ಜೂನ್ ೧೪ರವರೆಗೂ ಲಾಕ್‌ಡೌನ್ ವಿಸ್ತರಣೆ:೫೦೦ ಕೋಟಿ ಪ್ಯಾಕೇಜ್ ಘೋಷಿಸಿದ ಸಿಎಂ

ಜೂನ್ ೭ರ ನಂತರ ಮತ್ತೊಂದು ವಾರ ಲಾಕ್‌ಡೌನ್ ಘೋಷಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ನಿವಾರಣೆಗೆ ಲಾಕ್‌ಡೌನ್ ಘೋಷಿಸಿದ್ದೇವೆ. ಅದೇ ರೀತಿ ರಾಜ್ಯದಲ್ಲಿ ಜೂನ್ ೧೪ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು. ಜೂನ್ ೭ರ ನಂತರ ಮತ್ತೊಂದ ವಾರ ಲಾಕ್‌ಡೌನ್ ಮುಂದುವರಿಯುತ್ತದೆ ಎಂದು ತಿಳಿಸಿದರು. ಇನ್ನು ಎರಡನೇ ಹಂತದಲ್ಲಿ ೫೦೦ ಕೋಟಿ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ.
ಚಲನಚಿತ್ರ, ದೂರದರ್ಶನ ಕಲಾವಿದರಿಗೆ ತಲಾ ೩ ಸಾವಿರ ರೂಪಾಯಿ, ಅರ್ಚಕರು, ಅಡುಗೆ ಕೆಲಸಗಾರರಿಗೆ ತಲಾ ೩ ಸಾವಿರ ರೂಪಾಯಿ. ಆಶಾ ಕಾರ್ಯಕರ್ತೆಯರಿಗೂ ೩ ಸಾವಿರ ರೂಪಾಯಿ ಪರಿಹಾರ. ಅಂಗನವಾಡಿ ಕಾರ್ಯಕರ್ತೆಯರಿಗೂ ಮೂರು ಸಾವಿರ ರೂಪಾಯಿ ಅದೇ ರೀತಿ ಅಂಗನವಾಡಿ ಸಹಾಯಕಿಯರಿಗೆ ೨ ಸಾವಿರ ರೂಪಾಯಿ ಸೇರಿ ಇನ್ನಿತರರ ಅಸಂಘಟಿತ ಕಾರ್ಮಿಕರಿಗೂ ಸಿಎಂ ಇದೇ ವೇಳೆ ಪರಿಹಾರ ಘೋಷಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!