ಚಿಕ್ಕಜಂತಕಲ್ ಪವರ್ ಪ್ಲಾಂಟ್ನ ಹಾರೊ ಬೂದಿಯಿಂದ ತತ್ತರಿಸಿದ ಜನತೆ

ಅಖಿಲ ವಾಣಿ ಸುದ್ದಿ: ಗಂಗಾವತಿ: ತಾಲೂಕಿನ ಚಿಕ್ಕ ಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಂದ್ರ ಪವರ್ ಪ್ಲಾಂಟ್ ಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪವರ್ ಪ್ಲಾಂಟ್ ನಿರ್ವಾಹಕ ದತ್ತಾತ್ರೇಯ ಶರ್ಮಾ ಅವರಿಗೆ ನಿರ್ವಾಹಕರಾದ ದತ್ತಾತ್ರೇಯ ಶರ್ಮ ಗೆ ತರಾಟೆಗೆ ತೆಗೆದುಕೊಂಡ ಘಟನೆ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಈ ಹಿಂದೆ ಹಲವು ಬಾರಿ ತಹಶೀಲ್ದಾರರು ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿನಿತ್ಯ ಪವರ್ ಪ್ಲಾಂಟ್ ನಿಂದ ಹೊರಬರುವಂತಹ ಘನತ್ಯಾಜ್ಯ ವಸ್ತು ಮತ್ತು ಕಪ್ಪು ಬೂದಿ ಮತ್ತು ಧೂಳಿನಿಂದ ಗ್ರಾಮದ ಹಿರಿಯರಿಗೂ ಮತ್ತು ಯುವಕರಲ್ಲಿ ಆರೋಗ್ಯದ ತೊಂದರೆ ಉಂಟಾಗಿದ್ದು ರಿಂದ ಇಂದು ಗ್ರಾಮದ ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿಕೊಂಡು ಪವರ್ ಪ್ಲಾಂಟ್ ಗೆ ಮುತ್ತಿಗೆ ಹಾಕಿ ಪವರ್ ಪ್ಲಾಂಟ್ ಗೆ ಬೀಗ ಜಡಿದ ಯುವಕರು ನಂತರ ಗ್ರಾಮದ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಗ್ರಾಮದಲ್ಲಿ ಸಮಸ್ಯೆಯ ಬಗ್ಗೆ ಪವರ್ ಪ್ಲಾಂಟ್ ನಿರ್ವಾಹಕರಿಗೆ ತೋರಿಸಿತು ಮಹಿಳೆಯರು ತರಾಟೆಗೆ ತೆಗೆದುಕೊಂಡ ನಂತರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಡುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!