ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಡಿಲಿಗೆ ಸಿಐಐ-ಎಕ್ಸಿಮ್ ಬ್ಯಾಂಕ್ ಪ್ರಶಸ್ತಿ

ಪುಣೆ, ಭಾರತ- ನವೆಂಬರ್ ೨೯, ೨೦೨೧: ಭಾರತದಅತಿದೊಡ್ಡ ಕಾಸ್ಟಿಂಗ್‌ಗಳು ಮತ್ತು ಬೀಡುಕಬ್ಬಿಣದಉತ್ಪಾದಕರಲ್ಲಿಒಂದಾದಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಎಫ್‌ಐಎಲ್) (ಬಿಎಸ್‌ಇ:೫೦೦೨೪೫) ವ್ಯವಹಾರದ ಶ್ರೇಷ್ಠತೆಗಾಗಿ ೨೦೨೧ ನೇ ಸಾಲಿನ ಪ್ರತಿಷ್ಠಿತ ಸಿಐಐ-ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದಿನಾಂಕ ೨೬-೧೧-೨೦೨೧ ರಂದು ಹೋಟೆಲ್‌ತಾಜ್‌ಯಶವಂತಪುರದಲ್ಲಿ ನಡೆದ ವೈಭವಯುತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಮತ್ತು ಹಿರಿಯಕಾರ್ಯನಿರ್ವಾಹಕರುಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಒಟ್ಟುಗುಣಮಟ್ಟದ ನಿರ್ವಹಣೆಯ ಪರಿಕಲ್ಪನೆಯೊಂದಿಗೆಉದ್ಯಮದಲ್ಲಿ ಶ್ರೇಷ್ಠತೆಯನ್ನು ಸಾಧಿಸಲುಗುಣಮಟ್ಟಆಂದೋಲನದ ಪ್ರವರ್ತಕರಾದ ದಿವಂಗತ ಶ್ರೀ ರವಿ ಕಿರ್ಲೋಸ್ಕರ್‌ಅವರ ನೆನಪಿಗಾಗಿ ರವಿ ಕಿರ್ಲೋಸ್ಕರ್‌ಗುಣಮಟ್ಟದ ಪ್ರಶಸ್ತಿ ಸ್ಫರ್ಧೆಯನ್ನು ೧೯೮೪ ರಲ್ಲಿಕಿರ್ಲೋಸ್ಕರ್ ಸಮೂಹ ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದರೊಂದಿಗೆ ವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಕೆಎಫ್‌ಐಎಲ್‌ನ ಪ್ರಯಾಣ ಪ್ರಾರಂಭವಾಯಿತು. ಇದು ಸಮೂಹ ಸಂಸ್ಥೆಗಳಲ್ಲಿನ ಉತ್ಪನ್ನಗಳ ಗುಣಮಟ್ಟ, ವ್ಯವಸ್ಥೆಗಳು, ಪ್ರಕ್ರಿಯೆಗಳು ಮತ್ತು ವ್ಯವಹಾರದಕಾರ್ಯದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡಿತು ಮತ್ತು ಸಮೂಹ ಸಂಸ್ಥೆಗಳಲ್ಲಿ ಗಮನಾರ್ಹ ಮಟ್ಟವನ್ನು ಸಾಧಿಸಲು ಮತ್ತುಉದ್ಯಮ ಶ್ರೆಷ್ಠತೆಯ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಅನುಕೂಲವಾಯಿತು.
ಕಿರ್ಲೋಸ್ಕರ್ ಸಮೂಹವು ಸಿಐಐ ಎಕ್ಸಿಮ್ ಬ್ಯಾಂಕ್/ ಇಎಫ್‌ಕ್ಯೂಎಮ್ ಮಾದರಿಯನ್ನು ೨೦೦೦ ರಲ್ಲಿ ಪರಿಚಯಿಸಲ್ಪಟ್ಟಿತು. ಕಿರ್ಲೋಸ್ಕರ್ ಫೆರಸ್ ಸಂಸ್ಥೆಯು ೨೦೦೯-೧೦ ನೇ ಸಾಲಿನಿಂದ ಈ ಸಿಐಐ ಎಕ್ಸಿಮ್‌ನ ಮೌಲ್ಯಮಾಪನ (ಅಸೆಸ್‌ಮೆಂಟ್)ದಲ್ಲಿ ಭಾಗವಹಿಸಲು ಪ್ರಾರಂಭಿಸಿತು. ಕೆಎಫ್‌ಐಎಲ್ ಸಂಸ್ಥೆಯ ವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಸವಾಲಿನ ಗುರಿಯೊಂದಿಗೆ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಪ್ರಗತಿಪರವಾದ ಪ್ರದರ್ಶನವನ್ನು ಮಾಡುತ್ತಾ ಬಂದಿದ್ದು, ಈ ವರ್ಷ ಈ ಅತ್ಯುನ್ನತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುತ್ತದೆ.
ವ್ಯವಹಾರ ಶ್ರೇಷ್ಠತೆಗಾಗಿ ಸಿಐಐ-ಎಕ್ಸಿಮ್ ಬ್ಯಾಂಕ್ ಪ್ರಶಸ್ತಿ ಕುರಿತು
ಭಾರತೀಯಉದ್ಯಮದಒಕ್ಕೂಟ ಮತ್ತುರಫ್ತುಅಮದು ಬ್ಯಾಂಕ್‌ಆಫ್‌ಇಂಡಿಯಾಜಂಟಿಯಾಗಿ ಸಿಐಐ-ಎಕ್ಸಿಮ್ ಬ್ಯಾಂಕ್ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ೧೯೯೪ ರಲ್ಲಿ ಸ್ಥಾಪಿಸಿದ್ದು, ಇದು ಭಾರತೀಯ ಕಂಪನಿಗಳು ಆಪೇಕ್ಷಿಸಬಹುದಾದವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದಲ್ಲಿ ನೀಡುವ ಭಾರತದಲ್ಲಿನಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಡಿಲಿಗೆ ಸಿಐಐ-ಎಕ್ಸಿಮ್ ಬ್ಯಾಂಕ್ ಪ್ರಶಸ್ತಿ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!