ಗಿಣಿಗೇರಿ ಗೇಟ್ ಸಂಖ್ಯೆ ೭೨ಕ್ಕೆ ಮೇಲ್ಸೇತುವೆ : ಕರಿಯಪ್ಪ ಮೇಟಿ ಹರ್ಷ


ಕೊಪ್ಪಳ : ತಾಲೂಕಿನ ಗಿಣಿಗೇರಿ ಗ್ರಾಮದ ಗೇಟ್ ಸಂಖ್ಯೆ ೭೨ಕ್ಕೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ರೂ.೧೭.೭೩ ಕೋಟಿ ವೆಚ್ಚದ ಕಾಮಗಾರಿಗೆ ಕಾರ್ಯಾದೇಶ ದೊರಕಿಸಿ ಕೊಡಲು ಕಾರಣೀಭೂತರಾದ ಸಂಸದ ಸಂಗಣ್ಣ ಕರಡಿಯವರ ಕಾರ್ಯಕ್ಕೆ ಕೊಪ್ಪಳ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕರಿಯಪ್ಪ ಮೇಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಗಿಣಿಗೇರಿ ಗೇಟ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ರೂ.೧೭.೭೩ ಕೋಟಿ ವೆಚ್ಚದಲ್ಲಿ ೧೫ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಗಿಣಿಗೇರಿ ಗ್ರಾಮದ ಬಹುದಿನದ ಬೇಡಿಕೆ ಈಡೇರಿದಂತಾಗಿದೆ,ಇದರಿಂದ ನಿತ್ಯ ಸಮಸ್ಯೆಯಾಗಿದ್ದ ಈ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ, ಕೊಪ್ಪಳ, ಹುಬ್ಬಳ್ಳಿಯಿಂದ ಹೈದ್ರಾಬಾದ್,ರಾಯಚೂರುಗೆ ಸಂಚಾರಿಸುವರಿಗೆ, ಈ ಭಾಗದ ಕೈಗಾರಿಕೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಕಾಮಗಾರಿ ಆದಷ್ಠು ಬಹುಬೇಗನೆ ಮುಗಿದು ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!