ಕೊರೋನ ಸೊಂಕು ನಿಯಂತ್ರಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ : ವೆಂಕಟರಾವ ನಾಡಗೌಡ

ಸಿಂಧನೂರು : ಕೊರೊನಾ ಎರಡನೇ ಅಲೆ ತುಂಬಾ ಜೋರಾಗಿ ಹರಡುತ್ತಿದ್ದು ಅದನ್ನು ತಡೆಯುವಲ್ಲಿ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿ .ಕೇವಲ ಎ.ಸಿ ಕೊಠಡಿಗಳಲ್ಲಿ ಕುಳಿತು ಕಾಲ ಕಳೆಯದೆ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಶ್ರಮವಹಿಸಿ ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.
ನಗರದ ತಹಶಿಲ್ ಕಛೇರಿಯಲ್ಲಿ ಕರೆದ ಸಹಾಯಕ ಆಯುಕ್ತರು ಹಾಗೂ ವಿವಿಧ ಇಲಾಖೆಯ ತಾಲುಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ನೀವು ಏನಾದರೂ ಮಾಡಿ ಆದರೆ ಕೃಷಿ ಚಟುವಟಿಕೆಗಳಿಗೆ ನಿರ್ಭಂದನೆ ಹೆರಬಾರದು ಹಾಗೂ ಕೃಷಿ ಇಲಾಖೆಯ ಮತ್ತು ಎಪಿಎಂಸಿ ವತಿಯಿಂದ ಪ್ರತಿ ಭತ್ತ ಖರೀದಿ ಅಂಗಡಿಗಳಿಗೆ ೨ ಪಾಸ್ ಗಳನ್ನು ಹಾಗೂ ರಸಗೊಬ್ಬರಗಳ ಅಂಗಡಿಗಳಿಗೆ ಒಬ್ಬರಿಗೆ.ಪಾಸ್ ಗಳನ್ನು ಇವತ್ತೆ ವಿತರಿಸಿ ಎಂದು ಎಪಿಎಂಸಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೋನ ಸೋಂಕು ನಿಯಂತ್ರಣಗೆ ತರಲು ಜಿಲ್ಲಾಡಳಿತ ಮತ್ತು ಸರ್ಕಾರದ ನಡುವೆ ವ್ಯವಸ್ಥಿತವಾದ ಕ್ಲಾರಿಟಿ ಇಲ್ಲ ಹೀಗಾದರೆ ಸೋಂಕು ಹೇಗೆ ನಿಯಂತ್ರಣ ಮಾಡುತ್ತಿರಿ? ಮತ್ತು ಹಿಗಾಗಲೇ ನಡೆಸಿದ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ತಿರ್ಮಾನ ಕೈಗೊಂಡಂತೆ ಕೊವಿಡ್ ಸೆಂಟರ್ ಗೆ ಸೊಂಕಿತರನ್ನು ತಾಲುಕಿನ ವಿವಿಧ ಹಳ್ಳಿಗಳಿಂದ ಕರೆ ತರಲು ೫ ಸರ್ಕಾರಿ ಬಸ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಮೇರೆಗೆ ಮಾಡಬೇಕೆಂದು ನಿರ್ಧರಿಸಲಾಗಿತ್ತು .ಅದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ. ಪೋಲಿಸ್‌ಇಲಾಖೆ ಮತ್ತು ಕೆ.
ಎಸ್.ಆರ್.ಟಿ.ಸಿ ಇಲಾಖೆಗಳ ಸಭೆ ಕರೆದು ಸೂಚನೆ ನೀಡಿತ್ತು. ಸರ್ಕಾರಿ ಬಸ್ ಗಳನ್ನು ಬದಲಾಯಿಸಿ ಖಾಸಗಿ ವಾಹನಗಳನ್ನು ನೇಮಕ ಮಾಡಿಕೊಂಡಿರುವದು ಯಾಕೆ ಇದರಲ್ಲಿ ನೀವು ಮತ್ತು ಖಾಸಗಿ ವಾಹನದಾರರ ಜೊತೆ ವ್ಯವಹಾರ ಒ ಏನು ಎಂದು? ಇದರಲ್ಲಿ ಏನೊ… ಗೊಲಮಾಲ್ ನಡೆಸಿರಿ ಎಂದು ಶಾಸಕರು ಸಹಾಯಕ ಆಯುಕ್ತರನ್ನು ಪ್ರಶ್ನೆ ಮಾಡುತ್ತಿದ್ದಂತೆ ಸಹಾಯಕ ಆಯುಕ್ತರು ಎಲ್ಲ ವರದಿಗಾರರು ಹೊರಗಡೆ ನಡೆಯಿರಿ ಹೇಳಿದರು. ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದ ಪತ್ರಕರ್ತರು ನಿಮ್ಮ ಗೌಪ್ಯತೆ ಕಾಪಾಡುವದಿದ್ದರೆ, ನಮ್ಮನ್ನು ಯಾಕೆ ಸಭೆಗೆ ಬರುವಂತೆ ತಿಳಿಸಿದಿರಿ ಎಂದು ಪ್ರಶ್ನಿಸಿ ಸಭೆಯಿಂದ ಪತ್ರಕರ್ತರು ಹೊರ ನಡೆದ ಪ್ರಸಂಗ ತಹಶಿಲ್ ಕಛೇರಿಯಲ್ಲಿ ನಡೆಯಿತು.ಕೊರೊನಾ ಸೊಂಕಿತರನ್ನು ಕೊವಿಡ್ ಸೆಂಟರ್ ಗೆ ಕರೆ ತರಲು ಸರ್ಕಾರಿ ಬಸ್ ಗಳು ನ್ನು ನೇಮಕ ಮಾಡಿದ್ದು ನೂರಕ್ಕೆ ನೂರರಷ್ಟು ಸತ್ಯ ಕಾರಣ ಬಸ್ ಗಳಲ್ಲಿ ಹೆಚ್ಚಿನ ಸ್ಥಳವಕಾಶ ಇರುತ್ತೆ ಸಾಮಾಜಿಕ ಅಂತರದಲ್ಲಿ ಕರೆ ತರಬಹುದು ಮತ್ತು ಒಂದೆ ಬಾರಿಗೆ ಹಲವಾರು ಜನ ಸೊಂಕಿತರನ್ನು ಕರೆ ತರಬಹುದು ಆದರೆ ಕ್ರಸರ್ ಗಳಲ್ಲಿ ಬಸ್ ಗಳಿಗೆ ವಿರುದ್ಧ ವಾದ ವ್ಯವಸ್ಥೆ ಇರುತ್ತದೆ .ಯಾವ ಲಾಭಾಂಶಕ್ಕಾಗಿ ಕ್ರಸರ್ ಗಳನ್ನು ನೇಮಕ ಮಾಡಿದ್ದರಿ ಎನ್ನುವುದು ಎಲ್ಲಾ ಅಧಿಕಾರಿಗಳ. ಶಾಸಕರ.ಪತ್ರಕರ್ತರಿಗೆ ಅನುಮಾನ ಮೂಡುವಂತಾಯಿತು.ತರಕಾರಿ ಮತ್ತು ರೈತರಿಗೆ ಅಂಗಡಿಯವರಿಂದ ಚೀಟಿ ಕೊಡಿಸಿ ಎಂದು ವರ್ತಕರ ಸಂಘದ ಅದ್ಯಕ್ಷರಾದ ಪೂಜಪ್ಪ ಪೂಜಾರಿಗೆ ಶಾಸಕರು ತಿಳಿಸಿದರು ಆದ ಕಾರಣ ಬೆಂಕಿ ಹತ್ತಿದಾಗ ಬಾಯಿ ತೋಡಿದರೆ ಏನು ಪ್ರಯೋಜನವಿಲ್ಲ ಕೊರೊನಾ ನಿಯಂತ್ರಣ ಮಾಡುವಲ್ಲಿ ಜನ ಸಾಮಾನ್ಯ ರನ್ನು ಹೊರಗಡೆ ಓಡಾಡದಂತೆ ತಡೆಯಲು ಯಾವ ರೀತಿ ತಯಾರಿ ಮಾಡಿಕೊಂಡಿದ್ದರಿ ಎಂದು ಎ.ಸಿ ರಾಜಶೇಖರ ವರಿಗೆ ಶಾಸಕ ವೆಂಕಟರಾವ್ ನಾಡಗೌಡ ರು ಕೇಳಿದಾಗ ಮೌನವೆ ಉತ್ತರವಾಗಿತ್ತು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಅಮರೇಗೌಡ ವಿರುಪಾಪುರ.ಬಸವರಾಜ ಹಿರೇಗೌಡರ.ತಹಶಿಲ್ದಾರ ಮಂಜುನಾಥ ಭೋಗವತಿ.ನಗರಸಭೆ ಆಯುಕ್ತ ವಿರುಪಾಕ್ಷಿ ಮೂರ್ತಿ.ಡಿ.ವಾಯ್‌ಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ.ಎಡಿ ಕುಮಾರ.ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷಿ. ನಗರ ಪೊಲೀಸ್ ಠಾಣೆ ಪಿಎಸ್‌ಐ ವಿಜಯಕೃಷ್ಣ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!