ಕಾರ್ಮಿಕರಿಗೆ ಬೂಟ್ ತೋರಿಸಿದ ಪಿಡಿಓ ಪಾಟೀಲ್ ಅಮಾನತ್ತಿಗೆ ಒತ್ತಾಯ

ಕೊಪ್ಪಳ, ಅ. ೦೧: ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಲೇಡಿ ಡಾನ್ ಪಿಡಿಓ ಮಂಜುಳಾ ಪಾಟೀಲ್ ಕಾಮಿಕರಿಗೆ ಬೂಟು ತೋರಿಸಿ, ಹೆದರಿಕೆ ಹಾಕುತ್ತಿದ್ದರೂ ಸಹ ಅವರ ಅಮಾನತ್ತು ಯಾಕೆ ಮಾಡಿಲ್ಲ ಎಂದು ಕಾರ್ಮಿಕರು ಒತ್ತಾಯಿಸಿ ಪ್ರತಿಭಟನೆ ಮೂಲಕ ತಾಲೂಕ ಪಂಚಾಯತಿ ಇಓ ಮಲ್ಲಿಕಾರ್ಜುನ ಕೆ.ಎಂ. ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕರು, ಈಗಾಗಲೇ ೨೦೧೭ ರಲ್ಲಿ ಹಿಂದೆ ಕೆಲಸ ಮಾಡಿದ ಇರಕಲಗಡ ಗ್ರಾಮ ಪಂಚಾಯಿತಿಯಲ್ಲಿ ಬಡವರಿಗೆ ನೀಡುವ ವಸತಿ ಗೃಹ ಸಹಾಯಧನ ನೀಡಲು ಲಂಚಕ್ಕೆ ಬೇಡಿಕೆಯೊಡ್ಡಿ ಭ್ರಷ್ಟಾಚಾರವೆಸಗಿ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಈಗ ಇಲ್ಲಿ ಅದೇ ಚಾಳಿ ಮುಂದುವರೆಸಿದ್ದಾರೆ. ಪಂಚಾಯಿತಿಯ ಪ್ರತಿಯೊಂದು ಕೆಲಸಕ್ಕೂ ಕಾಂಚಣಂ ಕಾರ್ಯಸಿದ್ಧಿ ಎನ್ನುವಂತೆ ಬಡವರ ದುಡ್ಡಿನಲ್ಲಿ ಮನೆ, ತನ್ನ ಕಾರಿಗೆ ಪೆಟ್ರೋಲ್, ಡ್ರೈವರ್‌ಗೆ ಸಂಬಳ ನೀಡುತ್ತಾರೆ. ಇದು ಒಂದು ತಿಂಗಳಿಗೆ ಬರೊಬ್ಬರಿ ೨೫ ರಿಂದ ೩೦ ಸಾವಿರ ರೂಪಾಯಿ, ಉದ್ಯೋಗ ಖಾತ್ರಿ, ವಸತಿಗೃಹ, ಶೌಚಾಲಯ, ಫಾರಂ ನಂ.೯, ೧೧ ತೆಗೆಯಲು ಕಿಕ್ ಬ್ಯಾಕ್ ದುಡ್ಡು ಬೇಕೆಬೇಕು. ಇಲ್ಲವಾದರೆ ಕೆಲಸ ವರ್ಷವಾದರೂ ಆಗೋದಿಲ್ಲ ಇನ್ನೂ ಮೂರು ವರ್ಷಗಳ ೧೪ ನೇ ಹಣಕಾಸಿನ ಕೆಲವು ಕಾಮಗಾರಿಗಳ ಹಣವನ್ನು ಎಂಬಿ ಇಲ್ಲದೆ, ದಾಖಲೆಗಳು ಇಲ್ಲದೆ ಬೋಗಸ್ ಬಿಲ್ ಮಾಡಿದ್ದಾಗಿ ಕಳೆದ ತಿಂಗಳು ಲೆಕ್ಕ ಪರಿಶೋಧನೆ ಸಭೆಯಲ್ಲಿ ತಾವೇ ಖುದ್ದಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಈಗ ವಾರದ ೭ ದಿನ ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೊಟ್ಟರೆ ಅದರಲ್ಲಿ ಎರಡು ದಿನ ಪಿಡಿಓಗೆ ಹಣ ಸಂದಾಯ ಮಾಡುವ ಕೆಲ ದಂಧೆ ಮಾಡುವ ಕುಳಗಳ ಹಾಜರಿ ಹಾಕಿಕೊಂಡು ಉಳಿದ ಐದು ದಿನ ಮಾತ್ರ ಕೂಲಿಕಾರ್ಮಿಕರಿಗೆ ಇಲ್ಲದೆ ಹೋದರೆ ಯಾವುದೇ ಕೆಲಸ ಕೊಡುವುದಿಲ್ಲ. ಏನು ಮಾಡಕೋತಿರಿ ಮಾಡ್ಕೊಳ್ಳಿ ನೋಡೋಣ ಎಂದು ಸರ್ವಾಧಿಕಾರಿಯಂತೆ ದರ್ಪ ಬಡವರ ಮೇಲೆ ತೋರಿಸುತ್ತಾರೆ. ಇನ್ನೂ ನಾನು ಲಾ ಓದಿದಿನಿ ನನ್ನ ಗಂಡ ದೊಡ್ಡ ಲಾಯರ್ ಎಂದು ಧಮ್ಕಿ ಹಾಕುತ್ತಾರೆ.
ಈಗ ತಾನೆ ಕೋವಿಡ್ ಎರಡನೇ ಅಲೆಯಲ್ಲಿ ಜನರು ಕೆಲಸವಿಲ್ಲದೆ ಕಂಗಾಲಾಗಿದ್ದು ಒಂದು ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಕ್ಕದ ಪಂಚಾಯತಗಳಲ್ಲಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಾರೆ. ಇಲ್ಲಿ ಯಾಕೆ ಇಲ್ಲ ಎಂದು ಕೆಲಸವಿಲ್ಲದೆ ಮನೆಯಲ್ಲಿ ಇದ್ದ ಕಾರ್ಮಿಕರು ಕೇಳಿದರೆ ಬೂಟಿನ ಏಟು ಎಂದು ಕಳೆದ ಜೂ. ೨೨ ರಂದೇ ಬೂಟು ತೋರಿಸಿದ ವಿಡಿಯೋ ತಡವಾಗಿ ವೈರಲ್ ಆಗಿದೆ, ಇದನ್ನು ಅಲ್ಲಿದ್ದ ಸರ್ವಾಜನಿಕರು ಖಚಿತಪಡಿಸಿದ್ದು, ಅಕ್ಷರ ಟಿವಿ ಮತ್ತು ಬದಲಾವಣೆಗೆ ತಮ್ಮ ಅಳಲನ್ನು ತೋಡಿಕೊಂಡರು.
ಸರ್ಕಾರ ತಾಲೂಕ ಪಂಚಾಯತಿ ಇಓ ಮಲ್ಲಿಕಾರ್ಜುನ ಕೆ.ಎಂ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮಾಡುವುದಾಗಿ ಕೂಲಿಕಾರ್ಮಿಕರು ಮನವಿ ನೀಡಿದರು.
ಪ್ರತಿಭಟನೆಯಲ್ಲಿ ರವಿ ಬಂಡಿಹರ್ಲಾಪೂರ, ಕಾಳಮ್ಮ, ಜ್ಯೋತಿ ಗೊನ್ವರ್, ಸಾವಿತ್ರಿ ಗಂಗಮ್ಮನಗಡ್ಡಿ, ಮಂಜುನಾಥ ಕವಲೂರ, ಮಲ್ಲಮ್ಮ ಲಕಮಾಪೂರ, ಎಂ. ರಜ, ಶರಣಪ್ಪ, ಗವಿಸಿದ್ದಪ್ಪ ಇತರರು ಇದ್ದರು. ಈ ವೇಳೆ ಇಓ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!