ಜಮಾಅತೆ ಇಸ್ಲಾಮಿ ಹಿಂದ್’ನ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಫ್ರೊ. ಕೆ.ಎ ಸಿದ್ದೀಕ್ ಹಸನ್ ವಿಧಿವಶ

ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಕೇರಳ ಜಮಾಅತ್ ನ ಮಾಜಿ ಅಧ್ಯಕ್ಷ ಮತ್ತು ಮಾಧ್ಯಮಂ ಮೀಡಿಯಾ ಸಂಸ್ಥೆಯ ಮಾಜಿ ಚೇರ್ಮನ್ ಕೂಡ ಆಗಿದ್ದ ಪ್ರೊಫೆಸರ್ ಕೆ ಎ ಸಿದ್ದೀಕ್ ಹಸನ್ (೭೬) ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದಾಗಿ ಹಲವು ಸಮಯದಿಂದ ಕೋಯಿಕೋಡ್ ನಲ್ಲಿರುವ ಮಗನ ಮನೆಯಲ್ಲಿ ಅವರು ವಿಶ್ರಾಂತ ಜೀವನ ನಡೆಸುತ್ತಿದ್ದರು.
೧೯೯೦ ರಿಂದ ೨೦೦೫ರ ವರೆಗೆ ನಾಲ್ಕು ಬಾರಿ ಕೇರಳ ಜಮಾಅತೆ ಇಸ್ಲಾಮೀ ಹಿಂದ್ ನ ಅಧ್ಯಕ್ಷರಾಗಿದ್ದ ಅವರು ದೆಹಲಿಯಿಂದ ಕಾರ್ಯಾಚರಿಸುತ್ತಿದ್ದ ವಿಷನ್ ೨೦೧೬ ನ ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಪತ್ನಿ ವಿ ಕೆ ಝುಬೈದರನ್ನೂ ಮಕ್ಕಳಾದ ಫಝಲುರ್ರಹ್ಮಾನ್, ಸಾಬಿರ, ಶರ್ಫುದ್ದೀನ್, ಅನೀಸುರ್ರಹ್ಮಾನ್ ರನ್ನೂ ಮತ್ತು ಅಪಾರ ಬಂಧು ಬಳಗವನ್ನೂ ಅಗಲಿದ್ದಾರೆ.
ಅವರ ನಿಧನಕ್ಕೆ ಜಮಾಅತ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಾದತುಲ್ಲಾಹ್ ಹುಸೈನಿ, ರಾಜ್ಯ ಅಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ಸಹಿತ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!