ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ಎಪ್ಪತ್ತನಾಲ್ಕನೇ ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ


ಕೊಪ್ಪಳ : ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ಎಪ್ಪತ್ತನಾಲ್ಕನೇ ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ಆಡಳಿತ ಮಂಡಳಿಯ ಸದಸ್ಯರಾದ ಎಂ ಬಿ ಪಾಟೀಲ್ ರವರು ಭಾಗಿಯಾಗಿ ಧ್ವಜಾರೋಹಣವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿಸ್ತರಣ ಮುಂದಾಳುಗಳಾದ ಡಾಕ್ಟರ್ ಎಂ ಬಿ ಪಾಟೀಲ್ ರವರು ಕಲ್ಯಾಣ ಕರ್ನಾಟಕ ಈ ಉತ್ಸವವನ್ನು ಮೊದಲಿಗೆ ಹೈದರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿತ್ತು. ತದನಂತರ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಕಲ್ಯಾಣ ಕರ್ನಾಟಕ ಎಂದು ಪದನಾಮ ಮಾಡಿದರು. ಕಲ್ಯಾಣ ಕರ್ನಾಟಕಕ್ಕೆ ಹೈದರಾಬಾದ್ ನಿಜಾಮರಿಂದ ಹದಿಮೂರು ತಿಂಗಳುಗಳ ನಂತರ ಆಗಿನ ಗೃಹ ಮಂತ್ರಿಗಳಾದ ವಲ್ಲಭ ಭಾಯಿ ಪಟೇಲ್ ರಿಂದ ಕಲ್ಯಾಣ ಪ್ರದೇಶಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಕೃಷಿ ಮಹಿಳೆ ಶಿಬಿರಾರ್ಥಿಗಳು, ಮಹಾತ್ಮಗಾಂಧಿ ಸಂಸ್ಥೆ ಬೆಂಗಳೂರು ರವರು, ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಪದಾಧಿಕಾರಿಗಳು, ಕೃವಿಶಿಕೇ ಕೊಪ್ಪಳದ ಸಿಬ್ಬಂದಿ ವರ್ಗದವರು ಹಾಗು ಕೃಷಿ ವಿಜ್ಞಾನಿ ಡಾ. ನಾಗೇಶ ಬಸಪ್ಪ ಜಾನೇಕಲ್ ರವರು ನಿರೂಪಿಸಿ ವಂದನಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!