ಕಾರಟಗಿ ಪುರಸಭೆ ಸಂತೆ ಹರಾಜು ಪ್ರಕ್ರಿಯೆ

ಅಖಿಲ ವಾಣಿ ಸುದ್ದಿ: ಕಾರಟಗಿ : ಪಟ್ಟಣದ ಪುರಸಭೆಯ 2021-22ನೇ ಸಾಲಿನ ಸಂತೆ ಹರಾಜು ಪ್ರಕ್ರಿಯೆಯು ಸೋಮವಾರದಂದು ಪುರಸಭೆಯ ಸಭಾಂಗಣದಲ್ಲಿ ಜರುಗಿತು.ಈಗಾಗಲೇ ಎರಡು ಬಾರಿ ಮುಂದೂಡಲಾಗಿದ್ದ ಸಂತೆ ಹರಾಜು ಪ್ರಕ್ರಿಯೆಯು ಪುರಸಭೆಯ ಮುಖ್ಯ ಆಡಳಿತಾಧಿಕಾರಿ ರೆಡ್ಡಿ ರಾಯನಗೌಡರ ನೇತೃತ್ವದಲ್ಲಿ ಜರುಗಿತು. ನಂತರ ಮಾತನಾಡಿದ ಅವರು ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಮೊತ್ತದಲ್ಲಿ ಹರಾಜು ಪ್ರಕ್ರಿಯೆ ಜರುಗಿದೆ. ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು ಅಭಿವೃದ್ಧಿ ಮಾಡಲು ಕಷ್ಟವಾಗುತ್ತಿದೆ. ಆದಾಯ ಕಡಿಮೆಗೊಳ್ಳುತ್ತಿದೆ ಎಂದರು. ಹರಾಜಿನಲ್ಲಿ ಹತ್ತಕ್ಕು ಹೆಚ್ಚು ಜನ ಭಾಗವಹಿಸಿದ್ದರು. ಚಿಕ್ಕ ಅಯ್ಯಪ್ಪ 5,51,000ರೂಗಳನ್ನು ಕುಗಿದರೆ, ವೆಂಕಟೇಶ ಸೋಮನಾಳ 5,54,000ದ ವರೆಗೂ ಕುಗಿದ್ದಾರೆ. ಅಂತಿಮವಾಗಿ 5,55,000ರೂ ಗಳಿಗೆ ವೆಂಕಟ ಸಿಂಗ್ ಕುಗುವುದರ ಮೂಲಕ ಸಂತೆ ಹರಾಜನ್ನು ಅಂತಿಮಗೊಳಿಸಿದ್ದಾರೆ.ಇದೇ ಸಂದರ್ಭದಲ್ಲಿ ರಾಮಣ್ಣ ಬಡಿಗೇರ, ಹುಲುಗಪ್ಪ ಭೋವಿ, ಶರಣಪ್ಪ ಸಂಗಟಿ, ಮಲ್ಲಪ್ಪ ಗಿಣಿವಾರ, ರಾಘವೇಂದ್ರ ಸಂಗಟಿ, ಅಶೋಕ ಪತ್ತಾರ, ಸಂಗಪ್ಪ ಮಾಸಕಟ್ಟಿ, ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!