ಕೊತಬಾಳ ಕಾಲೇಜಿನ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿ ಬರುವ ಶ್ರೀ ಮತಿ ಶಾರದಮ್ಮ ವೀ ಕೊತಬಾಳ ಪದವಿ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡುವ ಕಾರ್ಯಕ್ರಮ ಇಂದು ಶಿವಶಾಂತ ಮಂಗಲ ಭವನದಲ್ಲಿ ಜರುಗಿತು. ಅತಿಥಿಗಳಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾದ ಮಾರುತೇಶ್ ಬಿ ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ವ್ಯಕ್ತಿತ್ವ ವಿಕಾಸನದ ಜೊತೆಗೆ ಉತ್ತಮ ಭವಿಷ್ಯ ಕಂಡುಕೊಳ್ಳುವಲ್ಲಿ ಇದು ಸಹಕರಿಯಾಗಲಿದೆ. ಸತತವಾಗಿ ಅಧ್ಯಯನ ಮಾಡಿ ಯಶಸ್ಸನ್ನು ಪಡೆಯುವಂತೆ ಕರೆನೀಡಿದರು. ಕಾಲೇಜಿನ ಅಧ್ಯಕ್ಷರಾದ ಸಂಜಯ ಕೊತಬಾಳ ನಿರ್ದೇಶಕರಾದ ಮಹೇಶ ಮುದುಗಲ್ ಮಾತನಾಡಿದರು. ಅಧ್ಯಕ್ಷತೆ ಪ್ರಾಚಾರ್ಯರಾದ ರಾಜರಾಜೇಶ್ವರ ರಾವ್ ವಹಿಸಿದ್ದರು. ಇದೆ ವೇದಿಕೆಯಲ್ಲಿ ಬಳ್ಳಾರಿ ವಿ. ಎಸ್.ಕೆ ವಿಶ್ವ ವಿದ್ಯಾಲಯಕ್ಕೆ 6 ನೇ ಸ್ಥಾನದಲ್ಲಿ ಆಯ್ಕೆ ಯಾಗಿರುವ ಈ ಕಾಲೇಜಿನ ರುಷಬ್ ಮೆಹತಾ ಇವರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು , ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!