ಜಿಲ್ಲೆಯ ಒಟ್ಟು ಒಂದು ಪುರಸಭೆ 4 ಪ.ಪಂ ಚುಣಾವಣೆ: ಕಾಂಗ್ರೆಸ್-49,ಬಿಜೆಪಿ-41,ಜೆಡಿಎಸ್-1,ಪಕ್ಷೇತರ-5 ಸ್ಥಾನಗಳಲ್ಲಿ ಗೆಲವು

ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯಿತಿ ೧೯ ವಾರ್ಡ್ ಗಳಲ್ಲಿ, ೮ ಕಾಂಗ್ರೆಸ್, ೯ ಬಿಜೆಪಿ, ೨ ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಆದರೆ ಪಲಿತಾಂಶ ಅತಂತ್ರವಾಗಿದೆ.
ಕನಕಗಿರಿ ಶಾಸಕ ಬಸವರಾಜ್ ದಡೆಸೂಗೂರ್‌ಗೆ ಮುಖಭಂಗ : ಕಾರಟಗಿಯಲ್ಲಿ ಜೆಡಿಎಸ್ ನಿರ್ಣಾಯಕ
ಶಾಸಕ ಬಸವರಾಜ್ ದಡೆಸೂಗೂರಗೆ ಸ್ವಕ್ಷೇತ್ರವಾದ ಕನಕಗಿರಿಯಲ್ಲಿ ಸೋಲು ಕಾಣುವಂತಾಗಿದ್ದು ಕಾಂಗ್ರೆಸ್ ಮುನ್ನಡೆಯಿಂದ ತೀವ್ರ ಮುಖಭಂಗವಾಗಿದೆ.
ಕನಕಗಿರಿಯ ೧೭ ವಾರ್ಡಗಳ ಪೈಕಿ ೧೨ ರಲ್ಲಿ ಕಾಂಗ್ರೆಸ್ ಜಯಬೇರಿ ಸಾಧಿಸಿದ್ದು ೫ರಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.
ಕಾರಟಗಿಯಲ್ಲಿ ಕಾಂಗ್ರೆಸ್ ೧೧ ಮತ್ತು ಬಿಜೆಪಿ ೧೧ ವಾರ್ಡಗಳಲ್ಲಿ ಗೆಲುವು ಸಾಧಿಸಿದ್ದು ಅಚ್ಚರಿ ಎನ್ನುವಂತೆ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದು ನಿರ್ಣಾಯಕವಾಗಿದ್ದಾರೆ.
ನಾಮಪತ್ರ ಸಲ್ಲಿಸುವ, ಪರಶೀಲನೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಗಲಾಟೆಗೆ ಕಾರಣವಾಗಿತ್ತು. ಈ ಚುನಾವಣೆ ಮುಂದಿನ ವಿಧಾನಸಭಾ ಚುಮಾವಣೆ ದಿಕ್ಸೂಚಿ ಎಂದೇ ಹೇಳಲಾಗಿತ್ತು. ಇದರಲ್ಲಿ ಸದ್ಯಕ್ಕೆ ಡಿಸಿಸಿ ಅದ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದ್ದಾರೆ.
ಶಾಸಕ ಬಸವರಾಜ್ ದಡೆಸೂಗೂರ್ ಸೋಲಿನ ಕಹಿ ಕಾಣುವಂತಾಗಿದೆ.
ಕುಕನೂರು:ತೀವ್ರ ಜಿದ್ದಾಜಿಧ್ದಿಗೆ ಕಾರಣವಾಗಿದ್ದ ಕುಕನೂರ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಜಯದ ನಗು ಬೀರಿದರೆ ಸ್ವಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್ ಮುಖಭಂಗ ಅನುಭವಿಸಿದ್ದಾರೆ. ಕುಕನೂರು ಪಟ್ಟಣ ಪಂಚಾಯಿತಿಯ ೧೯ ವಾರ್ಡ್ ಗಳಲ್ಲಿ, ೧೦ ಕಾಂಗ್ರೆಸ್ ಹಾಗೂ ೯ ಬಿಜೆಪಿ ಸ್ಥಾನಗಳಲ್ಲಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಕೊನೆಯ ಕ್ಷಣದ ತನಕ ಬಿಜೆಪಿಯ ಗೆಲುವು ಖಚಿತ ಎಂದು ಹೇಳಲಾಗುತ್ತಿತ್ತು.ಆದರೆ ಬಿಜೆಪಿಯ ಘಟಾನುಘಟಿ ನಾಯಕರು ಸೋಲನ್ನಭವಿಸಿದ್ದಾರೆ. ಶಂಭೂ ಜೋಳದ ಸೇರಿದಂತೆ ಇತರರ ಸೋಲು ಕುಕನೂರ ಪಟ್ಟಣ ಪಂಚಾಯತ್ ಬಿಜೆಪಿ ಕೈ ತಪ್ಪಲು ಕಾರಣವಾಗಿದೆ.
ಚುನಾವಣೆಯ ಆರಂಭದೊಂದಿಗೆ ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಕ್ಷೇತ್ರದಲ್ಲಿ ಸೀರಿಯಸ್ ತೊಡಗಿಸಿಕೊಂಡಿದ್ದು ಗ್ರೌಂಡ ವರ್ಕ ಮಾಡಿದ್ದು ಕಾಂಗ್ರೆಸ್ ಗೆಲುವು ಸುಲಭವಾಗಿಸಿತು. ಸ್ವಲ್ಪ ನಿರ್ಲಕ್ಷ್ಯ ತೋರಿದ್ದರೂ ಬಿಜೆಪಿ ಮೇಲುಗೈ ಸಾಧಿಸುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ.
ತಾವರಗೇರಾ ಪಟ್ಟಣ ಪಂಚಾಯಿತಿಯ ೧೮ ವಾರ್ಡ್ ಗಳಲ್ಲಿ, ೮ ಕಾಂಗ್ರೆಸ್, ೭ ಬಿಜೆಪಿ, ೩ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿವೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!