ಕೋವಿಡ್ ನಿಂದ ಮೃತರ ಕುಟುಂಬಕ್ಕೆ ೧ ಲಕ್ಷ ಪರಿಹಾರ ಘೋಷಣೆ

ಬೆಂಗಳೂರು :ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ೧ಲಕ್ಷ ರೂ. ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಘೋಷಣೆ ಮಾಡಿದ್ದಾರೆ.
ಪತ್ರಕರ್ತರಿಗೆ ಈ ಮಾಹಿತಿ ನೀಡಿದ ಅವರು,
೩೦-೫೦ ವರ್ಷದೊಳಗಿನ
ದುಡಿಯುತ್ತಿದ್ದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದರೆ ಅಂತವರ ಕುಟುಂಬಕ್ಕೆ ನೆರವಾಗಲಿದೆ.
ಒಬ್ಬ ವ್ಯಕ್ತಿಗೆ ೧ ಲಕ್ಷ ರೂ. ನೀಡಲಾಗುತ್ತದೆ.
ಇದರಿಂದ ಸುಮಾರು ೨೫-೩೦ ಸಾವಿರ ಕುಟುಂಬದ ಬಿಪಿಎಲ್ ಕಾರ್ಡುದಾರರಿಗೆ ಇದರ ಪ್ರಯೋಜನ ಸಿಗಲಿದೆ.
ಕೊರೋನಾ ಸಾವಿನಿಂದ ಮೃತಪಟ್ಟ ಕುಟುಂಬದವರಿಗೆ ಇದರಿಂದ ಸ್ವಲ್ಪಮಟ್ಟಿಗೆ ನೆರವಾಗಲಿದ್ದು ದೇಶದಲ್ಲೇ ಇಂಥ ಘೋಷಣೆ ಮೊದಲು ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರ ಈ ಬಗ್ಗೆ ಇಷ್ಟರಲ್ಲೇ ಮಾನದಂಡ ಹೊರಡಿಸಲಿದ್ದು ಆನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!