ಅರವಿಂದ್ ಲಿಂಬಾವಳಿಯಿಂದ ನೂತನ ಅರೋಗ್ಯ ಕೇಂದ್ರ ಉದ್ಘಾಟನೆ

ಅಖಿಲ ವಾಣಿ ಸುದ್ದಿ

ಗಂಗಾವತಿ: ಆನೆಗೊಂದಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಅರಣ್ಯ ಸಚಿವ ಅರವಿಂದ್ ಲಿಂಬಾವಳಿ
ಉದ್ಘಾಟಿಸಿ ಮಾತನಾಡಿದ ಆವರು ಈ ಒಂದು ಆಸ್ಪತ್ರೆಯಲ್ಲಿ ಅನೇಕ ವೈದ್ಯರು ಸರಿಯಾದ ರೀತಿಯಲ್ಲಿ ಆರೋಗ್ಯ ದೃಷ್ಟಿಯಲ್ಲಿ ಕಾರ್ಯ ಮಾಡಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಚಿಕಿತ್ಸೆ ನೀಡಬೇಕು ಎಂದರು.
ಕರೋನ ವೈರಸ್‌ನ ಎರಡನೇ ಅಲೆ ಪ್ರಾರಂಭವಾಗಿದೆ ಆದಕಾರಣ ಸಾರ್ವಜನಿಕರು ಹೊರಗಡೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೋಂಡು ಹೋಗಬೇಕು ಹಾಗೆ ಸ್ಯಾನಿಟೇಜರ್ ಮತ್ತು ಸಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ರೋಗಿಗಳ ಜೊತೆಗೆ ಚನ್ನಾಗಿ ವರ್ತನೆಮಾಡಿ ಏಕೆಂದರೆ ವೈದ್ಯರು ಚನ್ನಾಗಿ ಮಾತನಾಡಿದರೆ ಸಾಕು ರೋಗದಿಂದ ಬೇಗನೆ ಗುಣಮುಖರಾಗುತ್ತಾರೆ ಎಂದು ವೈದ್ಯರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ತಾ.ಪಂ.ಅಧ್ಯಕ್ಷರಾದ ಮಹಮ್ಮದ್ ರಪಿ ಗ್ರಾ.ಪಂ.ಅಧ್ಯಕ್ಷರಾದ ಕೆ.ತಿಮ್ಮಪ್ಪ ಬಾಳೇಕಾಯಿ ಗ್ರಾ.ಪಂ.ಉಪಾಧ್ಯಕ್ಷರಾದ ಸುಶೀಲಾಬಾಯಿ ತಾ.ಪಂ.ಸದಸ್ಯರಾದ ಲತಾ ಹೊನ್ನಪ್ಪ ಕೃಷ್ಣದೇವರಯದ ಕುಟುಂಬದವರು ಸಂಗಾಪೂರ ಗ್ರಾ.ಪಂ.ಅಧ್ಯಕ್ಷರಾದ ಹರೀಶ ಡಾ.ಸಂತೋಷ ಮಾ.ಜಿ.ಪಂ.ಸದಸ್ಯರಾದ ಸಿದ್ದರಾಮಸ್ವಾಮಿ ಹೆಚ್.ಸಿ.ಯಾದವ್ ಗೌರೀಶ ಬಾಗೋಡಿ ಸೇರಿದಂತೆ ಇತ್ತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!