ಆತ್ಮಗೌರವ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ : ಆಲೋಕ್ ಕುಮಾರ್

ಕೊಪ್ಪಳ : ಪೊಲೀಸ್ ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಎಲ್ಲ ಪ್ರಶಿಕ್ಷಣಾರ್ಥಿಗಳು ಆತ್ಮಗೌರವ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದು ಬೆಂಗಳೂರಿನ ಕೆ.ಎಸ್.ಆರ್.ಪಿ ರಾಜ್ಯ ಹೆಚ್ಚುವರಿ ಮಹಾನಿರ್ದೇಶಕ ಆಲೋಕ್ ಕುಮಾರ್ ಹೇಳಿದರು.
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ (ಸೆ.14) ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವತಿಯಿಂದ ಆಯೋಜಿಸಲಾದ 23ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ಪ್ರಶಿಕ್ಷಣಾರ್ಥಿಗಳು ಉತ್ತಮ ಕೆಲಸ ಮಾಡಿ, ಕಾಟಚಾರಕ್ಕಾಗಿ ಕೆಲಸ ಮಾಡಬೇಡಿ. ಇಲ್ಲಿಯೂ ಒಳ್ಳೆಯ ವೇತನ ಇದೆ. ನಿಮಗೆ ನೀಡುವ ಕೆಲಸವನ್ನು ನಿಷ್ಠೆಯಿಂದ, ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಶ್ರೇಣಿ ಅಂಕಗಳಿAದ ಹೆಸರು ಮಾಡಲು ಆಗುವುದಿಲ್ಲ.  ತಾವು ಮಾಡುವ ಒಳ್ಳೆಯ ಕೆಲಸದಿಂದ ಹೆಸರು ಮಾಡಬಹುದು.  ಮದ್ಯಪಾನ ಮತ್ತು ಧೂಮಪಾನದಂತಹ ದುಷ್ಚಟಗಳಿಂದ ದೂರವಿರಬೇಕು.  ನಮ್ಮ ಸಿಬ್ಬಂದಿ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾವು ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗುವುದಲ್ಲದೇ ನಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮೆಲ್ಲರ ವೃತ್ತಿ ಜೀವನದಲ್ಲಿ, ಈ ನಿರ್ಗಮನ ಪಥ ಸಂಚಲನವನ್ನು ಮುಗಿಸಿ ಹೊರಬರುತ್ತಿರುವ ತಮಗೆ ವೈಯಕ್ತಿಕ ಜೀವನದಲ್ಲಿ ಒಳ್ಳೆಯದಾಗಲಿ. ಯಾವ ದೊಡ್ಡ ಅಧಿಕಾರಿಗಳಾಗಲಿ ಪಥಸಂಚಲನದ ಮೂಲಕವೇ ಪೊಲೀಸ್ ವೃತ್ತಿ ಜೀವನಕ್ಕೆ ಕಾಲಿಡುತ್ತಾರೆ.  ನಾನೂ ಕೂಡಾ ಪಥಸಂಚಲನ ಮಾಡಿಯೇ ವೃತ್ತಿ ಜೀವನಕ್ಕೆ ಕಾಲಿಟ್ಟು, ಪ್ರಸ್ತುತ ಈ ಉನ್ನತ ಹುದ್ದೆಯಲ್ಲಿದ್ದೇನೆ. ಇಂದಿನಿAದ ಸಮವಸ್ತç ಧರಿಸಿ, ವೃತ್ತಿ ಜೀವನಕ್ಕೆ ಕಾಲಿಡುತ್ತಿದ್ದೀರಿ. ನೀವು ಕೂಡಾ ಹೆಮ್ಮೆಯಿಂದ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು.
ಪೊಲೀಸ್ ಇಲಾಖೆಗೆ ಹಾಗೂ ನಿಮಗೆ ಕೆಟ್ಟ ಹೆಸರು ಬರುವಂತಹ ಯಾವುದೇ ಕೆಲಸ ಮಾಡಬಾರದು. ಒಳ್ಳೆಯ ಕೆಲಸ ಮಾಡಿ ಇಲಾಖೆಗೆ ಹೆಸರು ತರಬೇಕು.  ಈ ಪ್ರತಿಜ್ಞಾವಿಧಿ ಕಾಟಚಾರದ ಪ್ರತಿಜ್ಞೆ ಆಗಬಾರದು. ನೀವು ಪ್ರತಿಜ್ಞೆ ಮಾಡಿದ ಎಲ್ಲವನ್ನೂ ನಿಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ನೀಡಬೇಕು. ಅವರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಮಾಡಬೇಕು. ಈಗಾಗಲೇ ಬೆಂಗಳೂರಿನಲ್ಲಿ ಅತ್ಮ ರಕ್ಷಣೆ ತರಬೇತಿ ಕಾರ್ಯಕ್ರಮ ಮಾಡಿದ್ದೇವೆ. ಹಾಗಾಗಿ ಇಲ್ಲಿಯೂ ಕೂಡಾ  ಶಾಲೆ-ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ತರಬೇತಿ ನೀಡಬೇಕು. ಕಲಿಕೆಯು ತರಬೇತಿಯ ನಂತರ ಮುಗಿಯುವುದಿಲ್ಲ.  ಅದು ಜೀವನದಲ್ಲಿ ನಿರಂತರವಾಗಿರಬೇಕು.  ತಮಗೆ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುವ ಅವಕಾಶ ಇದೆ. ಹಾಗಾಗಿ ನಿಮಗೆ ಆಸಕ್ತಿ ಇರುವ ಘಟಕಗಳಲ್ಲಿ ತರಬೇತಿ ಪಡೆಯಿರಿ. ಎಲ್ಲ ಕಡೆಗಳಲ್ಲಿ ತರಬೇತಿ ಶಾಲೆಗಳು ಇವೆ ಎಂದರು.
ಪ್ರತಿಜ್ಞಾವಿಧಿ, ಪಥ ಸಂಚಲನ ಹಾಗೂ ಬಹುಮಾನ ವಿತರಣೆ;
  ಶಸ್ತç ವಂದನೆ, ಕವಾಯತು ಪರಿವೀಕ್ಷಣೆ, ಪಥ ಸಂಚಲನ, ರಾಷ್ಟçಧ್ವಜ ಹಾಗೂ ಪೊಲೀಸ್ ಧ್ವಜಗಳ ಆಗಮನ, ನಿರ್ಗಮನ ಕಾರ್ಯಕ್ರಮಗಳು ವಿಶೇಷವಾಗಿ ಜರುಗಿದ್ದು, 151 ಪ್ರಶಿಕ್ಷಣಾರ್ಥಿಗಳನ್ನೊಳಗೊಂಡ 08 ತುಕಡಿಗಳು ಸತತ 9 ತಿಂಗಳ ತರಬೇತಿ ನಂತರ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದ್ದವು.  ಮುನಿರಾಬಾದ್ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ರಾಮಕೃಷ್ಣ  ಮುದ್ದೇಪಾಲ ಅವರು 23ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.  ಕಾರ್ಯಕ್ರಮದಲ್ಲಿ ವಾರ್ತಾ ಪತ್ರಿಕೆ ಬಿಡುಗಡೆ ಮಾಡಲಾಯಿತು.  ಅಲ್ಲದೇ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಹೊರಾಂಗಣ, ಒಳಾಂಗಣ ಹಾಗೂ ಗುಂಡು ಹಾರಿಸುವ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಮತ್ತು ಸರ್ವೋತ್ತಮ ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!