ಕವಲೂರು ಗ್ರಾಮವನ್ನು ಜಿಪಂ ಕ್ಷೇತ್ರವನ್ನಾಗಿ ನಾಮಕರಣ ಮಾಡಿದಕ್ಕೆ ಹರ್ಷ

ಕೊಪ್ಪಳ,: ಜಿಲ್ಲೆಯ ಗಡಿಭಾಗದಲ್ಲಿರುವ ಅತೀ ಹೆಚ್ಚು ಜನಸಂಖ್ಯೆ ಹಾಗೂ ಹೆಚ್ಚಿನ ಕಂದಾಯ ಹೊಂದಿರುವ ಕೊಪ್ಪಳ ತಾಲೂಕಿನ ಕವಲೂರು ಗ್ರಾಮವನ್ನು ಜಿಲ್ಲಾ ಪಂಚಾಯತಿ ಕ್ಷೇತ್ರವನ್ನಾಗಿ ನಾಮಕರಣ ಮಾಡಿದಕ್ಕಾಗಿ ಗ್ರಾಮದ ಜನಪ್ರತಿನಿಧಿಗಳು, ಮುಖಂಡರು, ಹಿರಿಯರು ಹಾಗೂ ಗ್ರಾಮದ ಎಲ್ಲ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಕವಲೂರು ಗ್ರಾಮದ ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ್ ಹೇಳಿದರು.
ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿದ್ಧೇಶಿಸಿ ಮಾತನಾಡಿದ ಅವರು, ಅತಿ ಹೆಚ್ಚು ಕಂದಾಯ ಹೊಂದಿರುವ ಕವಲೂರು ಗ್ರಾಮವನ್ನು ಜಿಲ್ಲಾಧಿಕಾರಿಗಳು ಗುರುತಿಸಿ ಜಿಪಂ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಹಿಂದೆ ಕವಲೂರು ಗ್ರಾಮವು ಅಳವಂಡಿ ಜಿಪಂ ಕ್ಷೇತ್ರಕ್ಕೆ ಒಳಪಟ್ಟಿತ್ತು. ಈಗ ಮರು ವಿಂಗಡಣೆದಿಂದ ಕವಲೂರು ಕ್ಷೇತ್ರವಾಗಿ ಮಾರ್ಪಟ್ಟಿದೆ. ಹಿಂದೆ ಇದ್ದ ಅಳವಂಡಿ ಗ್ರಾಮಸ್ಥರು ಕವಲೂರು ಜಿಪಂ ಕ್ಷೇತ್ರ ಮಾಡಿದ್ದಾಕ್ಕಾಗಿ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದು, ಅಧಿಕಾರಿಗಳಾದ ತಾವು ಈ ಯಾವುದೇ ಒತ್ತಡಕ್ಕೆ ಮಣಿಯದೇ ಕವಲೂರು ಗ್ರಾಮವನ್ನು ಜಿಪಂ ಕ್ಷೇತ್ರವನ್ನಾಗಿ ಮುಂದುವರಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕವಲೂರು ಗ್ರಾಮದ ಪ್ರಭು ಬಾಳಪ್ಪನವರ, ಮಹಾಂತಯ್ಯ ಸಿಂದೋಗಿಮಠ, ಮುತ್ತಣ್ಣ ಬಿಸರಳ್ಳಿ, ಮುತ್ತಯ್ಯ ಹುಲಕಂತಿಮಠ ಸೇರಿದಂತೆ ಕವಲೂರು ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!