ಜ್ಞಾನದ ಬೆಳಕು ಡಾ.ಬಿ.ಆರ್ ಅಂಬೇಡ್ಕರ್: ಎಮ್.ಬಸವರಾಜ
ಅಖಿಲ ವಾಣಿ ಸುದ್ದಿ
ಕಾರಟಗಿ : ಡಾ.ಬಿ.ಆರ್ ಅಂಬೇಡ್ಕರ್ ಅವರು ಒಂದು ಜಾತಿಗೆ ಮೀಸಲಾದ ವ್ಯಕ್ತಿಯಲ್ಲ ಅವರು ಮಹಾನ್ ವ್ಯಕ್ತಿ, ಪ್ರತಿಯೊಬ್ಬ ಜಾತಿಯ ವ್ಯಕ್ತಿಯು ಗೌರವಿಸುವಂಥ ಶಕ್ತಿ ಜ್ಞಾನ ಅವರಲ್ಲಿದೆ. ಕಂಡ ದೇವರನ್ನು ಪೂಜಿಸುವ ಬದಲು ಇಂತಹ ಮಹಾತ್ಮರನ್ನು ಪೂಜಿಸಬೇಕು ಎಂದು ಕೃಷಿ ಕೂಲಿ ಕಾರ್ಮಿಕ ಸಂಘದ ಮುಖಂಡರಾದ ಎಮ್.ಬಸವರಾಜ ತಿಳಿಸಿದರು.
ತಾಲೂಕಿನ ಸಮೀಪದ ಮರುಕುಂಬಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ೧೩೦ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಾಬಾಸಾಹೇಬರಿಂದ ದೇಶಕ್ಕೆ ಸೂಕ್ತ ಸಂವಿಧಾನ ಬಂದಿದೆ. ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧವಾಗಿ ನಡೆಯಬೇಕು. ಬಾಬಾಸಾಹೇಬರ ಕನಸುಗಳನ್ನು ನನಸು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕ್ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿಯ ಸದಸ್ಯರಾದ ಜಗದೀಶಪ್ಪ, ಮುಖಂಡರುಗಳಾದ ಬಸವರಾಜ ಭೋವಿ, ಗಂಗಾಧರಸ್ವಾಮಿ, ಬಸಯ್ಯಸ್ವಾಮಿ, ವೀರೇಶ್, ಯಮನೂರ, ಹುಲುಗಪ್ಪ ದಳಪತಿ ಬಸವರಾಜ್, ತಳವಾರ್, ಆಶಾಸಾಬ್ ಕಂದಗಲ್, ಮಹಿಬೂಬ್, ಹನುಮೇಶ್, ದುರ್ಗೇಶ್, ರಾಜಾಸಾಬ್, ಇತರರು ಇದ್ದರು.
