ಕಾಂಗ್ರೆಸ್ ಕಾರ್ಮಿಕ ಘಟಕಕ್ಕೆ ಹುಸೇನ ಬಾಷ ಮನಿಯಾರ್ ನೇಮಕ


ಕೊಪ್ಪಳ : ಕೊಪ್ಪಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಭಾಗ್ಯನಗರ ಘಟಕಕ್ಕೆ ಹುಸೇನ ಬಾಷ ಮನಿಯಾರ್ ಅವರನ್ನು ನೇಮಗೊಳಿಸಿ ಆದೇಶಿಸಲಾಗಿದೆ.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರ ಶಿಫಾರಸ್ಸು ಅನ್ವಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ, ರಾಜ್ಯ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಜಾಕೀರಹುಸೇನ ಕಿಲ್ಲೇದಾರ,ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ ಎಂ.ಆರ್ ಇವರ ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡರು ನೇಮಕಗೊಳಿಸಿದ್ದಾರೆ.
ನೇಮಕ ಪತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪಕ್ಷದ ಎಲ್ಲಾ ಕಾರ್ಯಕರ್ತರ, ಮುಖಂಡರ, ಸಲಹೆ ಸೂಚನೆ ಮೇರೆಗೆ ಬಲಪಡಿಸುವಂತೆ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!