ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ಗೌರವಿಸುತ್ತದೆ : ಇಂಜಿನಿಯರ್ ಪಂಪಾಪತಿ ಹುಬ್ಬಳ್ಳಿ


ಕೊಪ್ಪಳ : ಪ್ರಪಂಚದಲ್ಲಿ ಹಲವಾರು ದೇಶಗಳು ಬೇರೆ ಬೇರೆ ದಿನಗಳಂದು ’ಇಂಜಿನಿಯರ್‌ಗಳ ದಿನ’ ವನ್ನು ಆಚರಿಸುತ್ತವೆ. ಹಾಗೆಯೇ ನಮ್ಮ ಭಾರತದಲ್ಲಿ ಸೆಪ್ಟೆಂಬರ್ ೧೫ ರಂದು ’ಅಭಿಯಂತರ ದಿನ’ ಆಚರಣೆ ಮಾಡಲಾಗುತ್ತದೆ. ಈ ವರ್ಷವು ’ಇಂಜಿನಿಯರ್ಸ್ ಡೇ’ ಅನ್ನು ಭಾರತದಲ್ಲಿ ಆಚರಣೆ ಮಾಡಲಾಗುತ್ತಿದೆ.
ಸ್ನೇಹಿತರೇ ಭಾರತದಲ್ಲಿ ’ಇಂಜಿನಿಯರ್‌ಗಳ ದಿನ’ವನ್ನು ದೇಶದ ಹೆಮ್ಮೆಯ ಮತ್ತು ಅತ್ಯುತ್ತಮ ಇಂಜಿನಿಯರ್ ಎನಿಸಿಕೊಂಡ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಹುಟ್ಟುಹಬ್ಬದ ಸ್ಮರಣಾರ್ಥ ಸೆಪ್ಟೆಂಬರ್ ೧೫ ರಂದು ಪ್ರತಿವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಜತೆಗೆ ಇವರ ಕೊಡುಗೆ, ಇವರು ಭಾರತೀಯ ಪ್ರಜೆಗಳಿಗೆ ನೀಡಿದ ಅತ್ಯುತ್ತಮ ಸಂದೇಶಗಳನ್ನು ನೆನೆಸಕೊಳ್ಳಲಾಗುತ್ತದೆ. ಹಾಗೆಯೇ ಇವರಂತೆಯೇ ಇಂಜಿನಿಯರ್‌ಗಳು ಭಾರತಕ್ಕೆ ಸೇವೆ ನೀಡಬೇಕು ಎಂಬುದು ನಮ್ಮೆಲ್ಲ ಅಭಿಲಾಷೆಗಳು ಹೌದು ಎಂದು ’ಇಂಜಿನಿಯರ್‌ಗಳ ಸಂಘದ ಹಿರಿಯ ಮಾರ್ಗದರ್ಶಿಗಳಾದ ’ಇಂಜಿನಿಯರ್ ಪಂಪಾಪತಿ ಹುಬ್ಬಳ್ಳಿ ಅವರು ಹೇಳಿದರು.
ಅವರು ಕಿನ್ನಾಳ ರಸ್ತೆಯ ಪ್ರಗತಿ ನಗರದಲ್ಲಿರುವ ಇಂಜಿನಿಯರ್ ಮಹೇಶ್ ರವರ ವಿಷನ್ ಡೌಲಫರ್ಸ್ ಆಫೀಸಿನಲ್ಲಿ ’ಅಭಿಯಂತರ ದಿನ’ ಆಚರಿಸಿ ಮಾತನಾಡುತ್ತಿದ್ದರು. ಒಂದು ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಮೊದಲು ಆ ಕೆಲಸವನ್ನು ಪ್ರೀತಿಸಬೇಕು.
ನಿಮ್ಮ ಯಶಸ್ಸು ಮತ್ತು ಸಂತೋಷ ನಿಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ. ನೀವೇ ಯೋಚಿಸಿ ಮತ್ತು ಜೀವನವನ್ನು ರೂಪಿಸಿ ಕೊಳ್ಳಬೇಕು.
ಹೆಚ್ಚಿನ ಜ್ಞಾನ ಅಥವಾ ಕೌಶಲ್ಯ, ಸಾಮರ್ಥ್ಯ ಅಥವಾ ಮಹತ್ವಾಕಾಂಕ್ಷೆಯೊಂದಿಗೆ ಮಾಡುವ ಎಲ್ಲಾ ಕೆಲಸವೂ ಸಾಮಾನ್ಯವಾಗಿ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ. ಶ್ರೇಷ್ಠನಾದ ಪ್ರತಿಯೊಬ್ಬ ಮನುಷ್ಯನೂ ತನ್ನ ಸಾಧನೆಗೆ ನಿರಂತರ ಶ್ರಮವಹಿಸಿರುತ್ತಾನೆ.
ಹಣದಿಂದ ಖರೀದಿಸಬಹುದಾದ ಅಥವಾ ಅಳೆಯುವಂತಹದ್ದನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಸೇರಿಸಿದರೆ ಮಾತ್ರ ನಿಜವಾದ ಸೇವೆ ನೀಡಬಹುದು. ಶಿಸ್ತುಬದ್ಧ ರೀತಿಯ ಕಠಿಣ ಪರಿಶ್ರಮ ಹೆಚ್ಚಿನ ಸಂದರ್ಭಗಳಲ್ಲಿ ಕೆಲಸಗಾರನನ್ನು ಸದೃಢವಾಗಿರಿಸುತ್ತದೆ. ಹಣವಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ಗೌರವಿಸುತ್ತದೆ.ನಾವು ಸಮಕ್ಕೆ ಬಹಳ ಮಹತ್ವವನ್ನು ಕೊಡಬೇಕು ಇವು ಸರ್ ಎಂ ವಿಶ್ವೇಶ್ವರಯ್ಯ ನವರ ಆದರ್ಶಳಾಗಿದ್ದವು ಇವು ನಾವು ಸಹ ಆದರ್ಶವಾಗಿಟ್ಟುಕೊಂಡು ಕಾರ್ಯನಿರ್ವಹಿಸ ಬೇಕು ಎಂದು ಹೇಳಿದರು. ಕಾರ್ಯಕ್ರಮದ ನಂತರ ನೂತನ ಇಂಜಿನಿಯರ್‌ಗಳ ಸಂಘದ ಹೋಸ ಕಮೀಟಿಯನ್ನು ರಚಿಸಲಾಯಿತು. ಅದರಲ್ಲಿ ಗೌರಾಧ್ಯಕ್ಷರಾಗಿ ಇಂಜಿನಿಯರ್ ಮಹಾಂತೇಶ್ ಬಜಾರಮಠ, ಅಧ್ಯಕ್ಷರಾಗಿ ಇಂಜಿನಿಯರ್ ಚನ್ನಾಕೇಶವ, ಉಪಾಧ್ಯಕ್ಷರಾಗಿ ಇಂಜಿನಿಯರ್ ಪ್ರಮೋದ್ ಮುದಕವಿ, ಕಾರ್ಯದರ್ಶಿಯಾಗಿ ಇಂಜಿನಿಯರ್ ಖಾಲಿದ್, ಖಜಾಂಚಿಯಾಗಿ ಇಂಜಿನಿಯರ್ ಸಂಕೇತ್ ಓಜನಳ್ಳಿ, ಕಾರ್ಯಕ್ರಮದ ಸಂಚಾಕರಾಗಿ ಇಂಜಿನಿಯರ್ ಆಕಾಶ್ ಹುರಕಡ್ಲಿ, ಮಾಧ್ಯಮ ಪ್ರತಿನಿಧಿಯಾಗಿ ಇಂಜಿನಿಯರ್ ಮಹಮ್ಮದ್ ಕಲೀಮುಲ್ಲಾ ಖಾನ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ೩೩ ಜನ ಸದಸ್ಯರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!