ಕೋರೊನಾ ತಡೆಗೆ ಜಾಗೃತಿ ಅಗತ್ಯ: ಬಿ.ಇ.ಒ

ಗಂಗಾವತಿ: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮಾಸ್ಕ್ ಮತ್ತು ಕರಪತ್ರ ಹಂಚುವ ವಿಶೇಷ ಪ್ರಚಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಾಲನೆ ನೀಡಿದರು.ಎರಡನೇ ಅಲೆ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ, ಕರೋನ ವೈರಸ್ ಮೊದಲನೆಯ ಅಲೆಗಿಂತ ತುಂಬ ಅಪಾಯಕಾರಿಯಾಗಿದೆ.ವೈರಸ್ ಗಳು ರೂಪಾಂತರಗೊಳ್ಳವುದು ನಿಸರ್ಗದ ನಿಯಮ,ಭಯ ಬೇಡ ಜಾಗೃತಿ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ದೇಶದಾದ್ಯಂತ ಕರೋನ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಮಾಜ ಸೇವಕ ಬಸವರಾಜ್ ಮ್ಯಾಗಳಮನೆರವರ ೪೦೦೦ ಸಾವಿರ ಮಾಸ್ಕ, ೬೦೦೦ ಸಾವಿರ ಕರಪತ್ರಗಳನ್ನು ಹಂಚುವ ಮೂಲಕ ಕರೋನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಏರಿಯಾಲ್ಲಿ ಕರೋನದಿಂದ ಜಾಗೃತಿಯಾದರೆ ಸಾಕು,ಹಿರಿಯರು ಮೊದಲ ಜಾಗೃತಿಯಾಗಬೇಕು ಅವಾಗ ಕರೋನ ವೈರಸ್ ನಿರ್ಮೂಲನೆ ಸಾಧ್ಯ ಎಂದರು.
ಕರೋನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ, ಕೊರೋನಾ ವೈರಸ್ ಸೋಂಕು ಕುರಿತಂತೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವದಂತಿ, ಊಹಾಪೋಹಗಳನ್ನು ನಂಬಬಾರದು. ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಬಸವರಾಜ್ ಮ್ಯಾಗಳಮನೆ ಸಮಾಜ ಸೇವಕರು ಮನವಿ ಮಾಡಿ,ಮಾತನಾಡಿದರು, ಕೊರೊನಾ ವೈರಸ್ ಲಕ್ಷಣಗಳು ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಯ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಮುಂಜಾಗ್ರತಾ ದೃಷ್ಟಿಯಿಂದ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಅಡ್ಡ ಹಿಡಿಯಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗಳಬಾರದು. ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು. ರೋಗದ ಲಕ್ಷಣ ಹೊಂದಿರುವವರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಸರಿಯಾಗಿ ಬೇಯಿಸದ ಹಸಿ ಮೊಟ್ಟೆ, ಮಾಂಸ, ಸೇವೆನೆ ಮಾಡಬಾರದು. “ಕೊರೊನಾ ವೈರಸ್ ಬಗ್ಗೆ ಭಯಬೇಡ, ಎಚ್ಚರವಿರಲಿ’ ಎಂಬ ಸ್ಲೊಗನ್‌ನೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಾರ್ಡನ ಸದಸ್ಯರು ನಗರಸಭೆ ವಿರೋಧ ಪಕ್ಷದ ಸದಸ್ಯರು ನವೀನ ಪಾಟೀಲ ರವರು ಸಾರ್ವಜನಿಕರಿಗೆ ಸಲಹೆ ನೀಡಿದರು ಅವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಿ, ಎಲ್ಲರೂ ಮನೆಯಲ್ಲಿ ಇರುವ ಮೂಲಕ ಕರೋನ ಹೋಗಲಾಡಿಸಲು ಸಾದ್ಯ, ಒಬ್ಬರು ಜೊತೆಗೆ ಮಾತನಾಡುವ ಮಾಸ್ಕಧರಿಸಿ, ಪ್ರತಿಯೊಬ್ಬರು ದೈಹಿಕ ಅಂತರ ಕಾಪಡಿಕೊಳ್ಳಿ, ಗುಂಪಾಗಿ ಸೇರಬೇಡಿ,ಉತ್ತಮ ಆಹಾರ, ಬಿಸಿ ಆಹಾರವನ್ನು ಸೇವಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.ತಂದೆ ತಾಯಿಗಳು ಮಕ್ಕಳ ಬಗ್ಗೆ ಜಾಗೃತರಾಗಿ.ಹೀಗೆ ಹಲವಾರು ಅಂಶಗಳೂಳ್ಳ ಕರಪತ್ರವನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಬಸವರಾಜ್ ಸಿರಗುಂಪಿ ಬಾಜಪ ನಗರದ ಘಟಕದ ಉಪಾಧ್ಯಕ್ಷರು,ಚಂದ್ರ, ಚಂದ್ರ, ರಗಡಪ್ಪ, ಇತರರು ಇದ್ದರ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!