ಕನಕಗಿರಿಯ ಶಾಸಕ ಬಸವರಾಜ ದಢೇಸುಗೂರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಕಾರಟಗಿ : ಕನಕಗಿರಿ ವಿಧಾನಸಭಾ ಕ್ಷೇತ್ರದ ಮನೆಮಗನಾಗಿ ಸೇವೆಯನ್ನು ಸಲ್ಲಿಸುತ್ತಿರು ಶಾಸಕರಾದ ಬಸವರಾಜ ದಢೇಸುಗೂರು ಅವರು ಕ್ಷೇತ್ರದ ಜನತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಿಷ್ಠೆಯಿಂದ ಶ್ರಮಿಸುತ್ತಿದ್ದಾರೆ. ದಢೆಸೂಗುರು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಕಾರಟಗಿ ತಾಲೂಕ ಪ್ರಧಾನ ಕಾರ್ಯದರ್ಶಿ ರಮೇಶ ತೊಂಡಿಹಾಳ ಪತ್ರಿಕೆಯ ಮೂಲಕ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕನಕಗಿರಿ ಕ್ಷೇತ್ರಯು ಎಸ್ಸಿ ಮೀಸಲು ಕ್ಷೇತ್ರವಾಗಿದ್ದು ಇಲ್ಲಿನ ದಲಿತ ಶಾಸಕರುಗಳಿಗೆ ಸರಿಯಾದ ಸ್ಥಾನ ಮಾನ ದೊರೆಯಬೇಕಿದೆ, ದಲಿತ ಶಾಸಕರಿಗೂ ಸಚಿವ ಸ್ಥಾನ ನೀಡಬೇಕಿದ್ದು, ಕೊಪ್ಪಳ ಜಿಲ್ಲೆಯಲ್ಲಿ ನೂತನ ತಾಲೂಕುಗಳಾದ ಕನಕಗಿರಿ ಮತ್ತು ಕಾರಟಗಿಯು ಅಭಿವೃದ್ಧಿ ಹೊಂದುತ್ತಿರುವ ತಾಲೂಕಗಳಾಗಿದ್ದು, ಅಭಿವೃದ್ಧಿ ಹಾಗೂ ಬೆಳವಣಿಗೆಯು ಶೀಘ್ರಗತದಲ್ಲಾಗಬೇಕಿದೆ. ಆದ್ದರಿಂದ ಸಚಿವಸ್ಥಾನವನ್ನು ಕನಕಗಿರಿ ಕ್ಷೇತ್ರಕ್ಕೆ ನೀಡಬೇಕು ಹಾಗೂ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕು. ಇಲ್ಲಿನ ಶಾಸಕರಾದ ಬಸವರಾಜ ದಢೆಸುಗೂರು ಅವರು ಬಿಜೆಪಿ ಪಕ್ಷದ ಬಲ ಸಂಘಟನೆಯನ್ನು ಮಾಡುತ್ತಾ ಪಕ್ಷದಲ್ಲಿ ನಿಷ್ಠೆಯಿಂದ, ಪ್ರಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ರೈತರಿಗೆ ಬೆನ್ನೆಲುಬಾಗಿ ಸಹಕರಿಸುತ್ತಿದ್ದಾರೆ, ರಾಜಕಾರಣದಲ್ಲಿ ಯುವ ಉತ್ಸಾಹಿಯಾಗಿ, ಜಿಲ್ಲಾ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಹಾಗೂ ನಿಷ್ಠೆಯಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕ್ಷೇತ್ರದಲ್ಲಿನ ಎಲ್ಲಾ ಸಮಾಜದ ಜನರನ್ನು, ಮುಖಂಡರನ್ನು, ಯುವಕರನ್ನು ಬಂಧುಗಳಂತೆ ಕಾಣುತ್ತಿದ್ದಾರೆ. ಕಛೇರಿಗೆ ಬರುವ ಸಾರ್ವಜನಿಕರಲ್ಲಿ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಕಷ್ಟಗಳನ್ನು ಸ್ಪಂದಿಸುವ ಗುಣ ಅವರದಾಗಿದೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡುವುದರಿಂದ ಕೊಪ್ಪಳ ಭಾಗ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ದಯಮಾಡಿ ನಮ್ಮ ಭಾಗದ ಅಭಿವೃದ್ಧಿ ಉದ್ದೇಶದಿಂದ ಜನರ ಮೇಲಿನ ಕಾಳಜಿ, ಪ್ರೀತಿಯ ಆಧಾರದ ಮೇಲೆ ಶ್ರೀ ಬಸವರಾಜ ದಢೇಸುಗೂರು ಅವರಿಗೆ ಸಚಿವ ಸ್ಥಾನವನ್ನು ನೀಡಿ ಜಿಲ್ಲೆಯ ಸೇವೆ ಮಾಡುವ ಅವಕಾಶವನ್ನು ನೀಡಬೇಕು ಎಂದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!