ಗ್ರಾಮೀಣ ಜನರು ನರೇಗಾ ಯೋಜನೆ ಪಡೆದುಕೊಳ್ಳಲಿ: ಬಸವರಾಜ ಬಡಿಗೇರ್

ಯಲಬುರ್ಗಾ: ತಾಲೂಕಿನ ಮಲಕಸಮುದ್ರ ಕೆರೆಯಲ್ಲಿ ಜರುಗಿದ ದುಡಿಯೋಣ ಬಾ ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ಅಧಿಕಾರಿ ಬಸವರಾಜ ಬಡಿಗೇರ್ ಮಾತನಾಡಿದರು.
’ಗ್ರಾಮೀಣ ಜನರು ನರೇಗಾ ಯೋಜನೆ ಪಡೆದುಕೊಳ್ಳಲಿ’
ಯಲಬುರ್ಗಾ:ಪ್ರತಿಯೊಬ್ಬ ನಾಗರಿಕರೂ ಸರಕಾರದಿಂದ ಗ್ರಾಮ ಪಂಚಾಯಿತಿಗೆ ಅನುಷ್ಠಾನಗೊಂಡ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ್ ಹೇಳಿದರು.
ತಾಲೂಕಿನ ಮಲಕಸಮುದ್ರ ಕೆರೆಯಲ್ಲಿ ಆಯೋಜಿಸಿದ್ದ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಯಿಂದ ಕೂಲಿ ಬೇಡಿಕೆ ಹಿನ್ನೆಲೆ ರೋಜಗಾರ್ ದಿನಾಚರಣೆ ’ದುಡಿಯೋಣ ಬಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದರು.
ತಾಲೂಕಿನಾದ್ಯಂತ ಈಗಾಗಲೇ ನಾನಾ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಪ್ರಾರಂಭವಾಗಿದ್ದು,ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾನಾ ಹಳ್ಳಿಯಗಳಲ್ಲಿನ ನಾಲಾ ಸುಧಾರಣೆ, ಕೆರೆ ಹೂಳೆತ್ತುವುದು ಸೇರಿದಂತೆ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶ ವಿದ್ದು,ಕೂಲಿಕಾರರು ಸರಕಾರದ ಮಹಾತ್ವಕಾಂಕ್ಷೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ಸರಕಾರವೂ ೧೦೦ ದಿನಗಳವರಗೆ ಜನರಿಗಾಗಿ ಕೂಲಿ ಕೆಲಸ ನೀಡುತ್ತಿದ್ದು, ತಪ್ಪದೇ ಕಾರ್ಯಕ್ರಮಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರತ್ನಮ್ಮ ಗುಂಡಣ್ಣವರ್, ತಾಂತ್ರಿಕ ಸಂಯೋಜಕ ಸಂತೋಷ ನಂದಾಪೂರ,ಮಾಹಿತಿ ಶಿಕ್ಷಣ ಸಂಯೋಜಕ ಲಕ್ಷ್ಮಣ್ ಕೆರಳ್ಳಿ,ತಾಂತ್ರಿಕ ಸಹಾಯಕ ವಿಜಯಕುಮಾರ ಬಳಿಗಾರ,ಸಮುದಾಯ ತಾಂತ್ರಿಕ ಸಹಾಯಕ ಈರಣ್ಣ ಹಳ್ಳಿ,ಕಾಯಕ ಬಂಧುಗಳಾದ ಮೈಲಾರಪ್ಪ,ಜಗದೀಶ ದೇಸಾಯಿ ಹಾಗೂ ಕೂಲಿಕಾರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!