ಕೆಸರು ಗದ್ದೆ ಯಾಗಿರುವ ಮದ್ದೇರಿ ಗ್ರಾಮದ ರಸ್ತೆ ಜನರ ಸಂಕಷ್ಟ ಕೇಳೋದ್ಯಾರು:ಶಾಸಕರಿಗೆ ಮನವಿ

ಕೋಲಾರ: ತಾಲ್ಲೂಕಿನ ವೇಮಗಲ್ ಹೋಬಳಿ ಮದ್ದೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಬಂದರೆ ಕೆರೆ, ಕೆಸರು ಗದ್ದೆಯಾಗುತ್ತಿದ್ದು, ಜನತೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮದ್ದೇರಿ ಬಳಿಯ ಇರಗಸಂದ್ರ ದೇವರಹಳ್ಳಿ, ಕದರಿಪುರ, ಬೆದ್ಲಿ ಪಚ್ಚಾರ್ಲಹಳ್ಳಿ, ಸೀತಪ್ಪನಹಳ್ಳಿ ಪಿಂಡಪಾಪನಹಳ್ಳಿ ಗ್ರಾಮದ ಗ್ರಾಮಸ್ಥರು ಪಂಚಾಯಿತಿ ಕೇಂದ್ರವಾಗಿರುವ ಮದ್ದೇರಿಗೆ ಹೋಗಲು ಇರಗಸಂದ್ರ ಮುಖಾಂತರ ಈ ರಸ್ತೆಯಲ್ಲಿ ನಡೆದು ಹೋಗಬೇಕಾದ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಮಳೆ ಬಂದಾಗ ಕೆರೆ ಅಂಗಳವಾಗಿ ಹೋಗುತ್ತದೆ ರಸ್ತೆಯ ಪಕ್ಕದಲ್ಲಿ ಪಾರ್ಥೇನಿಯಂ ಮತ್ತು ಬೇಲಿ ಗಿಡಗಳು ಬೆಳೆದು ದಟ್ಟವಾಗಿ ಇರುವುದರಿಂದ ಸಂಚರಿಸಲು ನಡೆದು ಹೋಗುವ ಪಾದಚಾರಿಗಳಿಗೆ ಭಯವಾಗುತ್ತದೆ.
ಈ ರಸ್ತೆಯ ಮುಖಾಂತರ ದಿನವೂ ಸಾವಿರಾರು ಜನ ಸಂಚರಿಸುತ್ತಿದ್ದರೂ ಜನಪ್ರತಿನಿಧಿಗಳು ಈ ರಸ್ತೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಖಂಡನೀಯವಾಗಿದೆ. ಈ ಭಾಗದ ಸಾರ್ವಜನಿಕರಿಗೆ ಮದ್ದೇರಿಗೆ ಹೋಗಲು ಈ ರಸ್ತೆ ತುಂಬಾ ಹತ್ತಿರವಾಗಿತ್ತು ಈ ರಸ್ತೆ ಮುಖಾಂತರ ಬರಬೇಕಾಗಿರುವುದರಿಂದ ಮಾನ್ಯ ಶಾಸಕರು ಈ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಕೊಡಬೇಕೆಂದು ಈ ಭಾಗದ ಸಾರ್ವಜನಿಕರ ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!