ಈರುಳ್ಳಿಯಲ್ಲಿ ಬರುವ ಪ್ರಮುಖ ರೋಗಗಳು ಹಾಗೂ ಅವುಗಳ ನಿರ್ವಹಣಾ ಕ್ರಮಗಳು


1. ಕಾಡಿಗೆ ರೋಗ ಕಪ್ಪನೆಯ ಚುಕ್ಕೆಗಳು ಕಾಣಿಸಿಕೊಂಡು ತದನಂತರ ಗೆರೆಗಳನ್ನು ಎಲೆಗಳ ಗಡ್ಡೆಯಲ್ಲಿ ಕಾಣಿಸಿ ಕೊಳ್ಳುತ್ತವೆ. ನಂತರ ಗಡ್ಡೆ ಬಿರುಕುಗೊಂಡು ಕಪ್ಪನೆಯ ಬೂದುಬಣ್ಣದ ಶಿಲೀಂಧ್ರವನ್ನು ಕಾಣಬಹುದಾಗಿದೆ.
ಇದಕ್ಕೆ ಪರಿಹಾರ ಬೀಜವನ್ನು ಕ್ಯಾಪ್ಟನ್ 2ಗ್ರಾಂ ಪ್ರತಿ ಕಿಲೋಗ್ರಾಂ ಬೀಜಕ್ಕೆ ಉಪಚರಿಸಿ ಬಿತ್ತಿದ 3ವಾರಗಳ ನಂತರ 2ಗ್ರಾಂ ಮಾಂಕೊಜೆಬ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. (ಸಸಿಮಡಿಗಳಲ್ಲಿ ಅಥವಾ ಬೆಳೆ ಪ್ರದೇಶದಲ್ಲಿ ಬಿತ್ತನೆಯಾದ ಅವರು 6ವಾರಗಳ ನಂತರ ಮೇಲೆ ಸೂಚಿಸಲಾದ ಸಿಂಪರಣೆಯನ್ನು ಪುನಾರವರ್ತಿತ ಮಾಡಬೇಕು ಪ್ರತಿ ಹೆಕ್ಟೇರ್ ಗೆ 360 ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಬೇಕು).

2.ನೇರಳೆ ಎಲೆ ಮಚ್ಚೆ ರೋಗ ಕೊಪ್ಪಳ ಜಿಲ್ಲೆಯ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಅತಿ ಹೆಚ್ಚಾಗಿ ಈ ರೋಗ ಕಂಡುಬಂದಿದ್ದು ಈ ರೋಗದ ಲಕ್ಷಣ ಮೊದಲಿಗೆ ಬಿಳಿ ಭಾಗದಿಂದ ಕೂಡಿದ್ದು ನಂತರ ನೇರಳೆ ಭಾಗಕ್ಕೆ ಪರಿವರ್ತನೆಗೊಂಡು ಆಮೇಲೆ ಎಲೆಗಳು ಒಣಗುತ್ತವೆ. ಇದಕ್ಕೆ ಪರಿಹಾರ ಈರುಳ್ಳಿಯ ಎಲೆ ಮಚ್ಚೆ ರೋಗ ವನ್ನು ನಿರ್ವಹಣೆ ಮಾಡಲು 1ಮಿ ಲೀ ಇಪ್ರೊಬೆನಫಾಸ್ 48EC or 2.5gm ಕ್ಯೂಪ್ರಸ ಆಕ್ಸೈಡನ್ನು 1ಲೀಟರ್ ನೀರಿನಲ್ಲಿ ಬೆರೆಸಿ ಹದಿನೈದು ದಿನಗಳ ಅಂತರದಲ್ಲಿ 2ಬಾರಿ ಸಿಂಪರಣೆ ಮಾಡಬೇಕು. ಅಥವಾ 2ಗ್ರಾಂ ಮ್ಯಾಂಕೋಜೆಬ್ 75WP ಅಥವಾ 1ಮಿ ಲೀ ಡೈಫೆನಾಕೋನಾಜೋಲ್ ಕರಗಿಸಿ ನೇರಳೆ ಮಚ್ಚೆ ರೋಗ ಕಂಡಾಗ ಸಿಂಪಡಿಸಬೇಕು. ಹದಿನೈದು ದಿವಸಗಳ ನಂತರ ಒಂದು ಬಾರಿ ಪ್ರತಿ ಲೀಟರ್ ನೀರಿನಲ್ಲಿ 5ಗ್ರಾಂ ಸುಡೋಮೋನಾಸ್ ಫ್ಲುರೋಸೆನ್ಸ ನ್ನು ಕರಗಿಸಿ ಸಿಂಪರಣೆ ಮಾಡಬೇಕು. ರೋಗಲಕ್ಷಣಗಳು ಮತ್ತೆ ಮತ್ತೆ ಕಂಡುಬಂದಲ್ಲಿ ಈ ಮೇಲಿನ ರೋಗನಾಶಕಗಳನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿದರೆ ಈ ರೋಗವನ್ನು ನಿಯಂತ್ರಿಸಬಹುದಾಗಿದೆ.
3. ಆಲ್ಟೆರ್ ನೇರಿಯ ಬ್ಲೈಟ್ ಇದರ ಹಾನಿಯ ಲಕ್ಷಣ ಎಲೆಯ ಮೇಲೆ ಮೊದಲಿಗೆ ತಣ್ಣನೆಯ ತಗ್ಗಾದ ಬಿಳಿ ಮಚ್ಚೆಗಳು ಕಂಡು ನಂತರ ನೇರಳೆ ಬಣ್ಣಕ್ಕೆ ತಿರುಗಿ ಆಮೇಲೆ ದೊಡ್ಡದಾಗಿ ಎಲೆಗಳು ಒಣಗುತ್ತವೆ. ಇದರ ನಿರ್ವಹಣಾ ಕ್ರಮ ಮೇಟಿ ರಾಮ್ 55+ ಪೈರಾಕ್ಲೋಸ್ಟ್ರಬಿನ್ 5% WG. 2ಗ್ರಾಂ ಪ್ರತಿ ಲೀಟರ್ ನಂತೆ ಸಿಂಪಡಿಸಬೇಕು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!