ಜಿಪಂ,ತಾಪಂ ಚುನಾವಣೆ’ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ‘ಡಿಸೆಂಬರ್’ವರೆಗೆ ಚುನಾವಣೆ ಮುಂದೂಡಿಕೆ ನಿರ್ಧಾರ
ಬೆಂಗಳೂರು : ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿಗಳಿಗೆ ರಾಜ್ಯ ಸರ್ಕಾರದಿಂದ ಮೀಸಲಾತಿಯನ್ನು ಪ್ರಕಟಗೊಳಿಸಲಾಗಿದೆ. ಇನ್ನೇನು ಚುನಾವಣೆ ಕೂಡ ಸದ್ಯದಲ್ಲೇ ಘೋಷಣೆ ಕೂಡ ಆಗಲಿದೆ ಎಂದೇ ನಿರೀಕ್ಷೆಸಲಾಗಿತ್ತು. ಆದ್ರೇ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವಂತ ನಿರ್ಣಯವನ್ನು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ. ಈ ಮೂಲಕ ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ.
ಜುಲೈ.೧೯ರವರೆಗೆ ರಾಜ್ಯದಲ್ಲಿ ‘ಭಾರೀ ಮಳೆ’, ಈ ಜಿಲ್ಲೆಗಳಲ್ಲಿ ‘ಹವಾಮಾನ ಇಲಾಖೆಯಿಂದ ಆರೇಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ
ಈ ಕುರಿತಂತೆ ಇಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ೨೦೨೧ರ ಡಿಸೆಂಬರ್ ವರೆಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸದಿರಲು ನಿರ್ಧರಿಸಿದೆ. ಚುನಾವಣೆಯ ಬಗ್ಗೆ ಈಗ ಡಿಸೆಂಬರ್ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಗದಗ ಪಶುವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ೫೦ ಕೋಟಿಗೆ ಹೆಚ್ಚುವರಿ ೩೦ ಕೋಟಿ ಅನುದಾನ ನೀಡೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಬೆಳೆ ಸರ್ವೆಗೆ ಹೊಸ ಆಯಪ್ ರಚನೆಗೆ ಒಪ್ಪಿಗೆ ನೀಡಲಾಗಿದೆ. ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಫೆಬ್ರವರಿ ೯ ರಿಂದ ೧೨ರವರೆಗೆ ಮೂರು ದಿನ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಇನ್ನೂ ಇನ್ವೆಸ್ಟ್ ಕರ್ನಾಟಕ ೨೨-೨೨ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಆಕ್ಸಿಜನ್ ಮ್ಯಾನ್ಯುಪ್ಯಾಕ್ಚರಿಂಗ್ ಘಟಕ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ೯ ಘಟಕಗಳು ಇವೆ. ೮೦೦ ಮೆಟ್ರಿಕ್ ಅನ್ ಕ್ಯಾಪಾಸಿಟಿ ಇದೆ. ಇದನ್ನ ಹೆಚ್ಚಿಸುವ ಬಗ್ಗೆ ಸಂಪುಟ ನಿರ್ಧರಿಸಲಾಗಿದೆ. ೨೫% ಕ್ಯಾಪಿಟಲ್ ಸಬ್ಸಿಡಿಯನ್ನ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಆಕ್ಸಿಜನ್ ಘಟಕ ಸ್ಥಾಪನೆ ಮಾಡಲು ಮುಂದೆ ಬಂದವರಿಗೆ ನೀಡ್ತೇವೆ. ಮೂರು ವರ್ಷ ವಿದ್ಯುತ್ ಬಿಲ್ ವಿನಾಯ್ತಿ ನೀಡಲಾಗುವುದು. ಮೆಟ್ರಿಕ್ ಟನ್ ಗೆ ೧೦೦೦ ರೂ. ಫವರ ಟಾರಿಪ್ ಕೊಡ್ತೇವೆ. ಹಾಗೆಯೇ ಭೂಮಿಯ ರಿಜಿಸ್ಟ್ರೇಶನ್ ವಿನಾಯ್ತಿ ಇದೆ. ಆಕ್ಸಿಜನ್ ಘಟಕ ಸ್ಥಾಪನೆ ಮಾಡುವವರಿಗೆ ನೀಡಲಾಗುವುದು ಎಂದು ತಿಳಿಸಿದರು.
ದಾಸನಪುರ ಎಪಿಎಂಸಿ ನಿರ್ಮಾಣವಾಗಿದೆ. ೯೩ ಲೀಸ್ ಕಂ ಸೇಲ್ ಮಳಿಗೆಗಳಿವೆ. ೫೪ ಮಳಿಗೆಗಳು ಬಾಡಿಗೆಗೆ ನೀಡಲಾಗಿದೆ. ಲೀಸ್ ಕಂ ಸೇಲ್ ಹಣ ೨೦ ಲಕ್ಷಕ್ಕೆ ಕಡಿತಮಾಡಲಾಗಿದೆ. ಮಾಸಿಕ ಬಾಡಿಗೆಯನ್ನ ೨೦ ರಿಂದ ೧೨ ಸಾವಿರಕ್ಕೆ ಇಳಿಸಿದ್ದೇವೆ. ಎಪಿಎಂಸಿಯಲ್ಲಿರುವ ಮಳಿಗೆಗಳ ಬಾಡಿಗೆ ಇಳಿಸಿದ್ದೇವೆ ಎಂಬುದಾಗಿ ಹೇಳಿದರು.
ಜಾಬ್ ಓರಿಯಂಟ್ ಕೋರ್ಸ್ ಬೇಡಿಕೆ ಇತ್ತು. ಜೆಒಸಿಯನ್ನ ಪಿಯುಸಿಗೆ ತತ್ಸಮಾನವಾಗಿ ನೀಡಲಾಗುತ್ತದೆ. ದೇವದುರ್ಗದಲ್ಲಿ ಎಂಜಿಜಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ೫೮ ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮ ನಡವಳಿಕೆ ತೋರಿದಂತ ೧೩೯ ಖೈದಿಗಳಿಗೆ ಬಿಡುಗಡೆ ಭಾಗ್ಯಕ್ಕೆ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಇಂತಹ ೧೩೯ ಖೈದಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಬಡ್ತಿ ನಿಯಮ ಸಡಿಲಿಕೆ ಮಾಡುವಂತ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ೩೦೫೦ ಎಸ್ ಡಿಎ ಫೋಸ್ಟ್ ಹಾಗೂ ೨೪೫೪ ಎಫ್ ಡಿಎ ಫೋಸ್ಟ್ ಗಳಿವೆ ಕಂಬೈನ್ಡ್ ಆಗಿ ಬಡ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಜರ್ಮನ್ ಟೆಕ್ನಾಲಜಿಯಡಿ ತರಬೇತಿ ನೀಡೋದಕ್ಕಾಗಿ ಮಂಗಳೂರು, ಬೆಳಗಾವಿಯಲ್ಲಿ ಟೆಕ್ನಾಲಜಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದರು.
ಸಿರಗುಪ್ಪನಗರಕ್ಕೆ ನೀರುಪೂರೈಕೆಗೆ ಯೋಜನೆಗಾಗಿ ೪೫.೪೬ ಲಕ್ಷ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ. ರಾಣೆಬೆನ್ನೂರಿನಲ್ಲಿ ೧೮ ಕೆರೆ ನೀರು ತುಂಬುವ ಯೋಜನೆಗಾಗಿ ೨೦೬ ಕೋಟಿ ಹಣವನ್ನ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಕೊಪ್ಪಳದ ೫ ಕೆರೆಗಳಿಗೆ ನೀರು ಪೂರೈಕೆಗೆ ಯೋಜನೆಗಾಗಿ ೯೫ ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇನ್ನೂ ಅಧಿವೇಶನ ನಡೆಸುವ ಬಗ್ಗೆ ಮುಂದೆ ಚರ್ಚೆ ನಡೆಸ್ತೇವೆ. ಅಧಿವೇಷನಕ್ಕೆ ಅನುದಾನ ಸಿಗುತ್ತಿಲ್ಲವೆಂಬ ಆರೋಪ ಸರಿಯಲ್ಲ. ನಾವು ಸಂಪುಟದಲ್ಲಿ ಹಣ ರಿಲೀಸ್ ಮಾಡ್ತೇವೆ. ಫೈನಾನ್ಸ್ ಡಿಪಾರ್ಟ್ ಮೆಂಟ್ ಅಪ್ರೂವಲ್ ಕೊಡುತ್ತದೆ. ಆರ್ಥಿಕ ಸಮಸ್ಯೆಯೇನು ಉದ್ಬವಿಸಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಕೋವಿಡ್ ನಿಂದಾಗಿ ಜನರಲ್ ಎಲೆಕ್ಷನ್ ಮಾಡಲ್ಲ ಎಂಬುದು ಇಂದಿನ ಸಂಪುಟದಲ್ಲೂ ಚರ್ಚೆಯಾಗಿದೆ. ಸಹಕಾರ ಸಂಘದ ಎಲೆಕ್ಷನ್ ಮಾಡಬಹುದು. ಇಂದು ಸಂಪುಟ ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂಬುದಾಗಿ ತಿಳಿಸಿದರು.