿತ್ತು ಈಗ ಜೆಸಿಬಿಯನ್ನು ಬಳಸಿ ಮರಳು ಸಾಗಿಸಲಾಗುತ್ತಿದೆ, ಅದನ್ನು ವಿರೋಧಿಸಿದ ಕಾರಣಕ್ಕೆ ಮರಳು ತುಂಬುವ ವರ ಹಾಗೂ ಮಾರಾಟಗಾರರ ನಡುವೆ ಗಲಾಟೆಗಳಾಗಿವೆ. ಇಂಥ ಸಮಸ್ಯೆ ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದರು. ಶಾಸಕರು ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಂದಿಹಳ್ಳಿ ಕಕ್ಕರಗೋಳ ಮಾರ್ಗವಾಗಿ ಚಲಿಸುತ್ತಿರುವಾಗ ಗ್ರಾಮಸ್ಥರು ಸಮಸ್ಯೆಯನ್ನು ವ್ಯಕ್ತಪಡಿಸಿದರು. ನಂತರ ಮರಳು ತುಂಬುವ ವರ ಹಾಗೂ ಮಾರಾಟ ಮಾಡುವವರ ನಡುವೆ ಮಾತಿನ ಚಕಮಕಿ ಚಕಮಕಿ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಸಮಯದಲ್ಲಿ ಪಿಎಸ್‌ಐ ಎಲ್.ಅಗ್ನಿ ಹಾಗೂ ಸಿಪಿಐ ಉದಯರವಿ ಜನರ ಗುಂಪುಗಳನ್ನು ಚದುರಿಸಿ ಶಾಂತ ಗೊಳಿಸಿದರು.
ನಂತರ ಘಟನೆಯ ಕುರಿತು ನಂದಿಹಳ್ಳಿ ಗ್ರಾಮಸ್ಥ ಶೇಖರಪ್ಪ ಮಾತನಾಡಿ ಮೊದಲು ಗ್ರಾಮಸ್ಥರನ್ನು ಇಟ್ಟುಕೊಂಡು ಮರಳು ತುಂಬಿಸುತ್ತಿದ್ದರು. ಈಗ ಜೆಸಿಬಿ ಇಟ್ಟುಕೊಂಡು ಟಿಪ್ಪರ್, ಟ್ಯಾಕ್ಟರ್ ಗಳಿಗೆ ಮರಳು ತುಂಬಿಸಿ ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮರಳನ್ನು ಸಾಗಿಸುತ್ತಿದ್ದಾರೆ, ಮರಳು ತುಂಬುತ್ತಿದ್ದವರು ಇದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆಗಳಾಗಿ ಮರಳು ತುಂಬುವ ಮೇಲೆ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಎಷ್ಟೇ ಕಡಿವಾಣ ಹಾಕಿದರು ರಾಜಕೀಯ ಶಕ್ತಿಯಿಂದ ಮರಳು ಸಾಗಾಟ ಹದ್ದುಮೀರಿ ನಡೆಯುತ್ತಿದೆ. ತಹಸಿಲ್ದಾರರಿಗೂ ಮರಳು ದಂಧೆಯನ್ನು ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೇ ಶಾಸಕರ ಹಿಂಬಲಕರಾದ ಕಕ್ಕರಗೋಳ ಗ್ರಾಮದ ಮಲ್ಲನಗೌಡ ಎಂಬುವವರು ಮರಳು ಮಾರಾಟಗಾರರ ಪರ ನಿಂತು, ಮರಳು ತುಂಬುವ ಅವರ ಮೇಲೆ ಕೇಸ್ ದಾಖಲಾಗಲು ಕಾರಣರಾಗಿದ್ದರು. ಶಾಸಕರಿಗೆ ಮನವಿ ಮಾಡಿಕೊಳ್ಳುವಾಗ ಅವರು ಸಹ ಸ್ಥಳದಲ್ಲಿ ಮರಳು ತುಂಬುವವರೆಗೂ ಅವರಿಗೂ ಮಾತಿನ ಚಕಮಕಿ ವಿಕೋಪಕ್ಕೆ ಏರುತ್ತಿದ್ದಂತೆ ಪೊಲೀಸರು ಅದನ್ನು ಶಾಂತಿ ಗೊಳಿಸಿದರು ಎಂದು ತಿಳಿಸಿದ್ದಾರೆ. ಅಲ್ಲದೆ ಶಾಸಕರ ಎದುರೇ ಗಲಾಟೆ ವಿಕೋಪಕ್ಕೆರಿದ್ದು, ಸಂಪೂರ್ಣ ಕಡಿವಾಣ ಹಾಕಿದರೆ ಯಾವುದೇ ಸಮಸ್ಯೆ ಮರುಕಳಿಸುವುದಿಲ್ಲ. ರಾಜಕೀಯ ಶಕ್ತಿಯೋ.? ಅಧಿಕಾರಿಗಳ ನಿರ್ಲಕ್ಷವೂ.? ಒಟ್ಟಿನಲ್ಲಿ ಕಾನೂನು ಬಾಹಿರವಾಗಿ ಮರಳು ದಂಧೆಯನ್ನು ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!