ಎಗ್ಗಿಲ್ಲದಂತೆ ಸಾಗಿದೆ ಅಕ್ರಮ ಕಲ್ಲು ಗಣಿಗಾರಿಕೆ ಅಧಿಕಾರಗಳು ಮೌನ
ಅಖಿಲ ವಾಣಿ ಸುದ್ದಿ
ಗಂಗಾವತಿ: ಗಂಗಾವತಿ ತಾಲೂಕು ಕೇಂದ್ರವಾಗಿರುವ ಗಂಗಾವತಿ ನಗದದಿಂದ ೫-೧೦ ಕಿ.ಮೀ ದೂರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದಂತೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಗಂಗಾವತಿನಗರದಲ್ಲಿ ಅಕ್ರಮವಾಗಿ ಕಲ್ಲುಗಳು ಮಾರಟ ಜೋರಾಗಿ ನಡೆಯುತ್ತಿದ್ದರು ಕೂಡ
ಅಧಿಕಾರಿಗಳು ಮಾತ್ರ ಮೌನವಾಗಿದ್ದರೆ.
ಯಾವುದೇ ಅಕ್ರಮ ಗಣಿಗಾರಿಕೆ ಮಾಡುವುದು ಕಾನೂನು ಬಾಹಿರ ಎಂದು ತಿಳಿದಿದ್ದರು ಕಾನೂನು ಮೀರಿ ನಗರದಿಂದ ಐದು ಕಿ.ಮೀ ಅಥವಾ ,೬ ಕೀ.ಮೀ ದೂರದಲ್ಲಿ ಇರುವ ಮಲ್ಲಪೂರು,ಸಂಗಾಪೂರ, ಆನೆಗೊಂದಿ, ವ್ಯಾಪ್ತಿಯಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ನಡೆಸುವಂತೆ ಇಲ್ಲ ಎಂದು ಹಿಂದಿನ ಅಧಿಕಾರಿಗಳು ಮಾಲೀ ಕರಿಗೆ,ಗಣಿಗಾರಿಕೆ ಮಾಡು ವವರಿಗೆ ಎಚ್ಚರಿಕೆ ನೀಡಿದರು.
ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ಕಳೆದ ತಿಂಗಳಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಅಧಿಕಾರಗಳು ಮಾತ್ರ ಮೌನವಾಗಿದ್ದರೆ.ಪ್ರತಿದಿನ ಅಕ್ರಮ ಕಲ್ಲುಗಳನ್ನು ಟ್ರಾಕ್ಟರ್ ಮೂಲಕ ಸಾಗಿಸುತ್ತಿದ್ದರು ಇಲ್ಲಿವರಿಗೆ ಯಾಕೆ ಕ್ರಮವನ್ನು ಕೈಗೊಂಡಿಲ್ಲ ಎಂಬದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಎಗ್ಗಿಲ್ಲದೆ ಅಕ್ರಮ ಕಲ್ಲುಗಳ ಸಾಗಾಟ ಮಾಡುತ್ತಿದ್ದರು ಇಲ್ಲಿವರಿಗೊ ಯಾಕೆ ಕ್ರಮವನ್ನು ಕೈಗೊಂಡಿಲ್ಲ.ಅಥವಾ ಅಧಿಕಾರಿಗಳೆ ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರೆಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.