ಗಾಳಿ ಮಳೆಗೆ ೩೫ಕ್ಕೂ ಅಧಿಕ ಮನೆಗಳು ಜಖಾಂ,ನೀರುಪಾಲಾದ ಭತ್ತ ,ರೈತರ ಸಂಕಷ್ಟ

ಅಖಿಲ ವಾಣಿ ಸುದ್ದಿ
ಕಾರಟಗಿ : ಎಪ್ರಿಲ್-೨೯ ಗುರುವಾರ ರಾತ್ರಿಯ ಸಮಯದಲ್ಲಿ ಸುರಿದ ಆಲಿಕಲ್ ಮಳೆ ಮತ್ತು ಗಾಳಿಯಿಂದ ೩೫ಕ್ಕೂ ಅಧಿಕ ಮನೆಗಳ ಛಾವಣೆ ಸೇರಿದಂತೆ ಶೆಡ್ಡುಗಳ ಸೀಟುಗಳು ಕಿತ್ತಿಕೊಂಡು ದಿಕ್ಕಾಪಾಲಾಗಿವೆ, ಹಾಗೂ ಕಟಾವಿಗೆ ಬಂದು ನಿಂತಿದ್ದ ಭತ್ತವು ಸಂಪೂರ್ಣವಾಗಿ ನೆಲಕ್ಕುರುಳಿದೆ, ಅಲ್ಲದೆ ಕಾಟವ್ ಮಾಡಿ ಹಾಕಿದ್ದ ರಾಶಿಗಳು ಸಹ ಸಂಪೂರ್ಣವಾಗಿ ನೀರುಪಾಲಾಗಿದ ಘಟನೆಯು ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ನಡೆದಿದೆ.
ರಾತ್ರಿ ೮ ಗಂಟೆಯ ಸಮಯದಲ್ಲಿ ರಭಸದಿಂದ ಬೀಸಿದ ಗಾಳಿಯಿಂದಾಗಿ ೩೫ಕ್ಕೂ ಅಧಿಕ ಮನೆಗಳಿಗೆ ಹಾಕಿದ್ದ ಸೀಟುಗಳು ಹಾರಿಕೊಂಡು ಹೋಗಿವೆ. ಅಲ್ಲದೆ ದನಕರುಗಳಿಗೆ ನಿರ್ಮಿಸಲಾಗಿದ್ದ ಹಾಡುಗಳು ಸಹ ಸಂಪೂರ್ಣವಾಗಿ ಕಿತ್ತಿಕೊಂಡು ಹೋಗಿವೆ, ಹಾಗೂ ಟ್ಯಾಕ್ಟರ್ ಗಳ ಮೇಲೆ ಮರ ಬಿದ್ದು ವಾಹನ ಸಂಪೂರ್ಣ ಜಖಂ ಆಗಿದೆ, ಕಟಾವಿಗೆ ಬಂದು ನಿಂತಿದ್ದ ಭತ್ತವು ಗಾಳಿಯಿಂದಾಗಿ ಸಂಪೂರ್ಣ ನೆಲಕ್ಕುರುಳಿ ಆಲಿಕಲ್ಲು ಮಳೆಯಿಂದ ಕಾಳುಗಳು ಉದುರಿ ನೆಲಸಮವಾಗಿವೆ. ಅದು ಅಲ್ಲದೆ ಕಟವ್ ಮಾಡಿ ರಾಶಿ ಹಾಕಲಾಗಿದ್ದ ಭತ್ತದಲ್ಲಿ ನೀರು ಹೊಕ್ಕು ಸಂಪೂರ್ಣವಾಗಿ ನೆನೆದಿರುವ ಘಟನೆ ಸಿಂಗನಾಳ ಗ್ರಾಮವಲ್ಲದೇ ತಾಲೂಕಿನ ವಿವಿಧೆಡೆಯ ಗ್ರಾಮಗಳಲ್ಲಿ ಜರುಗಿದೆ.
ಮನೆ ಕಳೆದುಕೊಂಡ ಸಿಂಗನಾಳ ಗ್ರಾಮದ ನಿವಾಸಿ ಹನುಮಮ್ಮ ಪತ್ರಕರ್ತರೊಂದಿಗೆ ಮಾತನಾಡಿ ರಭಸದಿಂದ ಬೀಸಿದ ಗಾಳಿಗೆ ನಮ್ಮ ಮನೆಯ ಸೀಟುಗಳು ಪುಡಿಪುಡಿಯಾಗಿ ಒಡೆದುಹೋಗಿದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುವ ನಮಗೆ ಇರಲು ಸಣ್ಣ ಮನೆ ಇತ್ತು. ಈಗ ಅದು ಸಹ ಸಂಪೂರ್ಣವಾಗಿ ಕಿತ್ತಿಕೊಂಡು ಹೋಗಿದೆ. ಈಗ ಎಲ್ಲಿ ಇರಬೇಕೆಂಬುದೇ ದೊಡ್ಡ ಸಮಸ್ಯೆಯಾಗಿದೆ. ಸಣ್ಣ ಮಕ್ಕಳು ಇದ್ದಾರೆ, ಅವರನ್ನು ಕಟ್ಟಿಕೊಂಡು ಎಲ್ಲಿ ಬದಕಬೇಕು.? ಜೀವನ ಮಾಡಲು ಸಹ ಕಷ್ಟವಾಗುತ್ತಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ, ಬಡವರಿಗೆ ದಾರಿ ತೋರಿಸಿ ಎಂದು ಕಣ್ಣಿರಿಟ್ಟರು. ನಂತರ ರೈತರು ಮಾತನಾಡಿ ಶಾಸಕರನ್ನು ಈ ಮೂಲಕ ಮನವಿ ಮಾಡಿಕೊಳ್ಳುತ್ತೆವೆ. ಬಡವರ ಕಷ್ಟದಲ್ಲಿ ಭಾಗಿಯಾಗುತ್ತಾರೆ ಎನ್ನುವ ನಂಬಿಕೆ ನಮ್ಮಗಿದೆ ಎಂದರು. ಸ್ಪಂದಿಸುವ ಗುಣ ಅವರದು ಎಂದರು.

” ನಷ್ಟಕ್ಕೀಡಾದ ಮನೆಗಳ ಮಾಹಿತಿಯನ್ನು ಪಡೆಯಲಾಗಿದೆ. ರೈತರ ಬೆಳೆ ಹಾನಿಯನ್ನು ಸಮೀಕ್ಷೆ ಮಾಡಿ ಕಳುಹಿಸಲಾಗುತ್ತಿದೆ. ಶೀಘ್ರದಲ್ಲಿ ನಷ್ಟವಾದವರಿಗೆ ಪರಿಹಾರವನ್ನು ಸರ್ಕಾರ ಒದಗಿಸುತ್ತದೆ”
ಮರಳುಸಿದ್ದಪ್ಪ – ಗ್ರಾಮ ಲೆಕ್ಕಾಧಿಕಾರಿ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!