ಕೃಷಿ ಕ್ಷೇತ್ರದ ಸಾಧಕ ಜಗಜೀವನ್ ರಾಮ್ : ರಮಾದೇವಿ ಶಂಭೋಜಿ

ಅಖಿಲ ವಾಣಿ ಸುದ್ದಿ
ಸಿಂಧನೂರು:ಭಾರತ ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಡಾ|| ಬಾಬು ಜಗಜೀವನ್ ರಾಮ ಅವರು ಒಬ್ಬರು ತಮಗೆ ವಹಿಸಿದ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ವಿಶೇಷವಾಗೊ ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ ಹಸಿರು ಕ್ರಾಂತಿಯ ಹರಿಕಾರರಾಗಿ ಸದಾ ರೈತರ ಮನದಲ್ಲಿ ನೆನಪುಳಿಯುವಂತಾಗಿದ್ದಾರೆಂದು ವಿರುಪಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಮಾದೇವಿ ಶಂಭೋಜಿ ಹೇಳಿದುರು.
ಅವರು ತಾಲೂಕಿನ ವಿರುಪಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಂ ಅವರ ಜಯಂತ್ಯೋತ್ಸವ ಸಮಾಋಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶಿಕ್ಷಕಿಯರಾದ, ಮಂಜುಳಾ, ಸುನಿತಾ ಅರಮನಿ, ಕಾವೇರಿ ಉಪಸ್ಥಿತರಿದ್ದರು. ಶಿಕ್ಷಕ ಮೌಲಾಸಾಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಸ್ವಾಗತಿಸಿದರು. ಶಿಕ್ಷಕಿ ಪ್ರಮಿಳಾ ಹಿರೇಮಠ ವಂದಿಸಿದರು. ಕಳಕನಗೌಡ ನಿರೂಪಿಸಿದರು

Please follow and like us:

Leave a Reply

Your email address will not be published. Required fields are marked *

WhatsApp