ಕೋವಿಡ್‌ನಿಂದ ರಕ್ಷಣೆ ಲಸಿಕೆಯಿಂದ ಮಾತ್ರ ಸಾಧ್ಯ:ಡಾ.ಮಹೇಶ್ ಉಮಚಗಿ

ಕೊಪ್ಪಳ : ಕೊರೋನ ಎನ್ನುವ ಮಹಾಮಾರಿ ಕೋವಿಡ್ -೧೯ ಇಡೀ ಮನುಕುಲವನ್ನು ತಲ್ಲಣಗೊಳಿಸಿದೆ ಪ್ರತಿಯೊಬ್ಬರು ಲಸಿಕೆ ಪಡೆದಾಗ ಮಾತ್ರ ಇದರಿಂದ ರಕ್ಷಣೆ ಹೊಂದಬಹುದು ಎಂದು ತಾಲೂಕಾ ವೈಧ್ಯಾಧಿಕಾರಿಯಾದ ಡಾ. ಮಹೇಶ್ ಉಮಚಗಿ ಅವರು ಹೇಳಿದರು.
ಅವರು ಹ್ಯುಮ್ಯಾನೆಟೇರಿಯನ್ ರಿಲೀಫ್ ಸೂಸೈಟಿ ಮತ್ತು ರಾಬಿತೆ ಮಿಲ್ಲತ್ ವತಿಯಿಂದ ಮಸ್ಜೀದೆ ಆಲಾ ಸ್ಟೇಷನ್ ರೋಡನಲ್ಲಿ ಏರ್ಪಡಿಸಿದ್ದ ಲಸಿಕೆ ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸರ್ಕಾರದಿಂದ ನಾವುಗಳು ಕೊವಿಡ್‌ನ ಬಗ್ಗೆ ಜನರಲ್ಲಿ ಎಷ್ಟು ಜಾಗೃತಿ ಮೂಡಿಸಿದರು ಜನರು ಲಸಿಕೆ ತೆಗೆದು ಕೊಳ್ಳಲು ಮುಂದೆ ಬರುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದವರು ತಾವೇ ಸ್ವತಃ ಮುಂದೆ ಬಂದು ಮಸೀದಿಯಲ್ಲಿ ಲಸಿಕೆ ಕೊಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದೆ ಲಸಿಕೆ ಕೊಡಿಸುವ ಕಾರ್ಯಕ್ರಮಗಳು ಮತ್ತು ಜನರನ್ನು ಪ್ರೇರೆಪಿಸುವ ಕೆಲಸ ಮಾಡಬೇಕಾಗಿದೆ ಎಂದರು.
ರಾಬಿತೆ ಮಿಲ್ಲತ್ ಸಂಘದ ಅಧ್ಯಕ್ಷರಾದ ಲಾಯಕ್ ಅಲಿ ಅವರು ಮಾತನಾಡಿ ಲಸಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗೆ ಜನರು ಕಿವಿ ಕೊಡಬಾರದು ಸರ್ಕಾರ ಕೊವೀಡ್ ಲಸಿಕೆ ಜನರ ಒಳಿತಿಗಾಗಿ ಕೊಡುತಿದೆ ಜನರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಇದರಿಂದ ಯಾವುದೇ ಅಡ್ಡಪರಿಣಾಮ ಅಗುವುದಿಲ್ಲ ಎಂದರು.
ನಗರ ಸಭೆ ಸದಸ್ಯರಾದ ಸರ್ವೆಶ್ ಗೌಡ ಬನ್ನಿಕೊಪ್ಪ ಅವರು ಮಾತನಾಡಿ ಮುಸ್ಲಿಂ ಸಮುದಾಯದವರು ಮಸೀದಿಯಲ್ಲಿ ಲಸಿಕೆ ಕಾರ್ಯಕ್ರಮ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮಸೀದಿ ಎಂದರೆ ಬರೀ ಪ್ರಾರ್ಥನೆ ಮಾಡುವ ಸ್ಥಳ ಎಂದು ಕೊಂಡಿದ್ದೇವು ಇಂತಹ ಸಮಾಜ ಮುಖಿಕಾರ್ಯಗಳು ಮಾಡುತ್ತಿರುವುದು ಅದರಲ್ಲಿಯೂ ಎಲ್ಲಾ ಸಮುದಾಯದವರಿಗೂ ಮಸೀದಿಯಲ್ಲಿಯೇ ಲಸಿಕೆ ಕೊಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಹ್ಯುಮ್ಯಾನೆಟೇರಿಯನ್ ರಿಲೀಫ್ ಸೂಸೈಟಿಯ ಗ್ರೂಪ್ ಲೀಡರ್ ಮಹಮ್ಮದ್ ಖಲೀಲ್ ಉಡೇವು ಮಾತನಾಡಿ ಹೆಚ್‌ಆರ್‌ಎಸ್ ಕೊಪ್ಪಳ ಘಟಕವು ಕೊವೀಡ್-೧೯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಲಾಕ್ ಡೌನ್ ಸಮಯದಲ್ಲಿ ಸುಮಾರು ೪೫ದಿನಗಳವರೆಗೆ ಆಹಾರ ವಿತರಣೆ ಮಾಡಿದೆ ಹಾಗೂ ಕಡು ಬಡವರಿಗೆ ರೆಷನ್ ಕಿಟ್ ವಿತರಿಸಲಾಗಿದೆ. ಕೊವೀಡ್ ಟಾಸ್ಕ್‌ಪೋರ್ಸ ರಚಿಸಿ ಸೊಂಕಿತರಿಗೆ ಬೆಡ್ ಕೊಡಿಸುವುದು, ತಜ್ಙವೈಧ್ಯರಿಂದ ಸಲಹೆ ಕೊಡಿಸುವುದು, ಹೋಮ್ ಐಸೂಲೇಷನ್‌ನಲ್ಲಿರುವ ರೋಗಿಗಳಿಗೆ ಔಷಧಿ ಕಿಟ್ ಮನೆ ಬಾಗಿಲಿಗೆ ತಲುಪಿಸುವ ಕೆಲಸ, ಅಂತ್ಯಕ್ರೀಯೆ ಮಾಡಲು ಸಂಬಂಧಿಕರು ಮುಂದೆಬಾರದಿದ್ದಾಗ ಅಂತ್ಯಕ್ರೀಯೆ ಹ್ಯುಮ್ಯಾನೆಟೇರಿಯನ್ ರಿಲೀಫ್ ಸೂಸೈಟಿಯ ತಂಡದ ಕಾರ್ಯಕರ್ತರೆ ನೆರವೇರಿಸಿದ್ದಾರೆ ಎಂದರು. ಸರ್ಕಾರಬಡವರಿಗೆ ಉಚಿತವಾಗಿ ಕೊಡುವ ಲಸಿಕೆ ಎಲ್ಲಾವರ್ಗದ ಬಡವರಿಗೆ ಸಿಗುವಂತಾಗಲಿ ಮತ್ತು ಮುಸ್ಲಿಂ ಸಮುದಾಯ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನುವ ತಪ್ಪು ಕಲ್ಪನೆ ದೂರ ಮಾಡುವ ಹಾಗೂ ಬೇರೆಯವರಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಮಸೀದಿಯಲ್ಲಿ ಲಸಿಕೆ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಲ್ಲಾ ಸಮುದಾಯದವರು ಇದರ ಸದುಪಯೋಗ ಪಡಿದುಕೋಳ್ಳಬೇಕು ಎಂದು ಹೇಳಿದರು. ರಿಯಾಜ್ ಅಹ್ಮದ್ ಖಾನ್ ಅವರು ಲಾಕ್ ಡೌನ್‌ನಲ್ಲಿ ಮಾಡಿದ ಕೆಲಸದ ವಿವರ ಓದಿಹೇಳಿದರು. ಈ ಸಂದರ್ಭದಲ್ಲಿ ಮಾಜಿ ನಗರ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ಜುಲ್ಲುಖದರ್ ಖಾದ್ರಿಸಾಬ್, ಜಮಾಅತ್‌ನ ಅಧ್ಯಕ್ಷರಾದ ಸೈಯದ್ ಹಿದಾಯತ್ ಅಲಿ, ಅದಿಲ್ ಪಟೇಲ್, ಮೊಹಮ್ಮದ್ ಅಲೀಮುದ್ದಿನ್, ಮೊಹಮ್ಮದ್ ಫಯಿಮುದ್ದಿನ್, ಅಸ್ಗರ್ ಖಾನ್, ಕಲಿಮುಲ್ಲಾ ಖಾನ್, ಗೌಸ ಪಟೇಲ್, ಅಬ್ದುಲ್ ರಹಿಮ್, ಮೊಹಮ್ಮದ್ ಅಖೀಲ್ ಉಡೇವು, ರಹಮತ್ ಹುಸೇನಿ, ಮಹಮ್ಮದ್ ವಾಸುದ್ದಿನ್ ಇನ್ನು ಅನೇಕ ಕಾರ್ಯಕರ್ತರು ಹಾಗೂ ಅರೋಗ್ಯ ಇಲಾಖೆಯ, ನಗರ ಸಭೆಯ ಸಿಬಂಧಿಯವು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!