ಅಸ್ಸಾಂ ನಾಗರಿಕರ ಮೇಲಿನ ಪೊಲೀಸ್ ದಾಳಿ ಖಂಡಿಸಿ ಪ್ರತಿಭಟನೆ

ಕೊಪ್ಪಳ: ಅಸ್ಸಾಮಿನ ಅಮಾಯಕ ನಾಗರಿಕರ ಮೇಲೆ ಪೊಲೀಸ್ ದಾಳಿ ಖಂಡನೀಯವಾಗಿದೆ. ರಾಜ್ಯ ಸರಕಾರವು ಬಲವಂತವಾಗಿ ನಾಗರಿಕರನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಮುಂದಾದ ಪರಿಣಾಮ ಇಬ್ಬರು ಅಮಾಯಕ ನಾಗರಿಕರು ಹತ್ಯೆಗೀಡಾಗಿದ್ದರು ಇದನ್ನು ವಿರೋಧಿಸಿ ಸೋಲಿಡಾರಿಟಿಯುತ್ ಮೂವ್‌ಮೆಂಟ್ ಮತ್ತು ವಿವಿಧ ಸಂಘಟನೆಗಳಿಂದ ನಗರದ ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟಿಸಿ ತಹಶೀಲ್ದಾರ ಮುಖಾಂತರ ಗೃಹ ಸಚಿವ ಹಾಗೂ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದ್ದು ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಯಬೇಕು.ಜನಾಂಗೀಯ ಮತ್ತು ಕೋಮು ವಿಭಜನೆಯ ಲಾಭವನ್ನು ಪಡೆಯಲು ಯತ್ನಿಸುವ ಅಸ್ಸಾಮ್ ಮುಖ್ಯಮಂತ್ರಿ ಹೀಮಾಂತ ಬಿಸ್ವಾ ಶರ್ಮಾ ರಾಜೀನಾಮೆ ನೀಡಬೇಕು. ಪೊಲೀಸರು ಯಾವುದೇ ಎಚ್ಚರಿಕೆ ನೀಡದೆ, ಮಕ್ಕಳು ಮತ್ತು ಮಹಿಳೆಯರು ಸೇರಿ ಸಾವಿರಾರು ನಾಗರೀಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.ಲಾಠಿ ಮತ್ತು ಬಂದೂಕು ಹೊಂದಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ಅಟ್ಟಾಡಿಸಿಕೊಂಡು ಹೊಡೆದು, ಗುಂಡು ಹಾರಿಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಇದು ಅತ್ಯಂತ ಅಮಾನವೀಯ ಕೃತ್ಯವಾಗಿದೆ.ಕಳೆದ ಕೆಲವು ದಿನಗಳ ಹಿಂದೆ ಅಸ್ಸಾಂ ಸರಕಾರ ಅಕ್ರಮ ಒತ್ತುವರಿ ಎಂದು ಆರೋಪಿಸಿ, ಯಾವುದೇ ಪುನರ್ವಸತಿ ಯೋಜನೆಯನ್ನುಕಲ್ಪಿಸದೆ ಸುಮಾರು ೯೦೦ಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸಿದ್ದು, ಕನಿ? ೨೦,೦೦೦ ಜನರು ನಿರ್ವಸಿತರಾಗಿದ್ದಾರೆ.ದರಾಂಗ್ ಜಿಲ್ಲೆಯ ಗೋರುಖುಟಿ,ಸಿಪಾಜಪುರ ಪ್ರದೇಶಗಳಲ್ಲಿ ಒಕ್ಕಲೆಬ್ಬಿಸಿದ ಸುಮಾರು ೭೭,೦೦೦ ಬಿಘಾ ಭೂಮಿಯನ್ನು ಕೃಷಿಗಾಗಿ ಬಳಸಿಕೊಳ್ಳುವುದೆಂದು ಸರ್ಕಾರ ಹೇಳುತ್ತಿದೆ.
ವಿಪರ್ಯಾಸವೆಂದರೆ ಈ ಸಂಬಂಧ ಪ್ರಕರಣಇನ್ನೂ ನ್ಯಾಯಾಲಯದಲ್ಲಿದೆ.ಸ್ಥಳೀಯ ಜನರನ್ನು ಒಕ್ಕಲೆಬ್ಬಿಸಿ ಯಾವಅಭಿವೃದ್ಧಿಯನ್ನುಅಸ್ಸಾಂ ಸರಕಾರ ಮಾಡಲು ಹೊರಟಿದೆ?ಈ ತೆರವುಕಾರ್ಯಾಚರಣೆನ್ನು ಈ ಕೂಡಲೇ ನಿಲ್ಲಿಸಬೇಕು, ಗುಂಡೇಟಿಗೆ ಬಲಿಯಾದ ಸಂತ್ರಸ್ತರಿಗೆಕೂಡಲೇ ಪರಿಹಾರವನ್ನುಕೊಡಬೇಕು ಹಾಗೂ ಈ ಪೋಲೀಸ್‌ದೌರ್ಜನ್ಯದ ವಿರುದ್ಧ ನ್ಯಾಯಾಂಗತನಿಖೆ ನಡೆಯಬೇಕುತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೋಲಿಡಾರಿಟಿಯುತ್ ಮೂವ್‌ಮೆಂಟ್ ಅಗ್ರಹಿಸುತ್ತದೆ.
ಉತ್ತರ ಪ್ರದೇಶದ ಶಾಂತಿಯುತ ಅಮಾಯಕ ರೈತರ ಹತ್ಯಖಂಡಿಸಿ ಲಖಿಂ ಕೇರಿಯಲ್ಲಿಕೇಂದ್ರ ಸಚಿವ ಅಜಯ್‌ಕುಮಾರ್ ಮಿಶ್ರಾಅವರ ಮಗ ಕಾರು ಹತ್ತಿಸಿ ಪ್ರತಿಭಟನಾ ನಿರತರೈತರನ್ನು ಹತ್ಯೆ ಮಾಡಿರುವಘಟನೆ ಪ್ರಜಾಪ್ರಭುತ್ವದ ಬುನಾದಿಯನ್ನೇಅಲ್ಲಾಡಿಸುವಂತಹ ಕೃತ್ಯವಾಗಿದೆ.ಈ ಘಟನೆಯಲ್ಲಿರೈತರೂ ಸೇರಿ ಒಟ್ಟು ಎಂಟು ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಈ ದು?ತ್ಯವನ್ನು ಸಾಲಿಡಾರಿಟಿಯೂತ್ ಮೂವ್‌ಮೆಂಟ್ ಕರ್ನಾಟಕ ಉಗ್ರವಾಗಿ ಖಂಡಿಸುತ್ತದೆ ಎಂದು ಸಾಲಿಡಾರಿಟಿಯೂತ್ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷ ಗೌಸ್ ಪಟೇಲ್ ಹೇಳಿದರು.
ಈ ಪ್ರತಿಭಟನೆಯಲ್ಲಿ ಸೋಲಿಡಾರಿಟಿಯೂತ್ ಮೂವ್‌ಮೆಂಟ್ ಕೊಪ್ಪಳ ಅಧ್ಯಕ್ಷರಾದ ಮುಹಮ್ಮದ್‌ಗೌಸ್ ಪಾಷಾ ಪಟೇಲ್, ಉಪಾಧ್ಯಕ್ಷರಾದಎಜಾಜ್‌ಅಹ್ಮದ್ ಶೇಖ್, ಕಾರ್ಯದರ್ಶಿಯಾದ ಜಕ್ರೀಯಾಖಾನ್, ವೆಲ್ಫೇರ್ ಪಾರ್ಟಿಅಫ್‌ಇಂಡಿಯಾಜಿಲ್ಲಾಅಧ್ಯಕ್ಷರಾದ ಸೈಯ್ಯದ್ ಆದಿಲ್ ಪಟೇಲ್, ಎಸ್.ಐ.ಓ ಸಂಘಟನೆಜಿಲ್ಲಾಅಧ್ಯಕ್ಷರಾದಇಲಿಯಾಸ್ ನಾಲಬಂದ್, ತಾಲೂಕಅಧ್ಯಕ್ಷರಾದ ಮುಹ್ಮದ್‌ಅಫ್ರೋಜ್, ಜಮಾಆತೆಇಸ್ಲಾಮಿ ಹಿಂದ್‌ನಕಾರ್ಯಕರ್ತರಾದ ಮುಹ್ಮದ್‌ಇಸ್ಹಾಕ್ ಫುಜೇಲ್ ಮತ್ತುಅಸಗರ್‌ಖಾನ್, ಹೋರಾಟಗಾರರಾದ ಸಲೀಂ ಮಂಡಲಗೇರಿ ಮತ್ತು ಸೋಲಿಡಾರಿಟಿಎಸ್‌ಐಓಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!