ಕ್ಷಯರೋಗ ನಿರ್ಮೂಲನೆ ಮೊದಲ ಆದ್ಯತೆ:ಡಾ.ಈಶ್ವರ ಸವಡಿ

ಅಖಿಲ ವಾಣಿ ಸುದ್ದಿ
ಗಂಗಾವತಿ :ಕ್ಷಯರೋಗದ ಜೊತೆ ಸಕ್ಕರೆ ಕಾಯಿಲೆ ಹೊಂದಿರುವ ಸಹ ವ್ಯಾಧಿ ರೋಗಿಗಳ ಜೊತೆ ಸಾಮಾಜಿಕ ಅಂತರದೊಂದಿಗೆ ಪ್ರತಿ ಅವಧಿಗೆ ೧೨ ಜನರನ್ನೊಳಗೊಂಡ ಸಮುದಾಯ ಸಭೆ,
ಕ್ಷಯ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಕ್ಷಯ ರೋಗಿಗಳ ಆರೈಕೆ ಹಾಗೂ ಸಹದೇವ ಸೋಂಕಿನ ಚಿಕಿತ್ಸೆ ಜೊತೆಗೆ ಪೋಸ್ಟಿಕ್ ಆಹಾರ ಸೇವನೆ ಬಹು ಮುಖ್ಯವಾಗಿರುವುದನ್ನು ಮನಗಂಡು ಉಪ ವಿಭಾಗ ಆಸ್ಪತ್ರೆ ಗಂಗಾವತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕ್ಷಯರೋಗ ವಿಭಾಗದಿಂದ ಸಭೆ ಏರ್ಪಡಿಸಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರ ಸವಡಿ ಅವರು ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವನೆಯ ಜೊತೆಜೊತೆಗೆ ಸಹವ್ಯಾದಿ ಸೋಂಕುಗಳ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಮಾಡಿಸುತ್ತಾ ಮಾತ್ರೆಯನ್ನು ಸೇವಿಸುವುದರಿಂದ ಕ್ಷಯ ರೋಗವನ್ನು ಸಂಪೂರ್ಣ ತೊಡಗಿಸಬಹುದು ಎಂದು ಹೇಳಿದರು.
ಎಲ್ಲಾ ಕ್ಷಯರೋಗಿಗಳು ಕರೋನ ಲಕ್ಷಣಗಳು ಕಂಡುಬಂದಾಗ ಮುಜುಗರವಿಲ್ಲದೆ ಪರೀಕ್ಷೆಗೆ ಒಳಪಡಲು ಕರೆಕೊಟ್ಟರು ಜೊತೆಗೆ ಎಲ್ಲರೂ ಕಡ್ಡಾಯವಾಗಿ ಮಾಸ್ಕನ್ನು ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಾ ಅತಿ ಅವಶ್ಯವಾದ ಕೆಲಸವಿದ್ದರೆ ಮಾತ್ರ ಹೊರಗಡೆ ಬರಬೇಕಾಗಿ ಮನವಿ ಮಾಡಿದರು.
ಕ್ಷಯರೋಗ ಪರಿವೀಕ್ಷಕ ಮಲ್ಲಿಕಾರ್ಜುನ ಅವರು ಮಾತನಾಡಿ ಎರಡು ವಾರಕ್ಕೂ ಮೇಲ್ಪಟ್ಟು ಕೆಮ್ಮು ಸಂಜೆ ವೇಳೆ ಜ್ವರ ಬರುವುದು ಹಸಿವಾಗದಿರುವುದು ದೇಹದ ತೂಕ ಕಡಿಮೆಯಾಗುವುದು ಕತ್ತುಗಳಲ್ಲಿ ಗಡ್ಡೆಗಳ ಆಗಿರುವುದು ಲಕ್ಷಣಗಳು ಕಂಡು ಬಂದಾಗ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಈ ಲಕ್ಷಣಗಳುಳ್ಳ ವ್ಯಕ್ತಿಗಳು ಗೋಚರಿಸಿದಾಗ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿಕೊಡಲು ಮನವಿ ಮಾಡಿದರು.
ಹಾಗೂ ಕ್ಷಯ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಅವಶ್ಯವಾಗಿ ಇರುವುದೆಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಹುಸೇನ್ ಬಾಷಾ ಇವರು ಮಾತನಾಡಿ ಚಿಕಿತ್ಸೆಯಲ್ಲಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ ಐದುನೂರು ಗಳ ಸಹಾಯಧನವನ್ನು ಇಲಾಖೆ ಕೊಡ ಮಾಡುತ್ತಿದ್ದು ಅದರಲ್ಲಿ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಸೇವಿಸಬೇಕೆಂದು ಹಾಗೂ ಸರಿಯಾದ ಆಹಾರ ಕ್ರಮದಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಮೇಲ್ವಿಚಾರಕ ಶ್ರೀ ದಾನನಗೌಡ ಇವರು ಮಾತನಾಡಿ ಸಾಮಾಜಿಕ ಕಳಂಕ ತಾರತಮ್ಯ ಹಾಗೂ ಕ್ಷಯ ರೋಗಿಯನ್ನು ಪ್ರೀತಿಯಿಂದ ಕಾಣುವುದರಿಂದ ಹಾಗೂ ಕ್ಷಯ ನಿರ್ಮೂಲನೆಯ ಕಾಲ ಘಟಿಸುತ್ತಿದೆ ಎನ್ನುವ ಈ ವರ್ಷದ ಘೋಷವಾಕ್ಯದೊಂದಿಗೆ ತಾವೆಲ್ಲರೂ ಸಮಯವನ್ನು ವ್ಯರ್ಥ ಮಾಡದೆ ಸಂಶಯಾಸ್ಪದ ಕ್ಷಯ ರೋಗಿಗಳ ಚಿಕಿತ್ಸೆಗೆ ಮತ್ತು ಪರೀಕ್ಷೆಗೆ ಒಳಪಡಿಸಲು ತಿಳಿಸಿದರು, ಕ್ಷಯ ರೋಗ ಪರೀಕ್ಷಕ ರಾಘವೇಂದ್ರ ಜೋಶಿ ಅವರು ಬಂದಂತ ಎಲ್ಲಾ ಕ್ಷಯ ರೋಗಿಗಳ ಸಹ ವ್ಯಾದಿ ಹಾಗೂ ಟೆಂಪರೇಚರ್ ಮತ್ತು ಅಡ್ಡ ಪರಿಣಾಮಗಳ ಕುರಿತು ಸಮಾಲೋಚಿಸಿ ಸಹಕರಿಸಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆಯನ್ನು ಕರ್ನಾಟಕ ಆರೋಗ್ಯ ಸಂವರ್ಧನ ಸಂಸ್ಥೆ ಯ ಕುಮಾರಿ ಖಾಸಿಂಬಿ ಹಾಗೂ ಹನುಮಂತಪ್ಪ ಇವರು ನೆರವೇರಿಸಿದರು, ಈ ಮಾಯೆಯ ಕಾರ್ಯಕ್ರಮಕ್ಕೆ ಪೌಷ್ಟಿಕಾಂಶಯುಕ್ತ ಪದಾರ್ಥವನ್ನು ಕೊಡಿಸಿದವರು ಕ್ಷಯ ಗೆದ್ದ ರೋಗಿ ಮಾಬುಸಾಬ್ ಮೇಹಬೂಬ್ನಗರ್ ಹಾಗೂ ಕ್ಷಯರೋಗಿ ಕಮರುನ್ನಿಸ ಮತ್ತು ಅಂಗನವಾಡಿ ಶಿಕ್ಷಕಿ ಮಮ್ತಾಜ್ ಬೇಗಂ ಗುಂಡಮ್ಮ ಕ್ಯಾಂಪ್ ಇವರು ರಂಜಾನ್ ಹಬ್ಬದ ಪ್ರಯುಕ್ತ ವಿತರಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!