ಜನತೆಗೆ ನೀರಿನ ದಾಹ ತೀರಿಸುವ ಕಾರ್ಯ
ಶ್ಲಾಘನೀಯ : ಜೆ.ರಾಯಪ್ಪ

ಅಖಿಲ ವಾಣಿ ಸುದ್ದಿ ಸಿಂಧನೂರು : ತಾಲೂಕಿನಲ್ಲಿ ದಿನ ದಿನಕ್ಕೂ ಬಿಸಿಲಿನ ತಾಪ ಮಾನ ಹೆಚ್ಚಾಗುತ್ತಲೇ ಇದೆ.ಹಳ್ಳಿಗಳಿಂದ  ನಗರಕ್ಕೆ  ಬರುವ ಜನಗಳು ಮತ್ತು ನಗರದ ಜನತೆ  ಬಿಸಿಲಿನ ಹೊಡೆತಕ್ಕೆ ಸ್ವಲ್ಪ  ಬಾಯಾರಿದರೆ  ಹೋಟೆಲ್ ಮತ್ತು ಕೂಲ್ ಡ್ರಿಂಕ್ಸ ಅಂಗಡಿಗಳಿಗೆ ಹೋಗಿ ದುಡ್ಡು ಕೊಟ್ಟು ನೀರನ್ನು ಕುಡಿಯಬೇಕಾಗಿದೆ.ಅಂತಹ ಪರಿಸ್ಥಿಯಲ್ಲಿ  ದಿನ ದಲಿತರ ಹಾಗೂ ಹಿಂದುಳಿದ ವರ್ಗದ ನಾಯಕರು ಅಂತ ತಮ್ಮದೇ ಛಾಪು ಮೂಡಿಸಿದ್ದ ದಿ.ಕೆ.ನಾಗಪ್ಪ ನವರ ಹೆಸರಿನಲ್ಲಿ ಪ್ರತಿ ವರ್ಷವು ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದು.ಅದರಂತೆ ಈ ವರ್ಷವು ಕೂಡ ದಿ.ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿ ಕೊಡುವ ಮೂಲಕ ನೀರಿನ ದಾಹವನ್ನು ನೀಗಿಸುವ ಕಾರ್ಯ ತುಂಬಾ ಶ್ಲಾಘನೀಯ ಎಂದು ಅಹಿಂದ ಸಂಘಟನೆ ತಾಲೂಕ ಘಟಕದ ಅಧ್ಯಕ್ಷ ಜೆ.ರಾಯಪ್ಪ ವಕೀಲರು ಹೇಳಿದರುನಗರದ ತಹಶೀಲ್ದಾರ್ ಕಚೇರಿ ಮುಂದೆ ದಿ.ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ  ಅವರು ಮಾತನಾಡುತ್ತ ಈಗಾಗಲೇ ತಾಲೂಕಿನಾದ್ಯಂತ ದಿ.ಕೆ. ನಾಗಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನೇಕ ಜನಪರ ಹಾಗೂ ಸಾಮಾಜಿಕ ಚಿಂತನೆಯುಳ್ಳ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು. ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕೆ.ಕರಿಯಪ್ಪ ನವರು ತಾಲೂಕಿನ ನೊಂದು – ಬೆಂದ ಜನರಿಗೆ ಸಹಾಯ ಸಹಕಾರ ಮಾಡುತ್ತ ತಾಲೂಕಿನಲ್ಲಿ ಒಬ್ಬ ಜನಪರ ಕರುಣೆಯುಳ್ಳ ಜನನಾಯಕರೆಂದು ಗುರುತಿಸಿ ಕೊಂಡಿದ್ದಾರೆ. ಅವರ ತಂದೆಯವರ ಜನಪರ ಕಾರ್ಯಕ್ರಮಗಳ ಹಾದಿಯಲ್ಲೇ ಕೆ.ಕರಿಯಪ್ಪನವರು ಇವತ್ತಿಗೂ ಸಮಾಜ ಮುಖಿಯಾಗಿ ಜನಪರ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ.ಈ ಬಿಸಿಲು ನಾಡಿನ ಜನತೆಗೆ ಭರವಸೆಯ ಜನ ನಾಯಕರಾಗಿ ಮುಂದೆ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನೂ ಮಾಡುತ್ತ ಜನಪ್ರಿಯತೆಯನ್ನು ಗಳಿಸಲಿ ಹಾಗೂ ದಿವಂಗತ ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸದಾ ಸಾಮಾಜಿಕ ಕಾರ್ಯಗಳು ಹೆಚ್ಚೆ ಹೆಚ್ಚು ನಡೆಯಲಿ ಎಂದು ಹೇಳಿದರುವನಸಿರಿ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ನೀರಿನ ಅರವ ಟ್ಟಿಗೆಯನ್ನು ಉದ್ಘಾಟಿಸಿದರು.ಸಂಸ್ಥಾಪಕ ಅಧ್ಯಕ್ಷ ಕೆ.ಕರಿಯಪ್ಪ.ದೇವೆಂದ್ರಗೌಡ.ನಾಗರಾಜ ಆನೆಗುಂದಿ.ಅಮರೇಶಪ್ಪ ಮೈಲಾಪುರ.ಬೀರಪ್ಪ ಸುಲ್ತಾನಪುರು.ರಾಘವೇಂದ್ರ ಹೇಡಗಿನಾಳ.ಈರಣ್ಣ ಸೇರಿದಂತೆ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!