ಈದ್ಮಿಲಾದ್ ಹಬ್ಬ ವಿಶಿಷ್ಟ ಆಚರಣೆ : ೨೪೦ ಜನರಿಗೆ ಕರೋನಾ ವಾಕ್ಸಿನೇಷನ್
ಕೊಪ್ಪಳ : ಭಾಗ್ಯನಗರದ ಮುಸ್ಲಿಂ ಜಾಮಿಯಾ ಮಸೀದ್ ಪಂಚಕಮಿಟಿಯ ವತಿಯಿಂದ ಈದ್ ಮಿಲಾದುನ್ನಬಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಜಾಮೀಯಾ ಮಸ್ಜಿದ್ ಆವರಣದಲ್ಲಿ ಕರೋನಾ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗ್ಯನಗರದ ಸಾರ್ವಜನಿಕರು ಭಾಗವಹಿಸಿ ೨೪೦ಕ್ಕೂ ಹೆಚ್ಚು ಜನ ಲಸಿಕೆಯನ್ನು ಪಡೆದುಕೊಂಡರು. ಲಸಿಕೆ ಕಾರ್ಯಕ್ರಮದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಂಚ ಕಮಿಟಿಯಿಂದ ಗೌರವಿಸಲಾಯಿತು.ಡಾ.ಪ್ರಶಾಂತ ತಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಪಂಚಕಮಿಟಿ ಅದ್ಯಕ್ಷರಾದ ಇಬ್ರಾಹಿಂ ಸಾಬ ಬಿಸರಳ್ಳಿ, ಪ.ಪಂ ಸದಸ್ಯ ಹೊನ್ನೂರಸಾಬ ಬೈರಾಪೂರ, ಉಪಾದ್ಯಕ್ಷರಾದ ಮೌಲಾಹುಸೇನ ಹಣಗಿ, ಮೆಹಬೂಬಸಾಬ ಬಳಿಗಾರ, ರಶೀದಸಾಬ, ಹಾಜಿ ಕುತ್ಬುದ್ದೀನಸಾಬ, ಬಾಬಾ ಪಟೇಲ್, ಶರೀಪಸಾಬ ಪಿಂಜಾರ , ಮೆಹಬೂಬ ಹಣಗಿ, ಮರ್ದಾನಸಾಬ ಹಿರೆಮಸೂತಿ, ನೂರಬಾಷಾ , ಕಬೀರಸಾಬ ಬೈರಾಪೂರ, ಹಾಗೂ ನೌಜವಾನ್ ಕಮಿಟಿಯ
ಅದ್ಯಕ್ಷ ಆಸೀಪ ಬಳಿಗಾರ, ಉಪಾಧ್ಯಕ್ಷರಾದ ಮೆಹಬೂಬಸಾಬ ಕೊತ್ವಾಲ, ಕಾರ್ಯದರ್ಶಿ ಶಾಕೀರ್ ನದಾಪ, ಖಜಾಂಚಿ ಮಹ್ಮದ್ ರಫಿ ಬೈರಾಪೂರ, ಸಹ ಕಾರ್ಯದರ್ಶಿ ರಾಜಾಬಕ್ಷಿ ನೂರಬಾಷಾ, ಸದಸ್ಯರಾದ ಸಲ್ಮಾನ್ ಪಿಂಜಾರ್, ಮಹ್ಮದ್ ರಫಿ ಪಿಂಜಾರ್, ಮೌಲಾಸಾಬ ಯರಡೋಣಿ, ಮಹ್ಮದ ಸಿರಾಜ್ ಹುಸೇನ್, ದೌಲತ್ ಪಾಷಾ ಪಟೇಲ್, ರಾಜಾಬಕ್ಷಿ ಪಾಯಪ್ಪನವರ, ಮೆಹಬೂಬ ಬಿಸರಳ್ಳಿ, ಅಜೀತ್ ಗುಳೇದಗುಡ್ಡ, ಅಷ್ಪಕ್ ಹಣಗಿ, ಅಬ್ದುಲಸಾಬ ಒಂಟಿಕುದರಿ, ಅನ್ವರಪಾಷಾ ಮುದಗಲ್, ಶರೀಪ ಓಜನಹಳ್ಳಿ, ರಾಜಾಸಾಬ ಕವಲೂರ, ಮುರ್ತುಜಾ ಕೊತ್ವಾಲ್ ಬಾಷಾಸಾಬ ಹ್ಯಾಟಿ, ಮೆಹಬೂಬ ಆದೋನಿ ಸೇರಿದಂತೆ ಇತರರು ಉಪಸ್ಥಿತರಿದ್ದರು