ಕರೋನ ತಡೆಗಟ್ಟಲು ಸಾರ್ವಜನಿಕ ಸಹಕಾರ ಅಗತ್ಯ: ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ: ತಾಲೂಕಿನಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮೊತ್ತೊಂದು ವಾರದ ವರೆಗೆ ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ, ಇತರೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ನಡಲಾಗಿದೆ.
ಮೇ ೨೪ ರಿಂದ ೩೦ ರವರೆಗೆ ಗಂಗಾವತಿ ತಾಲೂಕನ್ನು ಸಂಪೂರ್ಣ ಲಾಕ್ ಡೌನ್ ಇರುತ್ತದೆ ಎಂದರು. ಈಗಾಗಲೇ ವಾರ್ಡ್‌ವಾರು ಸಂಯೋ ಜಕರನ್ನು ನೇಮಿಸ ಲಾಗಿದ್ದು, ಅವರಿಂದ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ.ಇದಕ್ಕೆ ಗಂಗಾವತಿ ತಾಲೂಕಿನ ಎಲ್ಲ ಸಾರ್ವಜನಿಕರು ಸಹಕರಿಸಬೇಕು. ಅನವಶ್ಯಕವಾಗಿ ಹೊರಗಡೆ ಬಂದರೆ ಬೈಕ್ ಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕರು ರಸ್ತೆಯ ಬದಿಯಲ್ಲಿ ಕುಳಿತುಕೊಳ್ಳಬಾರದು, ಮನೆಯಲ್ಲಿ ಇರುವುದು ಒಳ್ಳೆಯದು ಎಂದು ಹೇಳಿದರು.ಕರೊನಾ ವೈರಸ್ ತಡೆಗಟ್ಟುವನಿಟ್ಟಿನಲ್ಲಿ ರಾಜ್ಯ ಸರ್ಕಾರವುಜಾರಿ ಗೊಳಿಸಿರುವ ನಿಯಮ ಗಳನ್ನು ಎಲ್ಲರೂ ಚಾಚುತಪ್ಪದೇ ಪಾಲಿಸುವುದರ ಮೂಲಕ ಕೋವಿಡ್-೧೯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರರ ಯು ನಾಗರಾಜ್, ಪೋಲಿಸ್ ಇಲಾಖೆ ಅಧಿಕಾರಿಗಳು, ಡಿ,ವೈ ಎಸ್,ಪಿ,ಅರ್ ಉಜ್ಜಿನಕೊಪ್ಪ, ದೊಡ್ಡಪ್ಪ ದೇಸಾಯಿ, ನಗರಸಭೆ ಪೌರಯುಕ್ತ ಅರವಿಂದ ಜಮಖಂಡಿ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೋಹನ್, ಟಿ,ಎಚ್,ಓ ರಾಘವೇಂದ್ರ,ಬಿ,ಇ.ಒ.ಸೋಮುಶೇಖರ ಗೌಡ, ಅರಣ್ಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ಪಶುವೈದ್ಯ ಅಧಿಕಾರಿಗಳು, ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!