ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಮನವೊಲಿಸಿ: ವಿ.ರಶ್ಮಿ ಮಹೇಶ

ಕೊಪ್ಪಳ: ಗ್ರಾಮ ಪಂಚಾಯತ ಮಟ್ಟದಿಂದ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾ.ಪಂ ಸದಸ್ಯರು ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳ ಸಹಭಾಗಿತ್ವದೊಂದಿಗೆ ಸಾರ್ವಜನಿಕರ ಮನವೊಲಿಸಿ ಕೋವಿಡ್ ಲಸಿಕೆ ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರದಂದು (ಅ.೨೫) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-೧೯ ಲಸಿಕೆಯ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕಂಡುಬಂದಿರುವ ಕಡಿಮೆ ಪ್ರಮಾಣದ ಲಸಿಕೆ ಪಡೆದಿರುವ ಗಂಗಾವತಿ ನಗರ ಪ್ರದೇಶದ ೩ನೇ ವಾರ್ಡಿನ ಸಿದ್ದಿಕೇರಿ, ೫ನೇ ವಾರ್ಡ್ ಕಿಲ್ಲಾ ಏರಿಯಾ, ೭ನೇ ವಾರ್ಡ್ ಮೆಹಬೂಬನಗರ, ೧೨ನೇ ವಾರ್ಡ್-ಇಸ್ಲಾಂಪುರ, ೧೩ನೇ ವಾರ್ಡ್-ಬನ್ನಿಗಿಡದ ಕ್ಯಾಂಪ್. ಗಂಗಾವತಿ ಗ್ರಾಮೀಣ ಪ್ರದೇಶದ ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರದಡಿಯ ಗಾಂಧಿನಗರ, ಚಿಕ್ಕ ಬೆಣಕಲ್, ಹಳೇ ಕಲ್ಗುಡಿ. ಕೊಪ್ಪಳದ ಮೆಳ್ಳಿಕೇರಿ, ಇಂದಿರಾನಗರ, ವೆಂಕಟಾಪುರ, ಚಾಮಲಾಪುರ, ಹಳೇ ಕುಮುಟಾ, ಅಚಲಾಪುರ ಗ್ರಾಮಗಳು. ಕು?ಗಿ ತಾಲ್ಲೂಕಿನ ಹೆಸರೂರು, ಚಿಕ್ಕ ಮುಕರ್ತಿನಾಳ, ಜೂಲಕಟ್ಟಿ, ಹನುಮಗಿರಿ, ಬ್ಯಾಲಿಹಾಳ, ವನಗಡ್ಡಿ, ರಾಂಪುರ ಹಾಗೂ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಲಕಲೂರು, ಉಪ್ಪಲದಿನ್ನಿ, ಬುಡಕುಂಟಿ, ಮನ್ನಾಪುರ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕಡಿಮೆ ಗ್ರಾಮಗಳಿಗೆ ಜನರಿಗೆ ಬಿಡುವು ಇರುವ ಸಮಯದಲ್ಲಿ ಲಸಿಕೆಯನ್ನು ನೀಡಬೇಕು ಎಂದರು.
ಗ್ರಾಮೀಣ ಭಾಗಗಳಲ್ಲಿ ಕೋವಿಡ್-೧೯ ಕುರಿತು ಇದುವರೆಗೂ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಕೆಲವು ಗ್ರಾಮೀಣ ಭಾಗದಲ್ಲಿ ಲಸಿಕೆ ಕುರಿತು ಗಂಭೀರತೆ ಕಾಣುತ್ತಿಲ್ಲ. ಅಂತಹ ಗ್ರಾಮಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಇನ್ನ? ಸೂಕ್ಷ್ಮ ಮಟ್ಟದಲ್ಲಿ ಜಾಗೃತಿ ಮೂಡಿಸಿ. ಇಲ್ಲಿಯವರೆಗೂ ಪೂರೈಸಿರುವ ಲಸಿಕೆಯ ಪ್ರಮಾಣದ ಅರ್ಧದ? ಲಸಿಕೆಯನ್ನು ಹದಿನೈದು ದಿನದೊಳಗೆ ನೀಡಬೇಕು. ವ್ಯಾಕ್ಸಿನ್ ಪಡೆದಿರುವ ಮತ್ತು ಪಡೆಯದೇ ಇರುವಂತವರನ್ನು ಗುರುತಿಸಲು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅಂಕಿಅಂಶಗಳನ್ನು ಸರಿಯಾಗಿ ಸಂಗ್ರಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕಾ ಕಾರ್ಯವನ್ನು ಕೈಗೊಳ್ಳಲು ಈಗಾಗಲೇ ಲಸಿಕಾ ಮೇಳದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಗಬೇಕು. ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರೇತರ ಸಂಘ, ಸಂಸ್ಥೆಗಳನ್ನು ಬಳಸಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗ್ರಹಿಸಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸಿ. ಶಾಲಾ-ಕಾಲೇಜುಗಳಲ್ಲಿ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿನಿಲಯಗಳು, ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಅವರ ಪಾಲಕರಿಗೆ ಲಸಿಕೆ ಹಾಕಿಸಿಕೊಳ್ಳಲು ತಿಳಿ ಹೇಳಲು ಶಿಕ್ಷಕರಿಗೆ ಸೂಚಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆಯದವರು ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಕಂಡುಬಂದಲ್ಲಿ ದಂಢವಿಧಿಸಬೇಕು. ಗಂಗಾವತಿ ಹಾಗೂ ಕಾರಟಗಿ ಭಾಗದ ರೈಸ್ ಮಿಲ್‌ಗಳಲ್ಲಿ ವ್ಯಾಕ್ಸಿನೇ?ನ್ ಸೆಂಟರ್‌ಗಳನ್ನು ಮಾಡಿ ಇದರಿಂದ ಅಲ್ಲಿಗೆ ಬರುವ ರೈತಾಪಿ ಜನರಿಗೆ ವ್ಯಾಕ್ಸಿನ್ ಕೊಡಬಹುದು. ಹಾಗೂ ಜನಸಂದಣಿಯಿರುವ ದೇವಸ್ಥಾನ, ಬಸ್‌ನಿಲ್ದಾಣ, ಮಾರುಕಟ್ಟೆಗಳಂತ ಸ್ಥಳಗಳಲ್ಲಿ ಸಂಬಂಧಿಸಿದ ಇಲಾಖೆಗಳು ಜಾಗೃತಿ ಮೂಡಿಸಿ ಲಸಿಕೆಯನ್ನು ನೀಡಲು ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಮೊದಲ ಡೋಸ್ ಲಸಿಕೆ ಪಡೇಯದೇ ಇರುವಂತವರ ಕಡೆ ಕೇಂದ್ರಿಕರಿಸಿ, ಸಮಯದ ನಿಬಂಧವನ್ನು ಬಿಟ್ಟು ಲಸಿಕಾ ಕಾರ್ಯವನ್ನು ಮಾಡಬೇಕು. ನಿಯಮಿತ ಮೇಲ್ವಿಚಾರಣೆ, ಬೆಂಬಲಿತ ಮೇಲ್ವಿಚಾರಣೆ ಮತ್ತು ಸಜ್ಜುಗೊಳಿಸುವಿಕೆಯ ಕಾರ್ಯ ತಾಲ್ಲೂಕು ವೈದ್ಯಾಧಿಕಾರಿಗಳಿಂದ ಆಗಬೇಕು. ಕೋವಿಡ್-೧೯ನಿಂದ ಮೃತಪಟ್ಟವರ ಕುಟುಂಬದವರಿಗೆ ನೀಡುವ ಸರ್ಕಾರದ ಪರಿಹಾರಕ್ಕೆ ಸಂಬಂಧಿಸಿದಂತೆ ಇ-ತಂತ್ರಾಂಶದಲ್ಲಿ ಬಿ.ಪಿ.ಎಲ್., ಎ.ಪಿ.ಎಲ್ ಹಾಗೂ ದತ್ತಾಂಶ ಸಂಗ್ರಹಣೆಯ ಮಾಹಿತಿಯನ್ನು ತಹಶೀಲ್ದಾರರು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು ಪರಿಶೀಲಿಸಿ ಪರಿಹಾರ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್, ಪ್ರೊಬೇ?ನರಿ ಐಎಎಸ್ ಅಧಿಕಾರಿ ಹೇಮಂತಕುಮಾರ, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!