ಕಣ್ಣುಗಳ ಬಗ್ಗೆ ಕಾಳಜಿ ಮತ್ತು ಸುರಕ್ಷತೆ ಬಹು ಮುಖ್ಯ: ಡಾ. ಅಂಜನಾ ಕುರಿ

ಕೊಪ್ಪಳ: ನಿಮ್ಮ ಕಣ್ಣುಗಳನ್ನು ಪ್ರೀತಿಸಿ ಅಂದರೆ ನಾವು ಯಾರಿಗೆ ಪ್ರೀತಿ ಮಾಡುತ್ತೇವೆಯೋ ಅಲ್ಲಿ ಕಾಳಜಿ ಹಾಗೂ ಸುರಕ್ಷತೆಯ ಪಾತ್ರ ಬಹು ಮುಖ್ಯವಾಗಿದೆ. ನಿಮ್ಮ ಕಣ್ಣುಗಳಿಗೆ ಪ್ರೀತಿಸಿ ಲವ್ ಯುವರ್ ಅಯ್ಸ್ ಎಂದು ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ಸಲಹೆಗಾರರಾದ ಡಾ|| ಅಂಜನಾ ಕುರಿ ಹೇಳಿದರು.
ಅವರು ಕೊಪ್ಪಳದಲ್ಲಿ ಬುಧುವಾರ ಬೆಳಿಗ್ಗೆ ಏರ್ಪಡಿಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾಧ್ಯಮದೊಂದಿಗೆ ಸಂವಾದ ಮಾತಾನಾಡಿದ ಅವರು ದಿ|| ೧೪ ದಂದು ವಿಶ್ವ ದೃಷ್ಠಿ ದಿನಾಚರಣೆ ಅಂಗವಾಗಿ ಕೊಪ್ಪಳದ ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಸೆವ್ ಚಾಟ್ಸ್‌ಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಮುಂದುವರೆದು ಮಾತಾನಾಡಿ ದೃಷ್ಠಿ ಕಣ್ಣಿಗೆ ನಾವು ಹೇಗೆ ಕೇರ್ ಮಾಡಬಹುದು ಸ್ವಯಂ ಹೇಗೆ ಪ[ರೀಕ್ಷಿಸಿಕೊಳ್ಳಬಹುದು ಮನೆಯಲ್ಲಿಯೇ ಕುಳಿತುಕೊಂಡು ನಮ್ಮ ಕಣ್ಣು ಸೆವ್ ಚಾಟ್ಸ್ ವಿತರಣೆ ಮಾಡಿ ನಮ್ಮ ಸಂಸ್ಥೆ ಸಾರ್ವಜನಿಕರ ಅನುಕೂಲಕ್ಕಾಗಿ ಒದಗಿಸಿದೆ. ಸಾರ್ವಜನಿಕರು ತಮ್ಮ ತಮ್ಮ ಕಣ್ಣುಗಳ ರಕ್ಷಣೆಗಾಗಿ ಕೆಲವು ವಿಧಾನಗಳನ್ನು ಅಳವಡಿಸಿಕೊಂಡು ತಮ್ಮ ಕಣ್ಣುಗಳ ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಅವರು ವಿಶ್ವ ದೃಷ್ಠಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಸಾಕಾಷ್ಟು ಬೆಳಕು ಇರುವ ಗೋಡೆಯ ಮೇಲೆ ಚಾಟನ್ನು ನೇತು ಹಾಕಿ ಹತ್ತು ಅಡಿ ದೂರದಲ್ಲಿ ಕುಳಿತು ತಮ್ಮ ಕಣ್ಣು ಪರಿಕ್ಷಿಸಿಕೊಳ್ಳಿ ನೀವು ಯಲ್ಲಿಯತನಕ ಸುಲಭವಾಗಿ ಓದುವಂತಹ ಸಾಲುಗಳನ್ನು ಪಟ್ಟಿ ಮಾಡಿ ನಂತರ ಎಡಗಣ್ಣನ್ನು ಮುಕ್ತವಾಗಿ ಬಲಗಣ್ಣನ್ನು ಹಸ್ತದಿಂದ ಮುಚ್ಚಿಕೊಂಡು ಈ ಪ್ರಕ್ರಿಯೆ ಪುನರಾವರ್ತಿಸಿ ಈಗಾಗಲೇ ಕನ್ನಡಕ ಬಳಿಸುತ್ತಿದ್ದರೆ ಅದನ್ನು ಉಪಯೋಗಿಸಿ ದೃಷ್ಠಿ ಪರೀಕ್ಷಿಸಿರಿ. ಕೊಟ್ಟಂತಹ ಚಾರ್ಟಗಳಲ್ಲಿ ಕೊನೆಯವರೆಗೂ ಎಲ್ಲಾ ಸಾಲುಗಳನ್ನು ಸುಲಭವಾಗಿ ಓದಿದರೆ ನಿಮ್ಮ ಕಣ್ಣ ದೃಷ್ಠಿ ಸರಿಯಿದೆ ಎಂದು ತಿಳಿಯಬಹುದು ಇಲ್ಲದಿದ್ದರೆ ಅದು ದೃಷ್ಠಿಯ ಸಮಸ್ಯ ಎಂದಾರ್ಥ ಹಾಗೂ ಇದನ್ನು ತಿಳಿಯಲು ಮತ್ತು ಚಿಕಿತ್ಸೆ ಪಡೆಯಲು ನೇತ್ರ ತಜ್ಞರ ಅಗತ್ಯ ಇದೆ ಎಂದು ತಿಳಿದುಕೊಳ್ಳಬೇಕು. ದೃಷ್ಠಿಯ ಅಂದಾಜು ಮಾಡಲು ಕೇಲವು ಸುಲಭವಾದ ಮಾಆರ್ಗವಾಗಿದೆ. ಯಾವುದೇ ವ್ಯಕ್ತಿ ಮನೆಯಲ್ಲಿ, ಕಛೇರಿಯಲ್ಲಿ, ಶಾಲೆಯಲ್ಲಿ ಉಪಯೀಗಿಸಬಾರದು ಎಂದು ಡಾ|| ಅಂಜನಾ ಕುರಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಸಾದಿಕ್ ಅಲಿ ಮತ್ತು ಸಂಸ್ಥೆಯ ಪಿಆರ್‌ಓ ಮಹೇಶರವರು ಪಾಲ್ಗೋಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!