ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ: ತಾಲೂಕಿನ ಗುಂಡಮ್ಮ ಕ್ಯಾಂಪನಲ್ಲಿ ಇರುವ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಶಾಸಕ ಪರಣ್ಣ ಮುನವಳಿ ಲಾಕ್‌ಡೌನ್ ಸಮಯದಲ್ಲಿ ಊಟದ ಸಮಸ್ಯೆ ಎದುರಿಸುತ್ತಿರುವ ಬಡವರಿಗೆ,ನಿರ್ಗತಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ವಿತರಿಲಾಗುವುದು ಎಂದು ಹೇಳಿದರು.
ನಂತರ ಮಾತನಾಡಿದ ಅವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನರು ಉಚಿತವಾಗಿ ಊಟ ಅಥವಾ ಅಹಾರದ ಪೊಟ್ಟಣಗಳನ್ನು ಪಡೆಯಬೇಕು ಮತ್ತು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟಕ್ಕೆ ರೈಸ್ ಬಾತ್ ನೀಡಲಾಗುತ್ತಿದೆ ಎಂದರು.
ಪ್ರತಿದಿನ ೧೫೦೦ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ ಇದರ ಸದುಪಯೋಗ ಪಡೆದಕೊಳ್ಳಿ.ಮತ್ತು ನಗರದ ಹಲವಾರು ಕಡೆ ವಾಸವಾಗಿರುವ ನಿರ್ಗತಿಕರು ಬಡವರು, ಕೂಲಿ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ.
ಕೋವೀಡ್ ವೈರಸ್ ಎಲ್ಲಿವರಿಗೊ ಇರುತ್ತದೆ ಅಲ್ಲಿವರಿಗೆ ಈ ವ್ಯವಸ್ಥೆ ಇರುತ್ತದೆ. ಮತ್ತು ನಮ್ಮ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ತಾಲ್ಲೂಕಾಡಳಿತದ ಆದೇಶದ ಮೇರೆಗೆ ಇಂದಿರಾ ಕ್ಯಾಂಟೀನ್ ಆರಂಭಿಸಿಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಯುಕ್ತ ಅರವಿಂದ ಜಮಖಂಡಿ ಯಾರೂ ಉಚಿತ ಆಹಾರದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಉಚಿತ ಆಹಾರ ಪಡೆಯಲು ಆಧಾರ್ ಕಾರ್ಡ್, ಮತದಾರರ ಚೀಟಿ ಅಥವಾ ಯಾವುದಾದರೂ ಗುರುತಿನ ಚೀಟಿ ತೋರಿರಸುವುದನ್ನು ಬೇಕಿಲ್ಲ ಎಂದರು ಕರ್ನಾಟಕ ರಾಜ್ಯದ ಮೂಲದವರಿಗೆ ಎಲ್ಲಾ ಇಂದಿರಾ ಕ್ಯಾಂಟೀನ್ ಗುತ್ತಿದಾರರಿಗೆ ವಹಿಸಲಾಗಿದೆ,ಇದನ್ನು ನಮ್ಮ ನಗರಸಭೆ ಅಧಿಕಾರಿಗಳಿಗೆ ಸುರಕ್ಷಿತವಾಗಿ ನೋಡಿಕೊಳ್ಳಲು ಆದೇಶಿಸಲಾಗಿದೆ.ಈ ಸಂದರ್ಭದಲ್ಲಿ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರಸಭೆ ವಿರೋಧ ಪಕ್ಷದ ಸದಸ್ಯ ನವೀನ ಪಾಟೀಲ, ವಾಸುದೇವ ನವಲಿ,ಹುಲಿಗಿಮ್ಮ ಕಿರಿಕಿರಿ,ಪರಶುರಾಮ ಮಡ್ಡೇರ,ನಗರಸಭೆ ಅಧಿಕಾರಿಗಳು ಬಸವರಾಜ್ ಚಲುವಾದಿ,ದತ್ತಾತ್ರೇಯ ಹೆಗಡೆ, ನಾಗರಾಜ್, ಲಕ್ಷ್ಮಣ್, ತಹಶಿಲ್ದಾರರ ಯು ನಾಗರಾಜ್, ಕಂದಾಯ ಅಧಿಕಾರಿ ಮಂಜುನಾಥ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!