ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆ ರೂಡಿಸಿಕೊಳ್ಳಬೇಕು : ಜಿಲ್ಲಾಧಿಕಾರಿ

ಕೊಪ್ಪಳ( ಹೇಮಗುಡ್ಡ) : ಪ್ರತಿಯೊಬ್ಬ ಗೃಹ ರಕ್ಷಕರು ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆ ರೂಡಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹೇಳಿದರು.
ಅವರು ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಕೊಪ್ಪಳ ಜಿಲ್ಲಾ ಗೃಹ ರಕ್ಷಕದಳದ ನೂತನ ಸದಸ್ಯರಿಗೆ ಹತ್ತು ದಿನದ ಪ್ರಥಮ ವರ್ಷದ ಮೂಲ ತರಬೇತಿ ಶಿಬಿರದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡುತ್ತಿದ್ದರು.ಗೃಹ ರಕ್ಷಕರು ಈ ತರಬೇತಿ ಅವಧಿಯಲ್ಲಿ ಶ್ರದ್ಧೆಯಿಂದ ಕಲಿಯಬೇಕು. ಮಾನಸಿಕವಾಗಿ ದೈಹಿಕವಾಗಿ ಸದೃಡತೆ ಹೊಂದಲು ಇಂತಹ ಮೂಲ ತರಬೇತಿ ಅವಶ್ಯಕ ಪ್ರತಿಯೊಂದು ವಿಷಯವನ್ನು ಮನಸಿಟ್ಟು ಅರ್ಥೈಸಿಕೊಳ್ಳುವ ಮೂಲಕ ಸಮರ್ಥ ಗೃಹರಕ್ಷಕರಾಗಿ ಹೋರ ಹೊಮ್ಮಬೇಕು ಎಂದು ಕರೆ ನೀಡಿದರು. ಅವರು ತಮ್ಮ ಸೇವೆ ಸಮಾಜ ಮುಖಿ ಯಾಗಲಿ ಎಂದು ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಟಿ.ಶ್ರೀಧರ್ ಅವರು ಮಾತನಾಡಿ ಸರಕಾರದ ಅಂಗವಾಗಿ ಕಾರ್ಯನಿರ್ವಹಿಸುವ ಗೃಹ ರಕ್ಷಕದಳದವರು ಪೊಲೀಸ್ ಇಲಾಖೆ ಜೋತೆ ಜೋತೆಗೆ ಬಂದೂಬಸ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತೆಲಂಗಾಣ, ಆಂದ್ರಪ್ರದೇಶದಲ್ಲಿ ಗೃಹ ರಕ್ಷಕರಿಗೆ ಅಲ್ಲಿನ ಸರಕಾರ ಅನೇಕ ಸೌಲಭ್ಯಗಳನ್ನು ಕಲ್ಪಸಿದ್ದು ನಿರಂತರ ಕರ್ತವ್ಯ ಬತ್ತೆ ಸಿಗುತ್ತದೆ ಅದೇ ತೆರನಾದ ವ್ಯವಸ್ಥೆ ಮುಂಬರುವ ದಿನಗಳಲ್ಲಿ ನಿಮಗೆ ಲಭ್ಯವಾಗುವ ಹಿನ್ನೆಲೆಯಲ್ಲಿ ಸೇವಾ ಮನೋಭಾವ ದಿಂದ ಕೆಲಸ ನಿರ್ವಹಿಸಿ ತಮ್ಮ ಆರಂಭಿಕ ಈ ಹತ್ತು ದಿನಗಳ ಅವಧಿಯಲ್ಲಿನ ತರಬೇತಿಯನ್ನು ಸಂಪೂರ್ಣವಾಗಿ ಕಲಿತು ಸಮವಸ್ತ್ರ ಧರಿಸಿ ಉತ್ತಮವಾದ ಹೆಸರನ್ನು ಗಳಿಸಿ ಎಂದು ಹೇಳಿದರು. ಅವರು ಇದೊಂದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರಾದ ಡಾ.ಗವಿಸಿದ್ದಪ್ಪ ಜಿ.ಪಿ.ಮಾತನಾಡಿ ಹೊಸದಾಗಿ ಸೇರ್ಪಡೆಯಾದ ನೂರಕ್ಕೂ ಅಧಿಕ ಗೃಹ ರಕ್ಷಕರು ಸದೃಡವಾಗಿ ಮೂಲ ತರಬೇತಿಯನ್ನು ಪಡೆಯಲು ಹತ್ತು ದಿನಗಳ ತರಬೇತಿಯನ್ನು ಈ ಹೇಮಗುಡ್ಡದ ಸುಂದರವಾದ ಪರಿಸರವನ್ನು ಆಯ್ಕೆ ಮಾಡಿಕೊಂಡಿದ್ದು, ವಿಷಯ ಶಿಕ್ಷಕರ ಒದಗಿಸುವ ಮೂಲಕ ತಮ್ಮನ್ನು ಸದೃಡವಾಗಿ ಪರಿವರ್ತಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!