ಜೆಡಿಎಸ್ ನಿಯೋಜಿತ ಅಭ್ಯರ್ಥಿ
ವಿರೇಶ ಮಹಾಂತಯ್ಯನಮಠಗೆ ಸನ್ಮಾನ


ಕೊಪ್ಪಳ : ತಾಲೂಕಿನ ಮತ್ತೂರು ಗ್ರಾಮದ ಶ್ರೀದುರ್ಗಾದೇವಿ
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ
ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ
ವಿರೇಶ ಮಹಾಂತಯ್ಯನಮಠ ಅವರನ್ನು ಗ್ರಾಮದ
ಹಿರಿಯರು-ಯುವಕರು ಸನ್ಮಾನಿಸಿ ಗೌರವಿಸಿದರು.
ನಂತರ ಮತ್ತೂರು ಗ್ರಾಮದ ಸಮಸ್ಯೆಗಳು,
ಅಭಿವೃದ್ಧಿಯ ಬಗ್ಗೆ ಗ್ರಾಮದ ಗುರು-ಹಿರಿಯರು ಚರ್ಚಿಸಿ
ಗ್ರಾಮದ ಶ್ರೀದುರ್ಗಾದೇವಿ ಆಶೀರ್ವಾದ ನಿಮಗೆ ಇರಲಿ ಶುಭಾವಾಗಲಿ
ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ದೇವಪ್ಪ ಚೌಡಕಿ,
ರುದ್ರಯ್ಯ ಹಿರೇಮಠ,ಯಲ್ಲಪ್ಪ ಮಜ್ಜಿಗಿ, ಶರಣಯ್ಯ
ಗುರುವಿನ್, ಕೊಟ್ರೇಶ ಹೊಳೆಯಾಚಿ, ಅಂದಪ್ಪ ಕೆ, ಈರಪ್ಪ ಎಚ್,
ನಿಂಗಪ್ಪ ಮಜ್ಜಿಗಿ, ಯಲ್ಲಪ್ಪ ಕೆ, ಬಸವಂತಪ್ಪ, ಮುದುಕಪ್ಪ,
ಲಾಲ್‌ಸಾಬ ನಧಾಫ್, ವಿನಾಯಪ್ಪ ಕುರ್ನಾಲ್, ಸುರೇಶ ಮಜ್ಜಿಗಿ
ಸೇರಿದಂತೆ ಗ್ರಾಮದ ಯುವಕರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!