ಎಸ್.ಎ. ನಿಂಗೋಜಿ ಶಿಕ್ಷಣ ಸಂಸ್ಥೆಯಿಂದ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯಾದ ಉದ್ಘಾಟನ ಕಾರ್ಯಕ್ರಮ

ಕೊಪ್ಪಳ:ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಉಪನ್ಯಾಸ ಕಾರ್ಯಕ್ರಮ ಮತ್ತು ನೂತನ ಎಸ್.ಎ.ನಿಂಗೋಜಿ ಮಹಿಳಾ ಪ್ರಥಮ ದರ್ಜೆ ಕಲಾ,ವಾಣಿಜ್ಯ ಮತ್ತು ವಿಜ್ಙಾನ ಮಹಾವಿದ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ಜರುಗಲಿದೆ ಎಂದು ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎ.ನಿಂಗೋಜಿ ಅವರು ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವವರು,ಈ ಕಾರ್ಯಕ್ರಮದ ಉದ್ಘಾಟನೆ ಪ್ರೋ.ಬಿ.ಕೆ.ತುಳಸಿಮಾಲಾ ಉಪ ಕುಲಪತಿ,ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೋಶ್ರೀ ರತ್ನಮ್ಮ ಅಂ ನಿಂಗೋಜಿ, ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಿ.ಇ.ಓ. ಫೌಜಿಯಾ ತರನ್ನುಮ್ ಮತ್ತು ಡಿ,ವೈ.ಎಸ್.ಪಿ. ಗೀತಾ ಬೇನಹಾಳ ವಹಿಸಲಿದ್ದಾರೆ ಎಂದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಕಾನೂನು ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ಇದರ ಸಾನಿದ್ಯವನ್ನು ಶ್ರೀ ಚೈತನ್ಯಾನಂದ ಸ್ವಾಮಿಗಳು ವಹಿಸುವವರು, ಉಪನ್ಯಾಕರಾಗಿ ಪ್ರೋ.ತೇಜಸ್ವಿ ಕಟ್ಟಿಮನಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳು ಬೇಕು ಮತ್ತು ಪ್ರತಿ ವರ್ಷದಂತೆ ಈ ವರ್ಷವೂ ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃಧ್ದಿ ಟ್ರಸ್ಟ್ ವತಿಯಿಂದ ಕೊಡಲ್ಪಡುವ ಆರ್ಥಿಕವಾಗಿ ಹಿಂದುಳಿದ ಯುವ ವಕೀಲರಿಗೆ ಕೊಡಮಾಡುವ ಸಹಾಯಧನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ವಿಧ್ಯಾರ್ಥಿಗಳನ್ನು ಕರೆದು ಕೋಂಡು ಹೋಗಲು ವಾಹನದ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು ಈ ಸಂಧರ್ಭದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!