ಟಿಪ್ಪು ಜಯಂತಿ ಖಾಸಗಿಯಾಗಿ ಆಚರಣೆಗೆ ನಿರ್ಧಾರ

ಕೊಪ್ಪಳ : ಶೇರ್ ಏ ಮೈಸೂರು ಹಜರತ್‌ಟಿಪ್ಪು ಸುಲ್ತಾನ್ ಶಿಕ್ಷಣ ಮತ್ತುಕಲ್ಯಾಣ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬರುವಡಿಸೆಂಬರ್ ೧೮ರ ಶನಿವಾರದಂದು ನಮ್ಮಕಮಿಟಿ ವತಿಯಿಂದಟಿಪ್ಪು ಸುಲ್ತಾನ್‌ರವರಜಯಂತಿಕಾರ್ಯಕ್ರಮಅದ್ಧೂರಿಯಾಗಿಆಚರಣೆ ಮಾಡಲು ನಿರ್ಧರಿಸಲಾಗಿದೆಎಂದು ಸೊಸೈಟಿಯಅಧ್ಯಕ್ಷಎಂ.ಡಿ.ಜಿಲಾನ್‌ಕಿಲ್ಲೇದಾರ್ (ಮೈಲೈಕ್) ಹೇಳಿದರು.
ಅವರು ಸೋಮವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದಅವರು, ಕಳೆದ ೨೦೧೧ರ ನೇ ಸಾಲಿನಲ್ಲಿ ನಮ್ಮಕಮಿಟಿ ವತಿಯಿಂದ ಸಮಾಜದ ಮತ್ತು ಪಂಚಕಮಿಟಿಯ ಸಹಯೋಗದೊಂದಿಗೆ ನಿರಂತರವಾಗಿ ಪ್ರತಿವರ್ಷಟಿಪ್ಪು ಸುಲ್ತಾನ್‌ಜಯಂತಿಆಚರಣೆ ಮಾಡುತ್ತಾ ಬಂದಿದ್ದುತದನಂತರ ಅಂದಿನ ರಾಜ್ಯ ಸರ್ಕಾರಟಿಪ್ಪು ಸುಲ್ತಾನ್‌ಜಯಂತಿಘೋಷಣೆ ಮಾಡಿಆಚರಿಸುತ್ತಾ ಬಂದಿರುವ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದಆಚರಣೆಕೈಬಿಟ್ಟು ಸರ್ಕಾರಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದೆವು.
ಆದರೆ ಈಗಿನ ರಾಜ್ಯ ಸರ್ಕಾರಟಿಪ್ಪು ಸುಲ್ತಾನ್‌ಜಯಂತಿ ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಕಳೆದ ೨ ವರ್ಷ ಮಹಾಮಾರಿಕರೋನಾ ಹಿನ್ನಲೆಯಲ್ಲಿಜಯಂತಿಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದ್ದು ಈ ವರ್ಷ ನವೆಂಬರ್ ಬದಲಾಗಿ ಬರುವಡಿಸೆಂಬರ್ ೧೮ ರಂದುಟಿಪ್ಪು ಸುಲ್ತಾನ್‌ಜಯಂತಿಯನ್ನುಎಲ್ಲರ ಸಹಯೋಗದೊಂದಿಗೆಅದ್ಧೂರಿಯಾಗಿಆಚರಿಸಲಾಗುವುದುಎಂದುಸೊಸೈಟಿಯಅಧ್ಯಕ್ಷಎಂ.ಡಿ.ಜಿಲಾನ್‌ಕಿಲ್ಲೇದಾರ್ (ಮೈಲೈಕ್) ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೈಯದ್ ಸಮೀರ್ ಹುಸೇನಿ ಇತರ ಪದಾಧಿಕಾರಿಗಳಾದ ಸೈಯದ್ ನಾಸೀರ್‌ಕಂಠಿ, ಮಹೆಬೂಬ್ ಮಚ್ಚಿ, ಫುರಖಾನ್‌ಅಹ್ಮದ್‌ದಾಗದಾರ್ ಮತ್ತು ಪೀರ್‌ಸಾಬ್ ಬೆಳಗಟ್ಟಿ ಸೇರಿದಂತೆಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!