ಗೋರಂಟ್ಲಿಯವರು ಆದ್ಯಾತ್ಮ ರಂಗದಲ್ಲೂ ಪರಿಪೂರ್ಣತೆ ಹೊಂದಿದ್ದವರು: ಗವಿಶ್ರೀ

ಕೊಪ್ಪಳ : ವಿಠ್ಠಪ್ಪ ಗೋರಂಟ್ಲಿ ಯವರು ತಮ್ಮ ಬದುಕಿನುದ್ದಕ್ಕೂ ಎಲ್ಲ ರಂಗಗಳಲ್ಲಿ ತೊಡಗಿಸಿಕೊಂಡವರು. ಎಲ್ಲದರಲ್ಲೂ ಪರಿಪೂರ್ಣತೆ ಹೊಂದಿದ್ದರು. ಆದ್ಯಾತ್ಮ ಸಾಧನೆಯಲ್ಲೂ ಪರಿಪೂರ್ಣತೆ ಹೊಂದಿದ್ದರು ಎಂದು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.ಇತ್ತೀಚೆಗೆ ನಿಧನರಾದ ಭಾಗ್ಯನಗರದ ಹಿರಿಯ ಸಾಹಿತಿ,ಪತ್ರಕರ್ತ,ಹೋರಾಟಗಾರ ಹಾಗೂ ಜ್ಞಾನ ಯುಗ ಪರಂಪರೆಯ ಅನುಭಾವಿ ಸಾಧಕ ವಿಠ್ಠಪ್ಪ ಗೋರಂಟ್ಲಿ ಅವರ ಪುಣ್ಯಾರಾಧನೆ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಷ್ಟು ವರ್ಷಗಳ ಕಾಲ ಸತ್ಸಂಗ ಪರಂಪರೆಯನ್ನು ಗೋರಂಟ್ಲಿಯವರು ಮುನ್ನಡೆಸಿಕೊಂಡು ಬಂದಿದ್ದಾರೆ. ಅದು ಇಲ್ಲಿಗೆ ನಿಲ್ಲಬಾರದು ನಿರಂತರವಾಗಿ ಮುಂದುವರೆಯಬೇಕು. ಬದುಕಿನಲ್ಲಿ ಇವತ್ತು ಇದ್ದದ್ದು ನಾಳೆ ಇರುವುದಿಲ್ಲ. ಬದಲಾವಣೆ ನಿರಂತರ. ಕಂಡದ್ದು ಕಾಣೆಯಾಗುತ್ತೆ, ಕಾಣದ್ದು ಯಾವತ್ತೂ ಇರುತ್ತೆ ಅದು ಶಾಶ್ವತ ಎಂದು ಹೇಳಿದರು.ಸದಾನಂದ ಜ್ಞಾನಯೋಗಾಶ್ರಮದಲ್ಲಿ ನಿರ್ಮಿಸಿರುವ ಗದ್ದುಗೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು.

ನಂತರ ಜರುಗಿದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ , ಹಿರಿಯ ಅನುಭಾವಿ ಸಾಧಕ ಚಂದ್ರಾಮಪ್ಪ ಕಣಗಾಲ್ ಮಾತನಾಡಿ, ವಿಠ್ಠಪ್ಪನವರು ಜ್ಞಾನಯೋಗ ಮಾರ್ಗದ ಸಾಧಕರಾಗಿದ್ದರು, ಸದಾನಂದ ಯೋಗಿಗಳ ಮಾರ್ಗದಲ್ಲಿ ಅವರು ವೇದ,ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳನ್ನು ಗುರುಮುಖೇನವಾಗಿ ಗ್ರಹಿಸಿದ್ದರು. ನಿರಂತರವಾಗಿ ಸತ್ಸಂಗಗಳನ್ನು ನಡೆಸುವ ಮೂಲಕ ತತ್ವ,ಸಾಮರಸ್ಯಪೂರ್ಣವಾದ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು.ವಿಠ್ಠಪ್ಪನವರು ಭೌತಿಕವಾಗಿ ಅಗಲಿದ್ದರೂ ಕೂಡ ಚಿಂತನೆಗಳು,ಸಾಧನೆಗಳ ಮೂಲಕ ಸದಾಕಾಲ ಮಾರ್ಗದರ್ಶನ ಮಾಡುತ್ತಿರುತ್ತಾರೆ ಎಂದರು.

ಪ್ರೊ.ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ವಿಠ್ಠಪ್ಪನವರ ಹೋರಾಟದ ಬದುಕು , ಗೀತೆಯ ಕುರಿತು ಅವರಿಗಿದ್ದ ತಿಳುವಳಿಕೆ ವಿಶಿಷ್ಠವಾಗಿತ್ತು.ಆರ್ಥಿಕ ಸಂಕಷ್ಟಗಳ ನಡುವೆಯೂ ಅವರು ಮಾಡಿದ ಸಾಧನೆ ಅನನ್ಯವಾದುದು ಜೀವಪರ ಆಲೋಚನೆಗಳನ್ನು ಹೊಂದಿದ್ದ ವಿಠ್ಠಪ್ಪನವರನ್ನು ಕಳೆದುಕೊಂಡಿರುವ ಹೋರಾಟಗಳು, ಕಲೆ,ಸಾಹಿತ್ಯ,ಸಾಂಸ್ಕೃತಿಕ ಹಾಗೂ ಅವರ ನಂಬುಗೆಯ ಆಧ್ಯಾತ್ಮ ವಲಯಕ್ಕೆ ಅಪಾರ ನಷ್ಟವಾಗಿದೆ ಎಂದರು.ಭಾಗ್ಯನಗರ ಶಂಕರಮಠದ ಶಿವಪ್ರಕಾಶಾನಂದ ಸ್ವಾಮೀಜಿ,ದದೇಗಲ್ ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮೀಜಿ ಸೇರಿದಂತೆ ಶ್ರಮಣಧಾರೆಗಳ ಪರಂಪರೆಯ ಅನೇಕ ಸಾಧಕರು ಸಾನಿಧ್ಯ ವಹಿಸಿದ್ದರು.

ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ಕಬ್ಬೇರ, ಶೇಖರಗೌಡ ಮಾಲಿಪಾಟೀಲ,ಕೊಟ್ರಪ್ಪ ತೋಟದ, ಸಿ.ವಿ.ಚಂದ್ರಶೇಖರ, ಶ್ರೀನಿವಾಸ ಗುಪ್ತಾ, ವೀರಣ್ಣ ನಿಂಗೋಜಿ,ವೀರಣ್ಣ ಹುರಕಡ್ಲಿ, ಅನ್ನಪೂರ್ಣ ಮನ್ನಾಪುರ,ವೆಂಕನಗೌಡ ಎಲ್.ಪಾಟೀಲ,ಮಂಜುನಾಥ ಡೊಳ್ಳಿನ, ಎಸ್.ಶರಣೇಗೌಡ ಮತ್ತಿತರರು ನುಡಿನಮನ ಸಲ್ಲಿಸಿದರು.
ಡಿ.ಹೆಚ್.ಪೂಜಾರ,ಮಹಾಂತೇಶ ಕೊತಬಾಳ, ಶಿ.ಕಾ.ಬಡಿಗೇರ,ಸಿರಾಜ್ ಬಿಸರಳ್ಳಿ,ಅರುಣಾ ನರೇಂದ್ರ ಮತ್ತಿತರರು ಸೇರಿದಂತೆ ಸತ್ಸಂಗ ಬಳಗದ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು. ಅಕ್ಷತಾ ಬಣ್ಣದಬಾವಿ ಮತ್ತು ಸಂಗಡಿಗರು ವಚನಗಾಯನ ನಡೆಸಿಕೊಟ್ಟರು. ರಾಜಶೇಖರ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.ಹೊಸಪೇಟೆಯ ಮಹಾಂತೇಶ ವಂದಿಸಿದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!