ಅಮಾಯಕರ ಮೇಲಿನ ಪೊಲೀಸರ ದೌರ್ಜನ್ಯ ಖಂಡನಾರ್ಹ: ಅಬ್ದುಲ್ ಖಯುಮ್

ಕೊಪ್ಪಳ:ದ.ಕ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಮಾಯಕರ ಮೇಲಿನ ಹಲ್ಲೆ ಮತ್ತು ಹಿಂಸಾಚಾರ ನೋಡಿದರೆ, ಸಂಘ ಪರಿವಾರಕ್ಕೆ ಮತ್ತು ಪೋಲೀಸರಿಗೆ ಒಂದೇ ಅಜೆಂಡಾ ಇದೆಯೇ ಎಂದೆನಿಸುತ್ತಿದೆ.ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತರ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಮೇಲೆ ನಡೆದಿರುವ ಹಿಂಸಾಚಾರ ಕ್ರೌರ್ಯದ ವಿರುದ್ಧ ಇಂದು ೧೫ ಡಿಸೆಂಬರ್ ೨೦೨೧ ಕೊಪ್ಪಳದ ಅಶೋಕ್ ವೃತ್ತದಲ್ಲಿ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ವತಿಯಿಂದ ಪ್ರತಿಭಟಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕೊಪ್ಪಳ ತಾಲೂಕ ಅಧ್ಯಕ್ಷರು ಅಬ್ದುಲ್ ಖಯುಮ್ ಮಾತನಾಡಿ ಸುಳ್ಳು ಕೇಸಿನಲ್ಲಿ ಅಮಾಯಕರನ್ನು ಸಿಲುಕಿಸುವ ಪೊಲೀಸರ ಕ್ರಮ ಖಂಡನಾರ್ಹ ಅಮಾಯಕರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆಗೊಳಿಸಬೇಕು. ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತುಪಡಿಸಬೇಕೆಂದು ಆಗ್ರಹಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!