ಜೀವ ಇದ್ದರೆ ಜೀವನ ಕಟ್ಟಿಕೊಳ್ಳಬಹುದು ಕರೋನ ಸಂಕಷ್ಟದ ಜನರಿಗೆ ಸಹಾಯ ಹಸ್ತ : ಬಾದರ್ಲಿ

ಮಾಸ್ಕ್ ಆಫ್ ಅಭಿಯಾನ ಜಾಗೃತಿಗೆ ಚಾಲನೆ
|ಪೌಂಡೇಶನ ವತಿಯಿಂದ ನಿರ್ಗತಿಕರಿಗೆ ಊಟ ಪೂರೈಕೆ
ಅಖಿಲ ವಾಣಿ ಸುದ್ದಿ
ಸಿಂಧನೂರು : ರಾಜ್ಯದಲ್ಲಿ ಕೋರೋನ ಸೋಂಕಿನ ಅಲೆ ದಿನದಿಂದ ದಿನಕ್ಕೆ ಅತಿ ವೇಗವಾಗಿ ಹರಡುತ್ತಲಿದೆ.ತಾಲೂಕಿನಲ್ಲಿ ಈಗಾಗಲೇ ನೂರಾರು ಜನರು ಸೋಂಕಿನ ಅಲೆಗೆ ತುತ್ತಾಗಿದ್ದಾರೆ. ಸೋಂಕಿನ ಅಲೆಯನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಸನಗೌಡ ಬಾದರ್ಲಿ ಪೌಂಡೇಶನ್ ವತಿಯಿಂದ ಮಾಸ್ಕ್ ಆಫ್ ಅಭಿಯಾನ ಜಾಗೃತಿಗೆ ಚಾಲನೆ ನೀಡಿ ನಮ್ಮ ಜೀವ ಇದ್ದರೆ ಜೀವನ ಕಟ್ಟಿಕೊಳ್ಳಬಹುದು.ಅದಕ್ಕೆ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕೋರೋನ ಸಂಕಷ್ಟದಲ್ಲಿರುವ ಜನರಿಗೆ ನಮ್ಮ ಬಸನಗೌಡ ಬಾದರ್ಲಿ ಪೌಂಡೇಶನ್ ಸದಾ ಸಹಾಯ ಹಸ್ತ ನೀಡಲಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು
ನಗರದ ಯುವ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿದೆ.ಆ ಸಮಯದಲ್ಲಿ ಜನರ ಬದುಕಿನ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ.ಸೋಂಕಿನ ಸಂಕಷ್ಟದ ಸಮಯದಲ್ಲಿ ಜನರು ಹಸಿವಿನಿಂದ ಬಳಲಬಾರದು.14ದಿನಗಳ ಲಾಕ್ ಡೌನ್ ಅವಧಿಯಲ್ಲಿ ನಮ್ಮ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಬಸನಗೌಡ ಬಾದರ್ಲಿ ಪೌಂಡೇಶನ್ ಮೂಲಕ ಅಂತಹ ಜನರಿಗೆ ಊಟದ ವ್ಯವಸ್ಥೆ ಮಾಡಲಿದ್ದಾರೆ. ನಗರ ಮತ್ತು ತಾಲೂಕಿನ ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆ ಮಾಡುತ್ತ ಕೊರೋನ ಸೋಂಕಿನ ಜಾಗೃತಿ ಮೂಡಿಸಲಾಗುತ್ತಿದೆ.ಜನರು ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರ ಬರಬೇಕು. ಹೊರ ಬರುವಾಗ ಜನರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು.ನಮ್ಮ ಜೀವ ಮತ್ತು ಜೀವನ ನಮ್ಮ ಜಾಗೃತಿಯಲ್ಲಿದೆ. ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಏನೇ ತೊಂದರೆಯಾದರೆ ನಮ್ಮ ಪೌಂಡೇಶನ್ ವತಿಯಿಂದ ಆರಂಭಿಸಲಾಗಿರುವ ಹೆಲ್ಪ್ ಲೈನ್ 08535 -22575.9663798999 ಹಾಗೂ 9986681999 ಈ ಫೋನ್ ನಂಬರಗಳಿಗೆ ಕರೆ ಮಾಡಿದರೆ ನಮ್ಮ ಪೌಂಡೇಶನ್ ವತಿಯಿಂದ ಅಗತ್ಯ ಸೇವೆ ಮತ್ತು ಸಹಾಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದೆ.ಆಕ್ಸಿಜನ್ ಕೊರತೆ ನಿರ್ವಹಣೆಗೆ ನಮ್ಮ ಪೌಂಡೇಶನ್ ವತಿಯಿಂದ ಜಂಬೋ ಸಿಲೆಂಡರ್ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದ್ದೇವೆ ಮತ್ತು ರೆಮ ಡೆಸಿವಿಯರ ಚುಚ್ಚುಮದ್ದು ಕೊರತೆಯನ್ನು ನಿವಾರಿಸಲು ಮುನ್ನೆಚ್ಚರಿಕೆ ವಹಿಸಲಾಗುವುದು. ಈ ಹಿಂದೆ ಕೂಡ ಕೊರೋನ್ ಸೋಂಕಿನ ಪ್ರಥಮ ಅಲೆಯ ಲಾಕ್ ಡೌನ್ ಸಮಯದಲ್ಲಿ ನಮ್ಮ ಬಸನಗೌಡ ಬಾದರ್ಲಿ ಪೌಂಡೇಶನ್ ನೇತೃತ್ವದಲ್ಲಿ ಕ್ಷೇತ್ರದ ಜನರಿಗೆ ಅನೇಕ ರೀತಿಯ ಸಹಾಯ ಸಹಕಾರಗಳನ್ನೂ ನೀಡಿದೆ. ಈ ಮುಂದೆ ಕೂಡ ನಮ್ಮ ಕ್ಷೇತ್ರದ ಜನರಿಗೆ ಹೆಚ್ಚಿನ ಸಹಾಯ ಸಹಕಾರ ಮಾಡಲಾಗುತ್ತಿದೆ. ನಮ್ಮ ಪೌಂಡೇಶನ್ ವತಿಯಿಂದ ಆಕ್ಸಿಜನ್ ಬ್ಯಾಂಕ್ ಮತ್ತು 30ರಿಂದ 40 ಬೆಡ್ಡಗಳ ಆಸ್ಪತ್ರೆಯನ್ನು ಪ್ರಾರಂಭ ಮಾಡಲು ಚಿಂತನೆ ನಡೆಸಿದೆ. ಕ್ಷೇತ್ರದ ಜನರ ಹಿತ ರಕ್ಷಣೆಗಾಗಿ ಹಾಗೂ ಜನರ ಪ್ರಾಣ ಉಳಿಸಲು ನಮ್ಮ ಆಸ್ತಿ ಮಾರಿಯಾದರು ಸೋಂಕಿತ ಜನರ ನೆರವಿಗೆ ಬರುತ್ತೇನೆ ಎಂದು ಹೇಳಿದರು
ಮುಂಜಾಗೃತ ಕ್ರಮಕ್ಕೆ ಶಾಸಕರು ನಿರ್ಲಕ್ಷ್ಯ : ತಾಲೂಕಿನಲ್ಲಿ ಕೋರೋನ ಸೋಂಕಿನ ಅಲೆಯು ಹೆಚ್ಚಾಗುತ್ತಲೇ ಇದೆ. ಕ್ಷೇತ್ರದ ಶಾಸಕ ವೆಂಕಟರಾವ ನಾಡಗೌಡ ಕಾಟಾಚಾರಕ್ಕೆ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮರೆಯಾಗಿದ್ದಾರೆ. ಸಭೆ ನೆಡೆಸಿದ ತಕ್ಷಣ ಸೋಂಕಿನ ಅಲೆ ಕಡಿಮೆ ಆಗೋದಿಲ್ಲ. ವೀಡಿಯೋ ಕಾನ್ಫರೆನ್ಸ್ ನಡೆಸಿದರೆ ಸಾಲದು. ಸಭೆಯಲ್ಲಿ ತಗೆದುಕೊಂಡಿರುವ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಬೇಕು. ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಶಾಸಕರೇ ಖುದ್ದಾಗಿ ಭೇಟಿ ನೀಡಿ ಸೋಂಕಿನ ತಡೆ ಜಾಗೃತಿ ಮೂಡಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಆಕ್ಸಿಜನ್. ವೆಂಟ ಲೆಟರ ಸೇರಿದಂತೆ ಅಗತ್ಯ ಚಿಕಿಸ್ತೆಗಳನ್ನು ಒದಗಿಸಬೇಕು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಡ ಕೋರೋನ ಸೋಂಕಿನ ಸೆಂಟರ ಗಳನ್ನೂ ಆರಂಭಿಸಬೇಕು ಎಂದು ತಾಲೂಕಿನ ಶಾಸಕರ ಆಡಳಿತದ ಕಾರ್ಯ ವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಎಸ್. ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರವಿ.ಗ್ರಾಮೀಣ ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷ ಪಕೀರಯ್ಯ ರಾಗಲಪರವಿ. ಯುವ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಖಾಜಾ ಹುಸೇನ ರೌಡಕುಂದ.ಯುವ ಕಾಂಗ್ರೆಸ್ ಮುಖಂಡ ಶಿವಕುಮಾರ್ ಜವಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!