ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಲು ರಾಜಶೇಖರ ಮೊಲಾಲಿ ಮನವಿ

ಕೊಪ್ಪಳ, ನ. ೦೬: ಇದೇ ತಿಂಗಳ ೨೧ ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತದಾನದ ಮಾದರಿ ಪತ್ರದಲ್ಲಿರುವ ೧೦ ನೇ ಸಂಖ್ಯೆಗೆ ಮತದಾನ ಮಾಡಿ ತಮ್ಮನ್ನು ಆಯ್ಕೆಗೊಳಿಸುವಂತೆ ರಾಜಶೇಖರ ಮೊಲಾಲಿ ಮನವಿ ಮಾಡಿಕೊಂಡರು.
ಅವರು ನಗರದ ಪತ್ರಿಕಾಭವನದಲ್ಲಿ ಶನಿವಾರ ಬೆಳಿಗ್ಗೆ ಎರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿ ಈ ಕುರಿತು ಹೇಳಿಕೆ ನೀಡಿದ ಅವರು ನಾನು ಇದೇ ಪಕ್ಕದ ಬಳ್ಳಾರಿ ಜಿಲ್ಲೆಯವನಾಗಿದ್ದು ಕನ್ನಡ ಸಾಹಿತ್ಯ ಪರಿಷತ್ ಕ್ಷೇತ್ರದಲ್ಲಿ ತೋಡಗಿಸಿಕೊಂಡು ಶ್ರಮಿಸುತ್ತಾ ಬಂದಿದ್ದೇನೆ. ಸದರಿ ಚುನಾವಣೆಯಲ್ಲಿ ಯುವಕರಿಗೆ ಆಧ್ಯತೆ ನೀಡಿ ತಮಗೆ ಬೆಂಬಲಿಸಿ ಪರಿಷತ್ತಿನ ಸೇವೆ ಸಲ್ಲಿಸಲು ಅವಕಾಶ ದೊರಕಿಸಿಕೊಂಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಶೇಖರ ಮೊಲಾಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೋಟ್ರೇಶ ಕಿಚಡಿ, ದೇವರಾಜ ಹಾಲಸಮುದ್ರ, ದೊಡ್ಡಪ್ಪ ಪಲ್ಲೇದ, ದುರಗೇಶ ಉಪ್ಪಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!