ಕರುಣೆಯ ನಡೆ ಆಹಾರ ಕಿಟ್ ವಿತರಣೆ


ಪೋತ್ನಾಳ: ದಿನಾಂಕ: 05.04.2021 ರಂದು ಸಂತ ಅನ್ನಾಸ್ ಸಂಸ್ಥೆ ಮಂಗಳೂರು ಇವರ ಸಂಯುಕ್ತಾಶ್ರದಲ್ಲಿ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ) ಪೋತ್ನಾಳ ಸಂಸ್ಥೆಯು ಕರುಣೆಯ ನಡೆ- ಕರುಣೆಯ ಕಿಟ್ ಎನ್ನುವ ವಾಕ್ಯದೊಂದಿಗೆ ಬಡವರಿಗೆ ಆಹಾರ ಕಿಟ್ ನೀಡುವ ಮೂಲಕ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬವನ್ನು ಅರ್ಥ ಗರ್ಬೀತವಾಗಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.  40 ದಿನಗಳಿಂದ ಪ್ರಭು ಯೇಸು ಕ್ರಿಸ್ತರ ಪಾಡು ಮರಣಗಳನ್ನು ಧ್ಯಾನಿಸುವ, ಉಪವಾಸ, ತ್ಯಾಗ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸುವ ಹಬ್ಬವೇ ಈ ಪಾಖ್ಸಕಾಲ ಅಥವಾ ತಪ್ಪಸ್ಸು ಕಾಲ.  ಈ ಹಬ್ಬ ಪ್ರತಿಯೊಬ್ಬ ಕಥೋಲಿಕ ಕ್ರೈಸ್ತರ ಮನಪರಿವರ್ತನೆಯ ಹಬ್ಬವಾಗಿದೆ.  ಇದರ ನಿಮಿತ್ತ  ವಂ.ಸ್ವಾಮಿ ಪೌಲ್ ಮೆಲ್ವಿನ್ ಸಂತ ಅನ್ನಾಸ್ ಸಂಸ್ಥೆ ಮಂಗಳೂರು “ದೇವರು ನೀಡಿದ ಎರಡು ಕೈಗಳಲ್ಲಿ ಒಂದು ನಮಗಾಗಿ, ಇನ್ನೊಂದು ಕಷ್ಟದಲ್ಲಿ ಇರುವವರಿಗಾಗಿ”  ಎನ್ನುವ ಧ್ಯೇಯದೊಂದಿಗೆ ನಡೆಸಿದ ಈ ಕಾಂiÀರ್iಕ್ರಮವು ಹಲವರ ಹಸಿವು ನೀಗಿಸಿದೆ.   ಜನರು ನೀಡಿದ ದಾನಗಳನ್ನು ಸಂಗ್ರಹಿಸಿ ಬಡಜನರಿಗೆ ಆಹಾರ ದಾನ್ಯಗಳನ್ನು ವಿತರಿಸಲು ಪೋತ್ನಾಳ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ) ಪೋತ್ನಾಳ ಇವರ ಮೂಲಕ ಅವುಗಳು ಬಡಜನರಿಗೆ ನೀಡಿ ಹಬ್ಬವನ್ನು  ಆಚರಿಸುತ್ತಿದ್ದಾರೆ. ಸುಮಾರು 200 ಜನರಿಗೆ ಅಹಾರ ಕಿಟ್ ವಿತರಿಸಲಾಯಿತು.  ಹಾಗೆಯೇ ಇಂದು ಡಾ!! ಬಾಬು ಜಗಜೀವನ ರಾಮ್ ಇವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.  ಈ ಸಂಧರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವಂ.ಸ್ವಾಮಿ. ಡಾ!! ಸತೀಶ್ ಫೆರ್ನಾಂಡಿಸ್ ಮತ್ತು ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ಜಯಶೀಲ ದೋತರಬಂಡಿ, ಶ್ರೀ ಚಾರ್ಲಿ ಉದ್ಬಾಳ್, ಶ್ರೀ ಆರೋಗ್ಯಪ್ಪ ದುಮತಿ, ಶ್ರೀಮತಿ ಜೆಸ್ಸಿಂತಾಮ್ಮ ಮುದ್ದನಗುಡಿ, ಕುಮಾರಿ ಮಮತಾ ಉಪಸ್ಥಿತರಿದ್ದರು.  

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!