ಕರೋನಾ ವಾರಿಯರ್ಸಗಳಿಗೆ ರಾಜ್ಯ ಮಟ್ಟದ ಸನ್ಮಾನ.

ಅಖಿಲ ವಾಣಿ ಸುದ್ದಿ
ಕಾರಟಗಿ : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೋಜಿತ (ಬಿಎಂಎಸ್) ಏಪ್ರಿಲ್ 3 2021ರ ಕೊರೋನ ವಾರಿಯರ್ಸ್ ಗೆ ಆರೋಗ್ಯ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕರೋನ 19 ಹಿನ್ನಲೆಯಲ್ಲಿ ಸತತ ಒಂದು ವರ್ಷಗಳ ಕಾಲ ನಿರಂತರವಾಗಿ ಹಗಲಿರುಳು ಶ್ರಮಿಸಿದ ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ಸನ್ಮಾನ ಮಾಡಲಾಯಿತು.ಈ ಕಾರ್ಯಕ್ರಮಕ್ಕೆ  ಸನ್ಮಾನ್ಯ ಶಾಸಕರು ಹಾಗೂ ಸಂಘದ ಗೌರವಾಧ್ಯಕ್ಷರಾದ ಆಯನೂರ ಮಂಜುನಾಥರ ಉಪಸ್ಥಿತಿಯಲ್ಲಿ ಡಾ.ಕೆ.ಸುಧಾಕರ್,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರಕಾರ ಇವರುಗಳ ಅನುಪಸ್ಥಿತಿಯಲ್ಲಿ ಮತ್ತು ಮಾನ್ಯ ಸಚಿವರ, ಸಂಘದ ಗೌರವಾಧ್ಯಕ್ಷರ ಹಾಗೂ ಇತರೆ ಮುಖಂಡರ ಘನ ಉಪಸ್ಥಿತಿಯಲ್ಲಿ ಏಪ್ರಿಲ್ 3 ಶನಿವಾರದಂದು ಗಂಟೆಗೆ ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ಶರಣಪ್ಪ ರೆಡ್ಡೆರ್ (ಎನ್.ಸಿ.ಡಿ) ಇವರು ಆಯ್ಕೆಯಾದ ಹಿನ್ನೆಲೆಯಲ್ಲಿ ಇವರಿಗೆ “ಆರೋಗ್ಯ ರತ್ನ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು ಗುತ್ತಿಗೆ, ಹೊರಗುತ್ತಿಗೆ ನೌಕರರು ಈ ಮುಖೇನ ಈ ಸಮಾವೇಶದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಮತ್ತು ಇಲ್ಲಿವರೆಗಿನ ಬೆಳವಣಿಗೆ ಜತೆಗೆ ಬೇಡಿಕೆ/ ಸಮಸ್ಯೆಗಳು ಒಳಗೊಂಡಂತೆ ಇತರೆಎಲ್ಲಾ ವಿಷಯಗಳನ್ನು ಚರ್ಚಿಸಲಾಯಿತು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!